Skip to content
Kannada News | Karnataka News | Vijayaprabha

Kannada News | Karnataka News | Vijayaprabha

Kannada News Portal
Kannada News | Karnataka News | Vijayaprabha
  • ಪ್ರಮುಖ ಸುದ್ದಿ
  • ಲೋಕಲ್ ಸುದ್ದಿ
  • ಸಿನೆಮಾ
  • ರಾಜಕೀಯ
  • ಆರೋಗ್ಯ
  • Dina bhavishya
  • Job News Kannada
  • ಬಿಗ್ ಬಾಸ್
  • Gallery
Kannada News | Karnataka News | Vijayaprabha
  • Home
  • ಪ್ರಮುಖ ಸುದ್ದಿ
  • ಲೋಕಲ್ ಸುದ್ದಿ
  • ಸಿನೆಮಾ
  • ರಾಜಕೀಯ
  • ದಿನ ಭವಿಷ್ಯ
  • ಆರೋಗ್ಯ
  • ರಾಜ್ಯ ಸುದ್ದಿ
  • ರಾಷ್ಟೀಯ ಸುದ್ದಿ
  • Job News
  • ಕ್ರೀಡೆ
  • ವಿದೇಶ
  • .
  • ಪ್ರಮುಖ ಸುದ್ದಿ
  • ಲೋಕಲ್ ಸುದ್ದಿ
  • ರಾಜ್ಯ ಸುದ್ದಿ
  • ರಾಜಕೀಯ
  • ರಾಷ್ಟೀಯ ಸುದ್ದಿ
  • ದಿನ ಭವಿಷ್ಯ
  • ಕ್ರೀಡೆ
Kannada News | Karnataka News | Vijayaprabha
  • Home
  • ಪ್ರಮುಖ ಸುದ್ದಿ
  • ಲೋಕಲ್ ಸುದ್ದಿ
  • ರಾಜ್ಯ ಸುದ್ದಿ
  • ಸಿನೆಮಾ
  • ರಾಜಕೀಯ
  • ದಿನ ಭವಿಷ್ಯ
  • ಆರೋಗ್ಯ
  • ರಾಷ್ಟೀಯ ಸುದ್ದಿ
  • Job News Kannada
Home » latest news » latest news how to check aadhaar link status to bank account
ಪ್ರಮುಖ ಸುದ್ದಿ

Aadhaar: ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್‌ ಲಿಂಕ್ ಆಗಿದೆಯೇ? ಸ್ಥಿತಿ ಪರಿಶೀಲಿಸುವ ಸರಳ ಪ್ರಕ್ರಿಯೆ ಇಲ್ಲಿದೆ!

ಇತ್ತೀಚಿನ ದಿನಗಳಲ್ಲಿ ಆಧಾರ್ ಕಾರ್ಡ್ (Aadhaar Card) ಪ್ರತಿಯೊಬ್ಬರಿಗೂ ಅತ್ಯಗತ್ಯವಾಗಿದೆ. ಇದನ್ನು ಪ್ಯಾನ್ ಕಾರ್ಡ್(Pan Card), ವೋಟರ್ ಕಾರ್ಡ್ (voter id) ಇತ್ಯಾದಿಗಳೊಂದಿಗೆ ಲಿಂಕ್ ಮಾಡಬೇಕಾಗಿದ್ದು, ಬ್ಯಾಂಕ್ ಖಾತೆಗೆ (Bank Account) ಕೂಡ ಆಧಾರ್…

Author Avatar

Vijayaprabha

April 29, 202310:55 am Aadhaar cardAadhaar Card Link to Bank AccountBank AccountfeaturedLink Aadhaar to Bank AccountVIJAYAPRABHA.COMಆಧಾರ್ ಕಾರ್ಡ್ಬ್ಯಾಂಕ್ ಖಾತೆಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿ
Link Aadhaar to Bank Account

