ರಾಗಿಯ ಅದ್ಬುತ ಪ್ರಯೋಜನಗಳು:-
1) ರಾಗಿಯನ್ನು ನೆನೆಸಿ, ಬಿಸಿ ಹಾಕಿ ಅದು ಒದ್ದೆಯಿರುವಾಗಲೇ ಸ್ವಲ್ಪ ಬಾಣಲೆಯಲ್ಲಿ ಹಾಕಿ ಹುರಿದರೆ ಅದು ಅರಳಾಗುತ್ತದೆ. ಈ ಅರಳನ್ನು ಬೀಸಿ ಪುಡಿ ಮಾಡಿಕೊಂಡು ಅದಕ್ಕೆ ಕಾಯಿ, ಬೆಲ್ಲ ಹಾಕಿಕೊಂಡು ತಿಂದರೆ ದೇಹಕ್ಕೆ ತಂಪು ನೀಡುವುದು ಮತ್ತು ಪಿತ್ತ ಕಡಿಮೆಯಾಗುವುದು.
2) ರಾಗಿಯನ್ನು ಚೆನ್ನಾಗಿ ನೆನೆಸಿ ರುಬ್ಬಿ ಹಾಲು ತೆಗೆದು ಅದನ್ನು ಶೋಧಿಸಿ ಒಲೆಯ ಮೇಲೆ ಕಾಯಿಸಿ ಅದಕ್ಕೆ ತುಪ್ಪ, ಲವಂಗ, ದಾಲ್ಚಿನ್ನಿ ಮತ್ತು ಏಲಕ್ಕಿ ಪುಡಿಯನ್ನು ಹಾಕಿ ಸ್ವಲ್ಪ ಗಟ್ಟಿಯಾದ ಮೇಲೆ ಕೆಳಗಿಳಿಸಿ ಸಕ್ಕರೆ ಹಾಕಿಕೊಂಡು ತಿಂದರೆ ದೇಹಕ್ಕೆ ಬೇಕಾದ ಕಬ್ಬಿಣದ ಅಂಶ ದೊರೆಯುವುದು.
3) ಹುಣಸೆಹಣ್ಣು ಕಿವುಚಿದ ನೀರಿಗೆ ಬೆಲ್ಲದ ಪುಡಿ ಮತ್ತು ಹುರಿದ ರಾಗಿ ಹಿಟ್ಟನ್ನು ಹಾಕಿ ಕಲಸಿ ಬೆಳಿಗ್ಗೆ ಹಸಿದ ಹೊಟ್ಟೆಯಲ್ಲಿ ತಿಂದರೆ ಪಿತ್ತ ಕಡಿಮೆಯಾಗುವುದು.
4) ಸ್ಕೂಲಕಾಯದವರು ಮತ್ತು ಮಧುಮೇಹ ರೋಗಿಗಳು ರಾಗಿಯನ್ನು ಉಪಯೋಗಿಸುವುದರಿಂದ ಹೆಚ್ಚು ಆರೋಗ್ಯ ದೊರೆಯುತ್ತದೆ.
5) ರಾಗಿ ಹಿಟ್ಟನ್ನು ಉದ್ದಿನಬೇಳೆ ಯೊಂದಿಗೆ ರುಬ್ಬಿ ದೋಸೆ ಮಾಡಿಕೊಂಡು ತಿಂದರೆ ದೇಹಕ್ಕೆ ತಂಪು ಸಿಗುವುದು.
6) ಅರಿಶಿನ ಪುಡಿ ಮತ್ತು ರಾಗಿ ಹಿಟ್ಟನ್ನು ಬೆರೆಸಿ ಕೆಂಡದ ಮೇಲೆ ಹಾಕಿದರೆ ಧೂಮ ಬರುವುದು. ಇದನ್ನು ಮೂಗಿನ ಮೂಲಕ ಸೇವಿಸಿದರೆ ನೆಗಡಿ ಕಡಿಮೆಯಾಗುವುದು.
7) ರಾಗಿಯನ್ನು ಹಿಟ್ಟು ಮಾಡಿ ಅದರಿಂದ ಮುದ್ದೆಯನ್ನು ಮಾಡಿಕೊಂಡು ತಿಂದರೆ ಮಲಬದ್ಧತೆ ನಿವಾರಣೆಯಾಗುತ್ತದೆ.
ಇದನ್ನು ಓದಿ: ನಮ್ಮ ಜೀವನದ ಒಂದು ಭಾಗವಾದ ನೀರಿನ ಅತ್ಯದ್ಭುತ ಪ್ರಯೋಜನಗಳು