Gooseberry : ನೆಲ್ಲಿಕಾಯಿಯ ಆರೋಗ್ಯ ಪ್ರಯೋಜನಗಳು

ನೆಲ್ಲಿಕಾಯಿಯನ್ನು ಆಮ್ಲಾ ಎಂದು ಕರೆಯಲಾಗುತ್ತದೆ. ನೆಲ್ಲಿಕಾಯಿ (Gooseberry) ಹೆಚ್ಚಿನ ವಿಟಮಿನ್ ಸಿ ಅಂಶ ಮತ್ತು ಪ್ರಬಲವಾದ ಉತ್ಕರ್ಷಣ ನಿರೋಧಕ ಗುಣಲಕ್ಷಣಗಳಿಗೆ ಹೆಸರುವಾಸಿಯಾದ ಸಣ್ಣ, ಹಸಿರು ಹಣ್ಣು. ಇದು ಅಸಾಧಾರಣವಾಗಿ ಆರೋಗ್ಯಕರವಾಗಿದ್ದು,ಜೀರ್ಣಕ್ರಿಯೆಯನ್ನು ಸುಧಾರಿಸುವುದು, ರೋಗನಿರೋಧಕ ಶಕ್ತಿಯನ್ನು…

Gooseberry Health benefits

ನೆಲ್ಲಿಕಾಯಿಯನ್ನು ಆಮ್ಲಾ ಎಂದು ಕರೆಯಲಾಗುತ್ತದೆ. ನೆಲ್ಲಿಕಾಯಿ (Gooseberry) ಹೆಚ್ಚಿನ ವಿಟಮಿನ್ ಸಿ ಅಂಶ ಮತ್ತು ಪ್ರಬಲವಾದ ಉತ್ಕರ್ಷಣ ನಿರೋಧಕ ಗುಣಲಕ್ಷಣಗಳಿಗೆ ಹೆಸರುವಾಸಿಯಾದ ಸಣ್ಣ, ಹಸಿರು ಹಣ್ಣು. ಇದು ಅಸಾಧಾರಣವಾಗಿ ಆರೋಗ್ಯಕರವಾಗಿದ್ದು,ಜೀರ್ಣಕ್ರಿಯೆಯನ್ನು ಸುಧಾರಿಸುವುದು, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದು, ರಕ್ತದ ಓತ್ತಡವನ್ನು ನಿಯಂತ್ರಿಸುವುದಲ್ಲದೆ ಚರ್ಮದ ಆರೋಗ್ಯವನ್ನು ಸಹ ಹೆಚ್ಚಿಸುವಂತಹ ಹಲವಾರು ಪ್ರಯೋಜನಗಳನ್ನು ನೀಡುತ್ತದೆ.

ಇದನ್ನೂ ಓದಿ: Cupping therapy : ಕಪ್ಪಿಂಗ್ ಥೆರಪಿ ರಹಸ್ಯವೇನು ? ಯಾವ ಸಮಸ್ಯೆಗಳನ್ನು ಗುಣಪಡಿಸಲಾಗುತ್ತದೆ ?

Gooseberry Health benefits – ನೆಲ್ಲಿಕಾಯಿಯ ಆರೋಗ್ಯ ಪ್ರಯೋಜನಗಳು

  1. ರೋಗನಿರೋಧಕ ಶಕ್ತಿ ವೃದ್ಧಿ
  2. ಉತ್ತಮ ಜೀರ್ಣಕ್ರಿಯೆ
  3. ಚರ್ಮದ ಆರೋಗ್ಯ
  4. ಕೂದಲಿನ ಆರೋಗ್ಯ
  5. ರಕ್ತದೊತ್ತಡ ನಿಯಂತ್ರಣ

1. ನೆಲ್ಲಿಕಾಯಿಯ ಸೇವನೆಯಿಂದ ರೋಗನಿರೋಧಕ ಶಕ್ತಿ ವೃದ್ಧಿ – Increase immunity by consuming gooseberry

ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಹೇರಳವಾಗಿದ್ದು, ಇದು ಶರೀರದಲ್ಲಿ ಆ್ಯಂಟಿ ಆಕ್ಸಿಡೆಂಟ್ ಆಗಿ ಕೆಲಸಮಾಡಿ, ಇಮ್ಯುನಿಟಿಯನ್ನು ಬೆಂಬಲಿಸುತ್ತದೆ. ವಿಟಮಿನ್ ಸಿ ದೇಹದ ಶ್ವೇತ ರಕ್ತಕಣಗಳ ಉತ್ಪಾದನೆಯನ್ನು ಹೆಚ್ಚಿಸುವ ಮೂಲಕ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ದೇಹವನ್ನು ರಕ್ಷಿಸುತ್ತದೆ.