ಇತ್ತೀಚಿನ ದಿನಗಳಲ್ಲಿ ಆಧಾರ್ ಕಾರ್ಡ್ (Aadhaar Card) ಪ್ರತಿಯೊಬ್ಬರಿಗೂ ಅತ್ಯಗತ್ಯವಾಗಿದೆ. ಇದನ್ನು ಪ್ಯಾನ್ ಕಾರ್ಡ್(Pan Card), ವೋಟರ್ ಕಾರ್ಡ್ (voter id) ಇತ್ಯಾದಿಗಳೊಂದಿಗೆ ಲಿಂಕ್ ಮಾಡಬೇಕಾಗಿದ್ದು, ಬ್ಯಾಂಕ್ ಖಾತೆಗೆ (Bank Account) ಕೂಡ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಬೇಕು. ಆದರೆ, ನಿಮ್ಮ ಬ್ಯಾಂಕ್ ಖಾತೆಯೊಂದಿಗೆ ಲಿಂಕ್ ಮಾಡಲಾದ ಆಧಾರ್ ಸಂಖ್ಯೆಯ ಸ್ಥಿತಿಯನ್ನು ತಿಳಿದುಕೊಳ್ಳುವುದು ಉತ್ತಮ.

Link Aadhaar to Bank Account: ಆಧಾರ್ ಕಾರ್ಡ್ ಈಗ ಭಾರತೀಯರ ಜೀವನದಲ್ಲಿ ಪ್ರಮುಖ ದಾಖಲೆಯಾಗಿದೆ. ಈ ಆಧಾರ್ ಸಂಖ್ಯೆ ಯಾವುದೇ ಸಣ್ಣ ಕೆಲಸಕ್ಕೂ, ವಿಳಾಸ ಪುರಾವೆ ಮತ್ತು ಗುರುತಿನ ಪುರಾವೆಯಾಗಿ ಕಾರ್ಯನಿರ್ವಹಿಸುತ್ತದೆ. ಈ ಆಧಾರ್ ಕಾರ್ಡ್ ಅನ್ನು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ನೀಡುತ್ತಿದ್ದು, 12-ಅಂಕಿಯ ವಿಶಿಷ್ಟ ಗುರುತಿನ ಸಂಖ್ಯೆಯನ್ನು ಒಳಗೊಂಡಿದೆ.

ಇದನ್ನು ಓದಿ: PAN card: ಸರ್ಕಾರದ ಮಹತ್ವದ ನಿರ್ಧಾರ; ಪ್ಯಾನ್‌ಕಾರ್ಡ್ ಹೊಂದಿರುವ ಇವರಿಗೂ 1000 ರೂಪಾಯಿ ಭಾರಿ ದಂಡ!

Vijayaprabha Mobile App free

ಪ್ಯಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಕಡ್ಡಾಯವಾಗಿದ್ದು, ಬ್ಯಾಂಕ್ ಖಾತೆಗಳೊಂದಿಗೆ ಆಧಾರ್ ಲಿಂಕ್ ಮಾಡಲು ಸರ್ಕಾರ ಸೂಚಿಸಿದೆ. ವಂಚನೆಯನ್ನು ತಪ್ಪಿಸಲು ಲಿಂಕ್ ಮಾಡುವ ಅಗತ್ಯವಿದೆ. ಆದರೆ ನೀವು ನಿಮ್ಮ ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಲಿಂಕ್ ಮಾಡಿದ್ದೀರಾ (check aadhaar linking status with bank) ಅಥವಾ ಇಲ್ಲವೇ ಎಂಬುದನ್ನು ನೀವು ಸುಲಭವಾಗಿ ತಿಳಿದುಕೊಳ್ಳಬಹುದು.

