ಕೇಸರಿ ಬಣ್ಣದಲ್ಲಿ ಕಂಡು ಬರುವ ಕ್ಯಾರೆಟ್‌ನಲ್ಲಿ ಅಪಾರ ಪ್ರಮಾಣದ ವಿಟಮಿನ್ಸ್, ಖನಿಜಾಂಶಗಳು ಕಂಡು ಬರುವುದರಿಂದ, ಇದೊಂದು ಆರೋಗ್ಯಕಾರಿ ತರಕಾರಿ.
ತರಕಾರಿ ಸಿಗುವ ಮಾರ್ಕೆಟ್‌ಗೆ ಹೋದಾಗ, ರಾಶಿ ಹಾಕಿರುವ ಹಸಿರೆಲೆ ತರಕಾರಿಗಳು ಕೈ ಬೀಸಿ ಕರೆಯುತ್ತಿರುತ್ತವೆ! ಇವುಗಳಲ್ಲಿ ತೆಳ್ಳಗೆ ಬೆಳ್ಳಗೆ ಕಾಣುವ ತರಕಾರಿಗಳು ಒಂದು ಕಡೆಯಾದರೆ, ದಷ್ಟಪುಷ್ಟ ಗಾತ್ರದ, ಒಂದಿಷ್ಟು ತರಕಾರಿಗಳು ಇನ್ನೊಂದು ಕಡೆ ಕಾಣಲು ಸಿಗುತ್ತದೆ.
ಇವೆಲ್ಲಾದರ ಮಧ್ಯೆ ಕಿತ್ತಳೆ ಬಣ್ಣದಲ್ಲಿ ಕಾಣಿಸಿಕೊಳ್ಳುವ ಹಾಗೂ ಎಲ್ಲರನ್ನೂ ಆಕರ್ಷಿಸುವ ಜೊತೆಗೆ ಆರೋ ಗ್ಯಕ್ಕೆ ದುಪ್ಪಟ್ಟು ಪ್ರಯೋಜನಗಳನ್ನು ಒದಗಿ ಸುವ, ಆರೋಗ್ಯಕಾರಿ ತರಕಾರಿ ಎಂದರೆ ಅದು ಕ್ಯಾರೆಟ್! ಬನ್ನಿ ಇಂದಿನ ಲೇಖನದಲ್ಲಿ ಕ್ಯಾರೆಟ್‌ನಿಂದ ಸಿಗುವ ಆರೋಗ್ಯ ಪ್ರಯೋಜನಗಳ ಬಗ್ಗೆ ನೋಡುತ್ತಾ ಹೋಗೋಣ..
ಕ್ಯಾರೆಟ್‌ನಲ್ಲಿ ಇರುವಂತಹ ಪೋಷಕಾಂಶಗಳು
ಕ್ಯಾರೆಟ್‌ನಲ್ಲಿ ಕಂಡು ಬರುವ ಪೋಷಕಾಂಶಗಳ ಬಗ್ಗೆ ಹೇಳು ವುದಾದರೆ, ಬೆಟಾ ಕ್ಯಾರೋಟಿನ್ ಹಾಗೂ ವಿಟಮಿನ್ ಎ ಅಂಶ ಅಧಿಕ ಪ್ರಮಾಣದಲ್ಲಿ ಕಂಡು ಬರುತ್ತದೆ. ಇದರ ಜೊತೆಗೆ ವಿಟಮಿನ್ ಇ, ವಿಟಮಿನ್ ಸಿ, ವಿಟಮಿನ್ ಬಿ8, ವಿಟಮಿನ್ ಕೆ, ನಾರಿನಾಂಶ, ಕಬ್ಬಿಣಾಂಶ, ಕ್ಯಾಲ್ಸಿಯಂ, ಪೋಸ್ಪರಸ್ ಹಾಗೂ ಪೊಟ್ಯಾಶಿಯಮ್ ಅಂಶವು ಕೂಡ ಉನ್ನತ ಮಟ್ಟದಲ್ಲಿ ದೊರೆಯುತ್ತದೆ.
ಈಗಾಗಲೇ ಕಣ್ಣಿನ ಸಮಸ್ಯೆ ಇರುವವರು
ಕ್ಯಾರೆಟ್‌ನಲ್ಲಿ ವಿಟಮಿನ್ ಎ ಅಂಶ ಅಪಾರ ಪ್ರಮಾಣ ದಲ್ಲಿ ಕಂಡು ಬರುತ್ತದೆ. ಜೊತೆಗೆ ಬೀಟಾ ಕ್ಯಾರೋ ಟಿನ್ ಎಂಬ ಪ್ರಬಲ ಆಂಟಿ ಆಕ್ಸಿಡೆಂಟ್ ಅಂಶಗಳು ಕೂಡ ಈ ತರಕಾರಿಯಲ್ಲಿ ಉನ್ನತ ಮಟ್ಟದಲ್ಲಿ ಕಂಡು ಬರುತ್ತದೆ.
