ಸಿನಿಮಾ ನಟ-ನಟಿಯರ ಪ್ರೇಮ ಪ್ರಕರಣಗಳು ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಾನೆ ಇರ್ತಾವೆ. ಇದೀಗ ಬಾಲಿವುಡ್‌ನ ಏವಾಗ್ರಿನ್ ಬ್ಯುಟಿ ದಿವಂಗತ ಶ್ರೀದೇವಿ(Sridevi) ಅವರ ಪುತ್ರಿ ನಟಿ ಜಾನ್ವಿ ಕಪೂರ್(Janhvi Kapoor) ಲವ್ ಸ್ಟೋರಿ ಬಗ್ಗೆ ಸಾಕಷ್ಟು ಗಾಸಿಪ್‌ಗಳಿವೆ.
ಇದನ್ನು ಓದಿ: ಮಹಿಳೆಯರಿಗೆ ಸಂತಸದ ಸುದ್ದಿ: ಅಂಚೆ ಕಚೇರಿಗಳಲ್ಲಿ ಹೊಸ ಯೋಜನೆ, ಅರ್ಜಿ ಸಲ್ಲಿಸುವುದು ಹೇಗೆ?
ಇತ್ತೀಚೆಗೆ ನಟಿ ಜಾನ್ವಿ ಮಾಲ್ಡೀವ್ಸ್‌ನಲ್ಲಿ (Maldivas) ಕಳೆದ ತಮ್ಮ ಬೋಲ್ಡ್ ಫೋಟೋಗಳನ್ನ ಶೇರ್ ಮಾಡುವ ಮೂಲಕ ಸಂಚಲನ ಮೂಡಿಸಿದ್ದು, ಇದೀಗ ಮಹಾರಾಷ್ಟ್ರದ ಮಾಜಿ ಸಿಎಂ ಸುಶೀಲ್ ಕುಮಾರ ಶಿಂಧೆ ಅವರ ಮೊಮ್ಮಗ ಶಿಖರ್ ಪಹಾರಿಯಾ(Shikhar Paharia) ಡೇಟಿಂಗ್ ಬಗ್ಗೆ ಗುಸು-ಗುಸು ಶುರುವಾಗಿದೆ.
ಇದನ್ನು ಓದಿ: Jioದಿಂದ ಅದ್ಭುತ ಕೊಡುಗೆ: ಅತಿ ಕಡಿಮೆ ಬೆಲೆಯಲ್ಲಿ ಅನಿಯಮಿತ ಡೇಟಾ.. 30 ದಿನಗಳ ಫ್ರಿ ಟ್ರಯಲ್, ಇನ್ನೂ ಹಲವು ಅದ್ಭುತ ಕೊಡುಗೆಗಳು!
ಇತ್ತೀಚೆಗೆ ಏರ್‌ಪೋರ್ಟ್‌ನಿಂದ ಹೊರಬಂದಾಗ ಇವರಿಬ್ಬರು ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗಿದ್ದು, ನಂತರ ಬೇರೆ ಬೇರೆ ಕಾರುಗಳಲ್ಲಿ ಹೊರನಡೆದಿದ್ದಾರೆ. ಸಂಬಂಧಿಸಿದ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ(Social Network) ವೈರಲ್ ಆಗುತ್ತಿವೆ. ಜಾನ್ವಿ, ಶಿಖರ್ ಜೊತೆ ನೀತಾ ಅಂಬಾನಿ ಆಯೋಜಿಸಿದ್ದ ಕಾರ್ಯಕ್ರಮಕ್ಕೂ ಹೋಗಿದ್ದಾರೆ. ಈ ಫೋಟೋಗಳು ವೈರಲ್ ಆಗಿದ್ದವು. ಹೀಗೆ ಸಾಕಷ್ಟು ಬಾರಿ ಒಟ್ಟಾಗಿ ಕಾಸಿಕೊಂಡಿದೆ ಈ ಜೋಡಿ. ಇದರಿಂದಾಗಿ ಇವರಿಬ್ಬರ ಡೇಟಿಂಗ್ ವೈರಲ್ ಆಗಿದೆ. ಈಗಿದ್ದರು ಇಬ್ಬರೂ ಯಾವುದೇ ಸ್ಪಷ್ಟನೆ ನೀಡಿಲ್ಲ.