2024ರಲ್ಲಿ ಡಿವೋರ್ಸ್‌ ಪಡೆದುಕೊಂಡ ಸೆಲೆಬ್ರಿಟಿಗಳಿವರು
2024ರಲ್ಲಿ ಡಿವೋರ್ಸ್‌ ಪಡೆದುಕೊಂಡ ಸೆಲೆಬ್ರಿಟಿಗಳಿವರು
ಅಮ್ಮ ಎಂದರೆ ಕಿಚ್ಚನಿಗೆ ಕಣ್ಣಿಗೆ ಕಾಣುವ ದೇವರು!
ಅಮ್ಮ ಎಂದರೆ ಕಿಚ್ಚನಿಗೆ ಕಣ್ಣಿಗೆ ಕಾಣುವ ದೇವರು!
ನವರಾತ್ರಿಯಲ್ಲಿ ಪೂಜಿಸಲ್ಪಡುವ ದುರ್ಗಾದೇವಿಯ ಒಂಭತ್ತು ಅವತಾರಗಳು
ನವರಾತ್ರಿಯಲ್ಲಿ ಪೂಜಿಸಲ್ಪಡುವ ದುರ್ಗಾದೇವಿಯ ಒಂಭತ್ತು ಅವತಾರಗಳು
ಈ ಬಾರಿ ಬಿಗ್‌ ಬಾಸ್‌ಗೆ ಎಂಟ್ರಿ ಕೊಡ್ತೀರೋರು ಯಾರು !? ಸಂಭಾವ್ಯ ಪಟ್ಟಿ ವೈರಲ್‌
ಈ ಬಾರಿ ಬಿಗ್‌ ಬಾಸ್‌ಗೆ ಎಂಟ್ರಿ ಕೊಡ್ತೀರೋರು ಯಾರು !? ಸಂಭಾವ್ಯ ಪಟ್ಟಿ ವೈರಲ್‌
ಬಯಲಾಯ್ತು ಜೈದೇವ್‌ ಅಸಲಿ ಮುಖ; ಮಲ್ಲಿಯ ಮುಂದಿನ ನಡೆ ಏನು?
ಬಯಲಾಯ್ತು ಜೈದೇವ್‌ ಅಸಲಿ ಮುಖ; ಮಲ್ಲಿಯ ಮುಂದಿನ ನಡೆ ಏನು?

ಬ್ಯಾಂಕ್ ಖಾತೆಗೆ ಆಧಾರ್‌ ಕಾರ್ಡ್ ಲಿಂಕ್ ಸ್ಟೇಟಸ್ ನೋಡುವುದು ಹೇಗೆ

Link Aadhaar to Bank Account
Link Aadhaar to Bank Account
  • ಸ್ಥಿತಿಯನ್ನು ಪರಿಶೀಲಿಸಲು ಮೊದಲು ನೀವು UIDAI ನ ಅಧಿಕೃತ ವೆಬ್‌ಸೈಟ್ https://uidai.gov.in ಗೆ ಹೋಗಬೇಕು. ಮುಖಪುಟದಲ್ಲಿ ನನ್ನ ಆಧಾರ್ (My Aadhaar) ಕ್ಲಿಕ್ ಮಾಡಿ.
  • ನಂತರ ಮುಂದಿನ ಪಾಪ್ಅಪ್ ಮೆನುವಿನಲ್ಲಿ, ಆಧಾರ್ ಸೇವೆಗಳನ್ನು (Aadhaar Services) ಆಯ್ಕೆಮಾಡಿ. ಅದರಲ್ಲಿ ಚೆಕ್ ಆಧಾರ್ ಮತ್ತು ಬ್ಯಾಂಕ್ ಖಾತೆ ಲಿಂಕ್ ಮಾಡುವ ಸ್ಟೇಟಸ್ (Check Aadhaar and Bank Account Linking Status) ಮೇಲೆ ಕ್ಲಿಕ್ ಮಾಡಿದರೆ ಹೊಸ ಪುಟ ತೆರೆದುಕೊಳ್ಳುತ್ತದೆ.
  • ನಿಮ್ಮ 12-ಅಂಕಿಯ ಆಧಾರ್ ಸಂಖ್ಯೆ ಮತ್ತು ಭದ್ರತಾ ಕೋಡ್ (Security Code) ಅನ್ನು ನಮೂದಿಸಿ, Send OTP ಮೇಲೆ ಕ್ಲಿಕ್ ಮಾಡಿ. ನಂತರ OTP ಅನ್ನು ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಕಳುಹಿಸಲಾಗುತ್ತದೆ.
  • OTP ನಮೂದಿಸಿ ಲಾಗಿನ್ ಆದರೆ ನಂತರ, ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಲಿಂಕ್ ಸ್ಥಿತಿಯನ್ನು ಪರದೆಯ ಮೇಲೆ ಪ್ರದರ್ಶಿಸಲಾಗುತ್ತದೆ.
  • ಮತ್ತೊಂದೆಡೆ.. ನಿಮ್ಮ ಬ್ಯಾಂಕ್ ಒದಗಿಸಿದ ಇಂಟರ್ನೆಟ್ ಬ್ಯಾಂಕಿಂಗ್‌ಗೆ ನೀವು ಲಾಗ್ ಇನ್ ಆಗಿ ಅಥವಾ ಬ್ಯಾಂಕ್ ಶಾಖೆಗೆ ಭೇಟಿ ನೀಡುವ ಮೂಲಕ ಆಧಾರ್ ಲಿಂಕ್ ಆಗಿದೆಯೇ ಎಂದು ತಿಳಿದುಕೊಳ್ಳಬಹುದು.

ಇದನ್ನು ಓದಿ: Aadhaar card: ಆಧಾರ್ ಕಾರ್ಡ್ ಅಪ್ ಡೇಟ್ ಮಾಡಬೇಕಾ; ವಿಳಾಸ, ಫೋಟೋ ಬದಲಾಯಿಸುವ ಸರಳ ವಿಧಾನ ಇಲ್ಲಿದೆ

ತಕ್ಷಣವೇ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡಿ

ಒಂದು ವೇಳೆ ನಿಮ್ಮ ಬ್ಯಾಂಕ್ ಖಾತೆಯು ಆಧಾರ್‌ನೊಂದಿಗೆ ಲಿಂಕ್ ಆಗಿಲ್ಲ ಎಂದು ನೀವು ಕಂಡುಕೊಂಡರೆ, ತಕ್ಷಣವೇ ಬ್ಯಾಂಕ್ ಶಾಖೆಗೆ ಹೋಗಿ ಆಧಾರ್ ಸಂಖ್ಯೆ ಮತ್ತು ಪ್ಯಾನ್ ಕಾರ್ಡ್ ವಿವರಗಳನ್ನು ಒದಗಿಸಿ. ಆಧಾರ್ ಲಿಂಕ್‌ಗಾಗಿ ಅಲ್ಲಿನ ಸಿಬ್ಬಂದಿ ನೀಡಿದ ನಮೂನೆಯನ್ನು ಭರ್ತಿ ಮಾಡಿ ಸಲ್ಲಿಸಬೇಕು. ನಿಮ್ಮ ಆಧಾರ್ ವಿವರಗಳನ್ನು UIDAI ಯೊಂದಿಗೆ ಪರಿಶೀಲಿಸಲಾಗುತ್ತದೆ ಮತ್ತು ನಿಮ್ಮ ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಅನ್ನು ಲಿಂಕ್ ಮಾಡಲಾಗುತ್ತದೆ.

ಇದನ್ನು ಓದಿ: PM Kisan: ರೈತರಿಗೆ ಭರ್ಜರಿ ಸಿಹಿಸುದ್ದಿ, ರೈತರ ಖಾತೆಗೆ ಏಕಕಾಲಕ್ಕೆ 4 ಸಾವಿರ!

2019 ರ ಮನಿ ಲಾಂಡರಿಂಗ್ ತಡೆ ಕಾಯ್ದೆಯ ಮೂರನೇ ತಿದ್ದುಪಡಿ ನಿಯಮದ ಪ್ರಕಾರ, ಆಧಾರ್‌ನ ಸೆಕ್ಷನ್ 7 ರ ಅಡಿಯಲ್ಲಿ ಸೂಚಿಸಲಾದ ಯೋಜನೆಗಳ ಪ್ರಯೋಜನವನ್ನು ಪಡೆಯಲು ಬ್ಯಾಂಕಿಂಗ್ ಸೇವಾ ಪೂರೈಕೆದಾರರಿಗೆ ಆಧಾರ್ ಅನ್ನು ಒದಗಿಸಬೇಕು. ನೀವು ಸಬ್ಸಿಡಿಗಳು ಮತ್ತು ಇತರ ರಿಯಾಯಿತಿಗಳನ್ನು ಬಯಸದಿದ್ದರೆ ಆಧಾರ್ ಲಿಂಕ್ ಮಾಡುವ ಅಗತ್ಯವಿಲ್ಲ. ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳ ಪ್ರಕಾರ ಆಧಾರ್ ಲಿಂಕ್ ಐಚ್ಛಿಕ ಮಾತ್ರ.