ಹೀಗಾಗಿ ದೈನಂದಿನ ಆಹಾರ ಕ್ರಮದಲ್ಲಿ ಕ್ಯಾರೆಟ್ ಅನ್ನು ಸೇರಿಸಿ ಕೊಂಡರೆ ಅಥವಾ ಈ ತರಕಾರಿಯಿಂದ ಮಾಡಿದ ಜ್ಯೂಸ್ ಅನ್ನು ಕುಡಿದರೆ, ಕಣ್ಣಿಗೆ ಸಂಬಂಧ ಪಟ್ಟ ಸಮಸ್ಯೆಗಳು ದೂರವಾಗುವುದು ಮಾತ್ರವಲ್ಲದೆ, ಕಣ್ಣಿನ ಆರೋಗ್ಯವು ಕೂಡ ಚೆನ್ನಾಗಿರುತ್ತದೆ. ಪ್ರಮುಖ ವಾಗಿ ಕಣ್ಣಿನ ಪೊರೆಯ ಸಮಸ್ಯೆ, ರಾತ್ರಿ ಕಾಡುವ ಕುರುಡು ಸಮಸ್ಯೆ ಇಲ್ಲವಾಗುತ್ತದೆ.
ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು
ಹೃದಯದ ಆರೋಗ್ಯವನ್ನು ಅತ್ಯುತ್ತಮವಾಗಿ ಕಾಪಾಡಿಕೊಳ್ಳಲು, ದೈನಂದಿನ ಆಹಾರ ಪದ್ಧತಿ ಯಲ್ಲಿ ಕ್ಯಾರೆಟ್ ಅನ್ನು ಸೇರಿಸಿಕೊಂಡರೆ ಒಳ್ಳೆಯದು.
ಇಲ್ಲಾಂದ್ರೆ ಪ್ರತಿ ದಿನ ಒಂದು ಲೋಟ ಕ್ಯಾರೆಟ್ ಜ್ಯೂಸ್ ಸೇವನೆ ಮಾಡುವುದು ಒಳ್ಳೆಯದು. ಇದರಿಂದ ಹೃದಯ ಬಡಿತ ನಿಯಂತ್ರಣವಾಗಿ, ರಕ್ತದೊತ್ತಡ ದಲ್ಲಿಯೂ ಕೂಡ ಏರುಪೇರಾಗದಂತೆ ತಡೆಯಲು ನೆರವಾಗುತ್ತದೆ. ಇದಕ್ಕೆಲ್ಲಾ ಪ್ರಮುಖ ಕಾರಣ, ಈ ತರಕಾರಿಯಲ್ಲಿ ಕಂಡು ಬರುವ ಪೊಟ್ಯಾಶಿಯಮ್ ಅಂಶ ಎಂದು ಹೇಳಬಹುದು.
ಸಣ್ಣ ವಯಸ್ಸಿನಲ್ಲಿ ಮುಖದ ಮೇಲೆ ನೆರಿಗೆ ಕಾಣಿಸುವ ಸಮಸ್ಯೆ ಇದ್ದವರಿಗೆ
ಕ್ಯಾರೆಟ್‌ನಲ್ಲಿ ಉನ್ನತ ಮಟ್ಟದ ವಿಟಮಿನ್ ಸಿ ಅಂಶ ಕಂಡು ಬರುವುದರಿಂದ, ಇವು ತ್ವಚೆಯ ಸೌಂದ ರ್ಯವನ್ನು ಹೆಚ್ಚಿಸಲು ನೆರವಾಗುವುದು.
ಪ್ರಮುಖವಾಗಿ ಸಣ್ಣ ವಯಸ್ಸಿನಲ್ಲಿ ಮುಖದಲ್ಲಿ ಕಾಣಿಸುವ ನೆರಿಗೆ ಮೂಡುವ ಸಮಸ್ಯೆಯನ್ನು ಅಥವಾ ವಯಸ್ಸಾಗುವಿಕೆ ಪ್ರಕ್ರಿಯೆಯನ್ನು ದೂರ ಮಾಡಲು ನೆರವಾಗುತ್ತದೆ.