ಕಾಜಲ್ ಅಗರ್ವಾಲ್ ಸ್ಟೇಟ್‌ಮೆಂಟ್‌ಗೆ ಬಿಟೌನ್ ಶಾಕ್; ಭಾರಿ ವಿವಾದ ಹುಟ್ಟುಹಾಕಿದ ಕಾಜಲ್ ಅಗರ್ವಾಲ್ ಹೇಳಿಕೆ
ದಕ್ಷಿಣ ಭಾರತಕ್ಕೆ ಕಾಲಿಟ್ಟ ಜಾನ್ವಿ :
ಇನ್ನು, ನಟಿ ಜಾನ್ವಿ ಕಪೂರ್ ಬಾಲಿವುಡ್ ನಲ್ಲಿ ನೆಲೆಯೂರಲು ಪ್ರಯತ್ನಿಸುತ್ತಿದ್ದು, ತನ್ನ ಸೌಂದರ್ಯದ ಮೂಲಕ ಬೀ ಟೌನ್ ಹುಡುಗಿಯಾಗಿ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ. ಈಗ ನಟಿ ಜಾನ್ವಿ ಕಪೂರ್ ಟಾಲಿವುಡ್ಗೆ ಎಂಟ್ರಿ ಕೊಟ್ಟಿದ್ದು, ತೆಲುಗಿನ ಯಂಗ್ ಟೈಗರ್ ಎನ್ ಟಿಆರ್(NTR) ಜೊತೆ ನಟಿಸುವ ಮೂಲಕ ತೆಲುಗು ಪ್ರೇಕ್ಷಕರ ಮುಂದೆ ಕಾಣಿಸಿಕೊಳ್ಳಲಿದ್ದಾರೆ.
ಹೌದು, ಎನ್‌ಟಿಆರ್ ಮತ್ತು ಕೊರಟಾಲ ಶಿವ (oratala Shiva) ಕಾಂಬಿನೇಷನ್ ನಲ್ಲಿ ಮೂಡಿ ಬರಲಿರುವ ಎನ್‌ಟಿಆರ್ 30ಯಲ್ಲಿ ನಟಿ ಜಾನ್ವಿ ಕಪೂರ್ ಅವರನ್ನು ಅಂತಿಮಗೊಳಿಸುವ ಅಧಿಕೃತ ಹೇಳಿಕೆಯನ್ನು ತಯಾರಕರು ನೀಡಿದ್ದು, ಈ ಶುಭ ಸುದ್ದಿ ನಂದಮೂರಿ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ. ಎನ್‌ಟಿಆರ್ 30 ಯುನಿಟ್ ಬಿಡುಗಡೆ ಮಾಡಿದ ಫಸ್ಟ್ ಲುಕ್ ಪೋಸ್ಟರ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, ನನ್ನ ನೆಚ್ಚಿನ ಎನ್‌ಟಿಆರ್ ಜೊತೆ ಜೋಡಿಯಾಗಿ ಸೆಟ್‌ಗೆ ಬರಲು ಉತ್ಸುಕಳಾಗಿದ್ದೇನೆ ಎಂದು ಜಾನ್ವಿ ಪೋಸ್ಟ್ ಮಾಡಿದ್ದಾರೆ.
ಇದನ್ನು ಓದಿ: ಹೊಸ ಆರ್ಥಿಕ ವರ್ಷ: ಸಿಲಿಂಡರ್ ಬೆಲೆ ಭಾರೀ ಇಳಿಕೆ, ಚಿನ್ನ ಕೊಳ್ಳಲು ಹೊಸ ನಿಯಮ, ಇಂದಿನಿಂದ ಏನೆಲ್ಲಾ ಬದಲಾವಣೆ?