ಇದನ್ನು ಓದಿ: BSNL ನಿಂದ ಕೇವಲ ರೂ107ಕ್ಕೆ 35 ದಿನಗಳ ವ್ಯಾಲಿಡಿಟಿ, ಉಚಿತ ಕರೆಗಳು, ಡೇಟಾ!

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.

ಸಂಬಂಧಿತ ಸುದ್ದಿ

ನದಿ ಜೋಡಣೆ ಯೋಜನೆ ಎಂದರೇನು? ಕಾವೇರಿ – ಪೆನ್ನಾರ್ ನದಿ ಜೋಡಣೆ ರಾಜ್ಯಕ್ಕೆ ಆಗುವ ಲಾಭವೇನು..?

By Vijayaprabha February 2, 2022
#ट्रेंडिंग हैशटैग:Aadhaar cardAadhaar Card Link to Bank AccountBank AccountfeaturedLink Aadhaar to Bank AccountVIJAYAPRABHA.COMಆಧಾರ್ ಕಾರ್ಡ್ಬ್ಯಾಂಕ್ ಖಾತೆಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿ

Post navigation

Previous Previous post: PAN card: ಸರ್ಕಾರದ ಮಹತ್ವದ ನಿರ್ಧಾರ; ಪ್ಯಾನ್‌ಕಾರ್ಡ್ ಹೊಂದಿರುವ ಇವರಿಗೂ 1000 ರೂಪಾಯಿ ಭಾರಿ ದಂಡ!
Next Next post: Post Office: ದಿನಕ್ಕೆ ಕೇವಲ 333 ರೂ ಉಳಿತಾಯ ಮಾಡಿದರೆ ಕೈಗೆ 16 ಲಕ್ಷ ರೂ, ಸರ್ಕಾರದ ಈ ಯೋಜನೆ ಸೂಪರ್!

District News

.

  • About Us
  • Contact us
  • Privacy Policy
  • Disclaimers
  • Editorial Team
  • Sitemap
Vijayaprabha-Kannada-News
Vijayaprabha Office Address 3rd ward, Near Primary School, Sheddera Oni, Arasikere Harapanahalli Vijayanagara 583125
© Copyright All right reserved By Kannada News | Karnataka News | Vijayaprabha WordPress Powered By
2024ರಲ್ಲಿ ಡಿವೋರ್ಸ್‌ ಪಡೆದುಕೊಂಡ ಸೆಲೆಬ್ರಿಟಿಗಳಿವರು ಅಮ್ಮ ಎಂದರೆ ಕಿಚ್ಚನಿಗೆ ಕಣ್ಣಿಗೆ ಕಾಣುವ ದೇವರು! ನವರಾತ್ರಿಯಲ್ಲಿ ಪೂಜಿಸಲ್ಪಡುವ ದುರ್ಗಾದೇವಿಯ ಒಂಭತ್ತು ಅವತಾರಗಳು ಈ ಬಾರಿ ಬಿಗ್‌ ಬಾಸ್‌ಗೆ ಎಂಟ್ರಿ ಕೊಡ್ತೀರೋರು ಯಾರು !? ಸಂಭಾವ್ಯ ಪಟ್ಟಿ ವೈರಲ್‌ ಬಯಲಾಯ್ತು ಜೈದೇವ್‌ ಅಸಲಿ ಮುಖ; ಮಲ್ಲಿಯ ಮುಂದಿನ ನಡೆ ಏನು?