Vijayaprabha Mobile App free

ಇದನ್ನೂ ಓದಿ: ನಿಮ್ಮ ರಕ್ತದ ಗುಂಪು ಯಾವುದು ? ರಕ್ತದ ಗುಂಪು ಮತ್ತು ಹೃದಯ ಕಾಯಿಲೆ

2. ನೆಲ್ಲಿಕಾಯಿಯ ಸೇವನೆಯಿಂದ ಉತ್ತಮ ಜೀರ್ಣಕ್ರಿಯೆ – Good digestion by consuming gooseberry

ನೆಲ್ಲಿಕಾಯಿಯಲ್ಲಿರುವ ಫೈಬ‌ರ್ ಅಂಶವು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಇದು ಆಹಾರವನ್ನು ಸರಿಯಾಗಿ ಜೀರ್ಣಿಸಲು ಸಹಾಯ ಮಾಡುತ್ತದೆ. ಅಲ್ಲದೇ ದೇಹದಲ್ಲಿನ ವಿಷಕಾರಿ ಪದಾರ್ಥಗಳನ್ನು ಹೊರಹಾಕುವ ನೆಲ್ಲಿಕಾಯಿ ಯಕೃತ್ ಅನ್ನು ರಕ್ಷಿಸಿ ಇದರ ಕಾರ್ಯಗಳನ್ನು ಬೆಂಬಲಿಸುತ್ತದೆ.

3. ನೆಲ್ಲಿಕಾಯಿಯ ಸೇವನೆಯಿಂದ ಚರ್ಮದ ಆರೋಗ್ಯ – Skin health with the consumption of gooseberry

ನೆಲ್ಲಿಕಾಯಿಯಲ್ಲಿ ಇರುವ ಆ್ಯಂಟಿ ಆಕ್ಸಿಡೆಂಟ್ಸ್‌ ಚರ್ಮವನ್ನು ಸೌಂದರ್ಯವನ್ನಾಗಿಸುತ್ತದೆ. ಇದು ಮುಪ್ಪಿನ ಲಕ್ಷಣಗಳನ್ನು ತಡೆಯುತ್ತದೆ, ಚರ್ಮಕ್ಕೆ ಉಂಟಾಗುವ ಹಾನಿಯನ್ನು ಕಡಿಮೆ ಮಾಡುತ್ತದೆ. ಜೊತೆಗೆ ನೆಲ್ಲಿಕಾಯಿಯಲ್ಲಿರುವ ವಿಟಮಿನ್ ಎ, ಕಣ್ಣಿನ ದೃಷ್ಟಿಯನ್ನು ಉತ್ತಮಗೊಳಿಸುತ್ತದೆ. ಇದು ವಯಸ್ಸಿನಿಂದ ಉಂಟಾಗುವ ದೃಷ್ಟಿ ಸಂಬಂಧಿ ಸಮಸ್ಯೆಗಳಿಗೆ ತಡೆಯೊಡ್ಡುತ್ತದೆ.

ಇದನ್ನೂ ಓದಿ: ನಮ್ಮ ಬಾಡಿ ಫ್ಯಾಕ್ಟ್ ಬಗ್ಗೆ ತಿಳಿಯದ ಕುತೂಹಲಕಾರಿ ಸಂಗತಿಗಳು

4. ನೆಲ್ಲಿಕಾಯಿಯ ಸೇವನೆಯಿಂದ ಕೂದಲಿನ ಆರೋಗ್ಯ – Health of hair by consumption of gooseberry

ನೆಲ್ಲಿಕಾಯಿ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ, ಕೂದಲು ಬಿಳಿಯಾಗುವುದನ್ನು ತಡೆಯುತ್ತದೆ, ಹಾಗು ಕೂದಲಿನ ಉದುರುವಿಕೆಯನ್ನು ಕಡಿಮೆ ಮಾಡುತ್ತದೆ. ನೆಲ್ಲಿಕಾಯಿಯ ಎಣ್ಣೆ ಬಳಸಬಹುದು ಅಥವಾ ಇದರ ಪೇಸ್ಟ್ ತಯಾರಿಸಿ ಹೇರ್ ಪ್ಯಾಕ್ ರೂಪದಲ್ಲಿಯೂ ಬಳಸಿ ಕೂದಲಿನ ಆರೋಗ್ಯವನ್ನು ಕಾಪಾಡಬಹುದು.

5. ನೆಲ್ಲಿಕಾಯಿಯ ಸೇವನೆಯಿಂದ ರಕ್ತದೊತ್ತಡ ನಿಯಂತ್ರಣ – Blood pressure control by consumption of gooseberry

ನೆಲ್ಲಿಕಾಯಿ ಹೃದಯದ ಆರೋಗ್ಯ ಕಾಪಾಡಲು ಸಹಕಾರಿಯಾಗಿದೆ. ಇದು ಕೆಟ್ಟ ಕೊಲೆಸ್ಟ್ರಾಲ್‌ ಅನ್ನು ಕಡಿಮೆ ಮಾಡುತ್ತದೆ ಮತ್ತು ಒಳ್ಳೆಯ ಕೊಲೆಸ್ಟ್ರಾಲ್‌ ಪ್ರಮಾಣವನ್ನು ಹೆಚ್ಚಿಸುತ್ತದೆ. ಇದರಿಂದ ಹೃದಯ ಸಂಬಂಧಿ ಸಮಸ್ಯೆಗಳನ್ನು ತಡೆಯುತ್ತದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.