ಪ್ರಮುಖವಾಗಿ ಈ ತರಕಾರಿಯಲ್ಲಿ ಕಂಡು ಬರುವ ಪ್ರಬಲ ಬೀಟಾ ಕ್ಯಾರೋಟಿನ್ ಆಂಟಿ ಆಕ್ಸಿಡೆಂಟ್ ಅಂಶವು ಚರ್ಮದ ಕೋಶಗಳಿಗೆ ಹಾನಿ ಆಗದಂತೆ ತಡೆಯುವುದು ಹಾಗೂ ತ್ವಚೆಗೆ ಯಾವುದೇ ಸಮಸ್ಯೆ ಗಳು ಎದುರಾಗದಂತೆ ನೋಡಿಕೊಂಡು, ಮುಖದ ಅಂದವನ್ನು ಹೆಚ್ಚಿಸಲು ನೆರವಾಗುವುದು.
ರೋಗ ನಿರೋಧಕ ಶಕ್ತಿ ಹೆಚ್ಚಿಸಲು
ಆರೋಗ್ಯ ಚೆನ್ನಾಗಿ ಇರಬೇಕು ಎಂದರೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ಬಲವಾಗಿರಬೇಕು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ದುರ್ಬಲ ರೋಗ ನಿರೋಧಕ ಶಕ್ತಿ ಇದ್ದವರಿಗೆ ಸಣ್ಣ ಪುಟ್ಟ ಕಾಯಿಲೆಗಳು ಬಂದರೂ ಆಸ್ಪತ್ರೆಗೆ ಸೇರುವಂತೆ ಮಾಡಿಬಿಡುತ್ತವೆ!
ಹೀಗಾಗಿ ಆಂತರಿಕವಾಗಿ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಾಗಬೇಕೆಂದರೆ, ವಿಟಮಿನ್ ಸಿ ಪ್ರಮಾಣ ಹೆಚ್ಚಾಗಿ ಕಂಡುಬರುವ, ಆಹಾರಗಳನ್ನು ಸೇವನೆ ಮಾಡಬೇಕಾಗುತ್ತದೆ. ಇದಕ್ಕೆ ಒಂದು ಒಳ್ಳೆಯ ಉದಾ ಹರಣೆ ಎಂದರೆ ಕ್ಯಾರೆಟ್. ಹೀಗಾಗಿ ಈ ತರಕಾರಿಯನ್ನು ಆಹಾರಪದ್ಧತಿಯಲ್ಲಿ ಸೇರಿಸಿಕೊಂಡರೆ ತುಂಬಾನೇ ಒಳ್ಳೆಯದು.
ಕ್ಯಾನ್ಸರ್‌ನಂತಹ ಕಾಯಿಲೆಯನ್ನು ದೂರವಿರಿಸುತ್ತದೆ
ಮೊದಲೇ ಹೇಳಿದ ಹಾಗೆ ಕ್ಯಾರೆಟ್ ತನ್ನಲ್ಲಿ ಅಪಾರ ಪ್ರಮಾಣದ ವಿಟಮಿನ್ಸ್ ಅಂಶಗಳು ಹಾಗೂ ಪ್ರಬಲ ಬೀಟಾ ಕ್ಯಾರೋಟಿನ್ ಆಂಟಿ ಆಕ್ಸಿಡೆಂಟ್ ಅಂಶಗಳು ಕಂಡು ಬರುವುದರಿಂದ, ಇದು ಫ್ರೀ ರಾಡಿಕಲ್ ಗಳಿಂದ ಉಂಟಾಗುವ ಆಕ್ಸಿಡೇಟಿವ್ ಒತ್ತಡವನ್ನು ತಡೆಯು ತ್ತದೆ.
ಅಷ್ಟೇ ಅಲ್ಲದೆ ದೇಹವನ್ನು ಕ್ಯಾನ್ಸರ್ ಕಾರಕ ಜೀವ ಕೋಶಗಳು ಕಂಡುಬರದಂತೆ ತಡೆಯುತ್ತದೆ. ವಿಶೇಷ ವಾಗಿ ಸ್ತನ ಕ್ಯಾನ್ಸರ್, ಶ್ವಾಸಕೋಶದ ಕ್ಯಾನ್ಸರ್ ಹಾಗೂ ಕರುಳಿನ ಕ್ಯಾನ್ಸರ್ ನಂತಹ ಮಾರಕ ಕಾಯಿ ಲೆಗಳನ್ನು ತಡೆಯುತ್ತದೆ ಎಂದು ಆರೋಗ್ಯ ತಜ್ಞರಾದ ಲವ್ನೀತ್ ಬಾತ್ರಾ ಅವರು ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ.