Martin Cinema : ನಾಯಕ ದ್ರುವ ಸರ್ಜಾ (Druwa Sarja) ಅಭಿನಯದ ಬಹುನಿರೀಕ್ಷಿತ ಮಾರ್ಟಿನ್ ಸಿನಿಮಾ (Martin Cinema) ತೆರೆ ಕಾಣಲು ಇನ್ನು ಕೇವಲ 7ದಿನಗಳು ಬಾಕಿದ್ದು, ಸಾಮಾಜಿಕ ಜಾಲತಾಣ ಎಕ್ಸ್.ಕಾಂನಲ್ಲಿ ಟ್ರೆಂಡಿಂಗ್ ಸೃಷ್ಟಿಸಿದೆ.
ಚಿತ್ರದ ನಿರ್ಮಾಪಕ ಹಾಗೂ ನಿರ್ದೇಶಕರ ನಡುವೆ ಜಗಳ ಏರ್ಪಪಟ್ಟಿದ್ದು, ನಿರ್ದೇಶಕ ಸಿನಿಮಾ ಪ್ರದರ್ಶನಕ್ಕೆ ತಡೆ ಕೋರಿ ನ್ಯಾಯಾಯಲದ ಮೆಟ್ಟಿಲೇರಿದ್ದು, ಈ ಅಡೆತಡೆಗಳ ನಡುವೆ ಚಿತ್ರ ತಂಡ ಮಾರ್ಟಿನ್ ಸಿನಿಮಾ ಅದ್ಧೂರಿ ಬಿಡುಗಡೆಗೆ ದಿನಾಂಕ ನಿಗದಿ ಮಾಡಿದೆ. ಜತೆಗೆ ಸಾಮಾಜಿಕ ಜಾಲತಾಣ ಎಕ್ಸ್.ಕಾಂನಲ್ಲಿ ಮಾರ್ಟಿನ್ ಸಿನಿಮಾ ಟ್ರೆಂಡಿಂಗ್ ಸೃಷ್ಟಿಸಿದೆ. #ಮಾರ್ಟಿನ್‌ದಿಸಿನಿಮಾ (#MartinTheMovie) ಎಂಬ ಟ್ಯಾಗ್‌ನೊಂದಗೆ ಅಭಿಮಾನಿಗಳು ಸಿನಿಮಾ ಕುರಿತು ಪೋಸ್ಟ್ ಹಾಕುತ್ತಿದ್ದು, ಟ್ರೆಂಡಿಂಗ್‌ಗೆ ಕಾರಣವಾಗಿದೆ.
Martin censored with U/A 💥 October 11th theatrical release 💥
ಮಾರ್ಟಿನ್ – మార్టిన్ – மார்ட்டின் – മാർട്ടിൻ – मार्टिन – মার্টিন – مارتن – マーティン – 马丁 – 남자 이름 – Martín – Мартин – Martin
🔥THE GLORY OF INDIAN CINEMA 🔥 #DhruvaSarja #MartinTheMovie #AnthemOfMartin pic.twitter.com/U50l5yYk1n
— MARTIN (@Martinthemoviee) October 4, 2024
ಇದನ್ನೂ ಓದಿ: ನಾಗಚೈತನ್ಯ-ಸಮಂತಾ ವಿಚ್ಛೇದನಕ್ಕೆ ಕೆಟಿಆರ್ ಕಾರಣ ವಿವಾದ : ಸಮಂತಾ, ಎನ್‌ಟಿಆರ್, ನಾಗಾರ್ಜುನ ಆಕ್ರೋಶ!
Martin Cinema : ದ್ರುವ ಸರ್ಜಾಗೆ ಬಹುಪರಾಕ್ ಹೇಳಿದ ಅಪ್ಪು ಅಭಿಮಾನಿಗಳು

ಇನ್ನು ಬಹು ನಿರೀಕ್ಷಿತ ಮಾರ್ಟಿನ್ ಸಿನಿಮಾಗೆ ಅಪ್ಪು (ಖ್ಯಾತ ನಟ ಪುನಿತ್ ರಾಜಕುಮಾರ್) ಹಾಗೂ ಶಿವರಾಜುಕುಮಾರ್ ಅಭಿಮಾನಿಗಳು ಶುಭಾಶಯಗಳ ಮಹಾಪೂರ ಹರಿಸಿದ್ದು, ದ್ರುವ ಸರ್ಜಾಗೆ ಬಹುಪರಾಕ್ ಹೇಳಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣ ಎಕ್ಸ್.ಕಾಂನಲ್ಲಿ ಈ ವಿಷಯವೇ ಹೆಚ್ಚು ಹರಿದಾಡುತ್ತಿದೆ. ಮಾರ್ಟಿನ್ ಸಿನಿಮಾ ಪೋಸ್ಟರ್‌ಗಳು, ದ್ರುವ ಸರ್ಜಾ ಹುಟ್ಟು ಹಬ್ಬಕ್ಕೆ ಶುಭಕೋರಿದ ಸಂದೇಶಗಳು ಹೆಚ್ಚು ಹರಿದಾಡುತ್ತಿದೆ. ಮಾರ್ಟಿನ್ ಸಿನಿಮಾ ಬಡುಗಡೆ ನಂತರ ಈ ಟೆಂಡ್ ಮತ್ತಷ್ಟು ಹೆಚ್ಚುವುದಂತು ಗ್ಯಾರಂಟಿ.
ಇದನ್ನೂ ಓದಿ: ಬಿಗ್ ಬಾಸ್ ಮನೆಯಿಂದ ಮೊದಲ ವಾರ ಯಾರಿಗೆ ಗೇಟ್ ಪಾಸ್? ಚೈತ್ರಾ ಕುಂದಾಪುರಗೆ ಸಿಗುತ್ತಾ ಗೇಟ್ ಪಾಸ್?
Martin cinema release date – 3 ಸಾವಿರ ಥಿಯೇಟರ್‌ನಲ್ಲಿ ಮಾರ್ಟಿನ್ ರಿಲೀಸ್!
ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ ಬಹುನಿರೀಕ್ಷಿತ ಚಿತ್ರ ‘ಮಾರ್ಟಿನ್’ ರಿಲೀಸ್‌ಗೆ ಕೌಂಟ್ ಡೌನ್ ಶುರುವಾಗಿದೆ. ಅಕ್ಟೋಬರ್ 11 ರಂದು ಭಾರತದಾದ್ಯಂತ 3 ಸಾವಿರ ಥಿಯೇಟರ್‌ನಲ್ಲಿ ರಿಲೀಸ್ ಆಗುತ್ತಿದೆ. ಈಗಾಗಲೇ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ U/A ಸರ್ಟಿಫಿಕೇಟ್ ಸಿಕ್ಕಿದೆ. ಚಿತ್ರದ ಕಥೆ ಚಿತ್ರಕಥೆಯನ್ನು ಆ್ಯಕ್ಷನ್ ಹೀರೋ ಅರ್ಜುನ್ ಸರ್ಜಾ ಬರೆದಿದ್ದಾರೆ. ಇನ್ನು ಧ್ರುವ ತಮ್ಮ ಹುಟ್ಟುಹಬ್ಬದಂದು (ಅ.6) ದಾವಣಗೆರೆಯಲ್ಲಿ ಮಾರ್ಟಿನ್ ಪ್ರೀ ರಿಲೀಸ್ ಇವೆಂಟ್ ಹಮ್ಮಿಕೊಂಡಿದ್ದಾರೆ.
ಕನ್ನಡ ಸಿನಿಮಾ ನ್ಯೂಸ್‌ಗಳ ಪ್ರಮುಖ ಅಪ್ಡೇಟ್‌ಗೆ ನಮ್ಮ ವಿಜಯಪ್ರಭ.ಕಾಂ ಟೆಲಿಗ್ರಾಂ ಗ್ರೂಪ್‌ಗೆ ಜಾಯಿನ್ ಆಗಿ.




