ಯುವತಿಯ ‘ಹತ್ಯಾ’ಚಾರ; ನಾನು ಮಾತೃತ್ವವನ್ನು ತ್ಯಜಿಸುತ್ತಿದ್ದೇನೆ ಎಂದ ಖ್ಯಾತ ನಟಿ…!

ಬೆಂಗಳೂರು: ಉತ್ತರ ಪ್ರದೇಶದ ಹಸ್ರತ್ ನಲ್ಲಿ 19 ವರ್ಷದ ದಲಿತ ಬಾಲಕಿ ಮೇಲೆ ಮೇಲ್ಜಾತಿಯ ಯುವಕರ ‘ಹತ್ಯಾ’ಚಾರ ಇಡೀ ದೇಶವನ್ನೇ ತಲ್ಲಣಗೊಳಿಸಿದ್ದು, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಉತ್ತರಪ್ರದೇಶ ಹತ್ರಾಸ್…

parul yadav-vijayaprabha

ಬೆಂಗಳೂರು: ಉತ್ತರ ಪ್ರದೇಶದ ಹಸ್ರತ್ ನಲ್ಲಿ 19 ವರ್ಷದ ದಲಿತ ಬಾಲಕಿ ಮೇಲೆ ಮೇಲ್ಜಾತಿಯ ಯುವಕರ ‘ಹತ್ಯಾ’ಚಾರ ಇಡೀ ದೇಶವನ್ನೇ ತಲ್ಲಣಗೊಳಿಸಿದ್ದು, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಉತ್ತರಪ್ರದೇಶ ಹತ್ರಾಸ್ ಗ್ರಾಮದ ಸಂತ್ರಸ್ತೆಯ ಸಾವಿನಿಂದ ನೊಂದ, ಕನ್ನಡ ಚಿತ್ರರಂಗದ ಖ್ಯಾತ ನಟಿ ಪಾರುಲ್ ಯಾದವ್ ಅವರು ಪ್ರತಿಕ್ರಿಯಿಸಿದ್ದಾರೆ.

ಪ್ರತಿಯೊಬ್ಬ ಹೆಣ್ಣು ಕೂಡಾ ತಾನೂ ತಾಯಿ ಆಗಬೇಕೆಂದು ಬಯಸುತ್ತಾಳೆ. ಆದರೆ ಈ ಕಾರಿತು ಟ್ವೀಟ್ ಮಾಡಿರುವ ನಟಿ ಪಾರುಲ್ ಯಾದವ್ ಅವರು, ನಾನು ತಾಯಿಯಾಗಲು ಬಯಸುವುದಿಲ್ಲ ಎಂದು ಹೇಳಿದ್ದಾರೆ. ತಾಯಿಯಾಗುವುದು ಹೆಣ್ತನದ ಸಾರಾಂಶ. ಒಬ್ಬ ಹೆಣ್ಣಾಗಿ ಈ ರೀತಿ ಹೇಳುವುದು ತುಂಬಾ ಕಷ್ಟವಾಗುತ್ತದೆ.ಆದ್ರೆ ನಾನು ಮಾತೃತ್ವವನ್ನು ತ್ಯಜಿಸುತ್ತಿದ್ದೇನೆ ಎಂದು ಪ್ರತಿಜ್ಞೆ ಮಾಡುತ್ತೇನೆ ಎಂದು ಹೇಳಿದ್ದಾರೆ. ಒಂದು ವೇಳೆ ನಾನು ಮದುವೆಯಾಗಿ ನನ್ನ ಮಗು ಹುಡುಗಿಯಾಗಿದ್ದರೆ ಕಥೆ ಏನು? ಈ ದೇಶದಲ್ಲಿ ಮಹಿಳೆಯರ ಸುತ್ತಲೂ ಕ್ರೂರವಾದ ಸ್ಥಿತಿ ಇದೆ.

Vijayaprabha Mobile App free

ಹತ್ರಾಸ್‌ನಲ್ಲಿ ನಡೆದ ಯುವತಿಯ ಭಯಾನಕ ಹತ್ಯಾಚಾರ ಇದಕ್ಕೆ ಉದಾಹರಣೆಯಾಗಿದೆ. ಕಾರಣಗಳು ಬದಲಾಗುತ್ತವೆ ಆದರೆ, ತೊಂದರೆ ಯಾವಾಗಲೂ ಮಹಿಳೆಯರೇ ಭರಿಸಬೇಕು. ಇದರಿಂದ ಪಾರಾಗಲು ಸಾಧ್ಯವೇ ಇಲ್ಲ ಎಂದು ನಟಿ ಪಾರುಲ್ ಯಾದವ್ ಅವರು ಹೇಳಿದ್ದಾರೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.