ಇಂದು ಅಕ್ಟೊಬರ್ 02; ಮಹಾತ್ಮಾ ಗಾಂಧಿಜೀ, ಲಾಲ್ ಬಹಾದ್ದೂರ್ ಶಾಸ್ತ್ರೀಯವರ ಜಯಂತಿ; ಇಲ್ಲಿದೆ ಕಿರು ಮಾಹಿತಿ

ಇಂದು ಮಹಾತ್ಮಾ ಗಾಂಧಿ ಜಯಂತಿ: ಭಾರತದ ರಾಷ್ಟ್ರಪಿತ, ಸ್ವಾತಂತ್ರ ಭಾರತದ ಹೋರಾಟಗಾರ, ಅಹಿಂಸಾವಾದಿ, ಮಹಾತ್ಮ ಗಾಂಧಿ ಅವರ ಜನ್ಮದಿನವಾದ ಅಕ್ಟೋಬರ್ 2 ರಂದು ಗಾಂಧಿ ಜಯಂತಿ ಎಂದು ಇಡೀ ದೇಶ ಆಚರಣೆ ಮಾಡುತ್ತದೆ. ಇಂದು…

ಇಂದು ಮಹಾತ್ಮಾ ಗಾಂಧಿ ಜಯಂತಿ:

ಭಾರತದ ರಾಷ್ಟ್ರಪಿತ, ಸ್ವಾತಂತ್ರ ಭಾರತದ ಹೋರಾಟಗಾರ, ಅಹಿಂಸಾವಾದಿ, ಮಹಾತ್ಮ ಗಾಂಧಿ ಅವರ ಜನ್ಮದಿನವಾದ ಅಕ್ಟೋಬರ್ 2 ರಂದು ಗಾಂಧಿ ಜಯಂತಿ ಎಂದು ಇಡೀ ದೇಶ ಆಚರಣೆ ಮಾಡುತ್ತದೆ. ಇಂದು ಮಹಾತ್ಮ ಗಾಂಧಿಯವರ 151 ನೇ ಜನ್ಮದಿನ.

ಮಹಾತ್ಮಾ ಗಾಂಧೀಜಿ ಅವರು ಭಾರತದೇಶದ  ಸ್ವಾತಂತ್ರ ಚಳುವಳಿಯಲ್ಲಿ  ಮಹತ್ತರ ಪಾತ್ರವನ್ನು ವಹಿಸಿದ್ದರು.ಭಾರತೀಯ ಸ್ವಾತಂತ್ರ್ಯ ಆಂದೋಲನದ ಕಾಲದಲ್ಲಿ ಅಹಿಂಸೆಯ ಮೂಲಕ ಹೋರಾಡಲು, ಮಹಾತ್ಮಾ ಗಾಂಧೀಜಿ ಅವರು ರಾಜಕೀಯ ಹಾಗೂ ಅಧ್ಯಾತ್ಮಿಕ ನಾಯಕರಾಗಿದ್ದರು.

Vijayaprabha Mobile App free

ಇಡೀ ಭಾರತ ದೇಶವು ಗಾಂಧೀಜಿ ಅವರಿಗೆ ಮಹಾತ್ಮ ಎಂದು ಕರೆದರು. ಅಲ್ಲದೇ ಭಾರತೀಯರು ಇಂದಿಗೂ ಗಾಂಧೀಜಿಯವರನ್ನು ಬಾಪೂಜಿ ಎಂದು ಸಂಭೋಧಿಸುತ್ತಾರೆ.

ಭಾರತದ ಎರಡನೇ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರೀ ಜಯಂತಿ: 

ಇಂದು ಸ್ವಾತಂತ್ರ ಭಾರತದ ಎರಡನೇ ಪ್ರಧಾನಿ ಯಾಗಿದ್ದ, ದೇಶ ಕಂಡ ಅಪ್ರತಿಮ ನಾಯಕರಲ್ಲಿ ಒಬ್ಬರಾದ ಪಂಡಿತ್ ಲಾಲ್‌ ಬಹದ್ದೂರ್‌ ಶಾಸ್ತ್ರಿ ಅವರ 116ನೇ ಜಯಂತೋತ್ಸವ.‌

ಶಾಸ್ತ್ರಿ ಅವರು, 1904 ಅಕ್ಟೋಬರ್‌ 2 ರಂದು ಹುಟ್ಟಿದ ಇವರು ಅತಿ ಚಿಕ್ಕ ವಯಸ್ಸಿನಲ್ಲಿಯೇ ಹೋರಾಟದ ಮನೋಭಾವ ಬೆಳೆಸಿಕೊಂದಿದ್ದರು. ಇವರು ತುಂಬಾ ಮೃದು ಸ್ವಭಾವದ ವ್ಯಕ್ತಿಯಾಗಿದ್ದು, ಆಡಳಿತ ವಿಷಯದಲ್ಲಿ ಮಾತ್ರ ಖಡಕ್‌ ಆಗಿದ್ದರು.

ಮಾಜಿ ಪ್ರದಾನ ಮಂತ್ರಿ ಲಾಲ್ ಬಹದ್ದೂರ್‌ ಶಾಸ್ತ್ರಿಯವರು ಮಹಾತ್ಮ ಗಾಂಧಿಯವರ ಅಸಹಕಾರ ಚಳುವಳಿಯಲ್ಲಿ ಭಾಗವಹಿಸಿದ್ದರು. ಆ ಚಳುವಳಿಯಲ್ಲಿ ಭಾಗವಹಿಸಲು ಶಾಸ್ತ್ರಿ ಯವರು ತಮ್ಮ ಓದನ್ನು ಅರ್ಧದಲ್ಲೇ ಬಿಟ್ಟದ್ದರು.

ಲಾಲ್ ಬಹಾದ್ದೂರ್ ಶಾಸ್ತ್ರೀ ಅವರಿಗೆ 1926 ರಲ್ಲಿ ಕಾಶಿ ವಿದ್ಯಾ ಪೀಠದಿಂದ ಶಾಸ್ತ್ರಿ ಎಂಬ ಬಿರುದು ನೀಡಲಾಯಿತು. ಶಾಸ್ತ್ರೀ ಯವರು  9 ವರ್ಷಗಳ ಕಾಲ ಸ್ವಾತಂತ್ರ್ಯಕ್ಕಾಗಿ ಜೈಲುವಾಸ ಅನುಭವಿಸಿದ್ದರು.

ಶಾಸ್ತ್ರಿಯವರು ಪ್ರಧಾನಿಯಾಗಿದ್ದಾಗ ನಮ್ಮ ದೇಶದ ಯೋಧರು ಎಷ್ಟು ಮುಖ್ಯವೋ ಅಷ್ಟೇ ರೈತರು ಮುಖ್ಯ ಎಂದು ಜೈ ಜವಾನ್, ಜೈ ಕಿಸಾನ್ ಪ್ರತಿಪಾದಿಸಿದ್ದರು.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.