ತಮ್ಮ ಫಿಟ್ನೆಸ್‌ನಿಂದ ಯುವ ಆಟಗಾರರಿಗೆ ಮಾದರಿಯಾಗಿರುವ ಕ್ರಿಕೆಟಿಗ ವಿರಾಟ್ ಕೊಹ್ಲಿ ವಿಶ್ವದ ಫಿಟ್ ಕ್ರಿಕೆಟಿಗರಲ್ಲಿ ಒಬ್ಬರು. ಕೆಲ ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾದ ಕ್ರಿಕೆಟಿಗ ವಿರಾಟ್ ಕೊಹ್ಲಿ ನಟಿ ಅನುಷ್ಕಾ ಶರ್ಮ ದಂಪತಿಗೆ ಮುದ್ದಾದ ಮಗಳು ಕೂಡ ಇದ್ದಾಳೆ.
ಇದನ್ನು ಓದಿ: ಪ್ರಿಯಾಂಕಾ ಚೋಪ್ರಾಗೆ ಕಿರುಕುಳ ನೀಡಿ ಓಡಿಸಿದ ಕರಣ್..ಶಾರುಖ್ ಜೊತೆಗಿನ ಸ್ನೇಹವೇ ಕಾರಣ: ಕಂಗನಾ ರಣಾವತ್
ಸಾರ್ವಜನಿಕವಾಗಿ ಹೆಚ್ಚಾಗಿ ಒಟ್ಟಿಗೆ ಕಾಣಿಸಿಕೊಳ್ಳುವ ವಿರುಷ್ಕಾ ಜೋಡಿ, ಸಂದರ್ಶನದಲ್ಲಿ ತಮ್ಮ ದಾಂಪತ್ಯ ಜೀವನದ ಬಗ್ಗೆ ಅನೇಕ ಬಾರಿ ಮಾತಾಡಿದ್ದಾರೆ. ಆದರೆ, ಅನುಷ್ಕಾ ಶರ್ಮಾ ಇದೀಗ ಪತಿ ವಿರಾಟ್ ಕೊಹ್ಲಿ ಅವರ ಕುಡಿತದ ಚಟದ ಬಗ್ಗೆ ಮಾತಾಡಿದ್ದಾರೆ.
ಇದನ್ನು ಓದಿ: KPSC ಯಲ್ಲಿ 47 ಸಹಕಾರಿ ಸಂಘಗಳ ನಿರೀಕ್ಷಕರ ಹುದ್ದೆಗಳು; Degree ವಿದ್ಯಾರ್ಹತೆ, ಈಗಲೇ ಅರ್ಜಿ ಸಲ್ಲಿಸಿ
ಈ ಹಿಂದೆ ಸಖತ್ತಾಗಿ ಪಾರ್ಟಿ ಮಾಡುತ್ತಿದ್ದ ಕೊಹ್ಲಿ ರಹಸ್ಯವನ್ನು ಅನುಷ್ಕಾ ಶೋವೊಂದರಲ್ಲಿ ಬಹಿರಂಗಗೊಳಿಸಿದ್ದು, ತಮಾಷೆಯಾಗಿ ಮಾತನಾಡುತ್ತಾ ಸೀಕ್ರೆಟ್ ಬಿಚ್ಚಿಟ್ಟಿದ್ದಾರೆ. ಕುಡಿದ ಮೇಲೆ ಕೊಹ್ಲಿ ಏನ್ ಮಾಡ್ತಾರೆ? ಪಾರ್ಟಿಗಳಿಗೆ ಹೋದಾಗ ಯಾರು ಬೇಗ ಜನರ ಗಮನಸೆಳೆಯುತ್ತಾರೆ ಎಂಬ ಪ್ರಶ್ನೆಗೆ, ಉತ್ತರಿಸಿದ ಅನುಷ್ಕಾ ಶರ್ಮಾ, ಅದು ವಿರಾಟ್ ಕೊಹ್ಲಿಯೇ ಎಂದಿದ್ದಾರೆ. ಕೊಹ್ಲಿ ಪಾರ್ಟಿಯಲ್ಲಿ ಕುಡಿದರೆ ಡ್ಯಾನ್ಸ್ ಶುರುಮಾಡುತ್ತಾರೆ ಎಂದಿದ್ದಾರೆ. ಡ್ಯಾನ್ಸ್ ಮಾಡಲು ಆರಂಭ ಮಾಡಿದರೆ ಎಲ್ಲರೂ ಅವರನ್ನೇ ನೋಡಬೇಕು ಹಾಗೆ ಕುಣಿಯುತ್ತಾರೆ ಎಂದು ಅನುಷ್ಕಾ ಹೇಳಿದ್ದಾರೆ.
ಇದನ್ನು ಓದಿ: ಏಪ್ರಿಲ್ 1 ರಿಂದ ಇವುಗಳ ಬೆಲೆ ಭಾರೀ ಹೆಚ್ಚಳ: ಯಾವುದು ದುಬಾರಿ? ಯಾವುದು ಅಗ್ಗ? ಇಲ್ಲಿದೆ ನೋಡಿ
ಇದಕ್ಕೆ, ಪಕ್ಕದಲ್ಲೇ ಕುಳಿತಿದ್ದ ಕುಳಿತಿದ್ದ ಕೊಹ್ಲಿ ಹೌದು ಎಂದು ತಲೆಯಾಡಿಸಿದ್ದಾರೆ. ನಾನು 2 ಪೆಗ್ಗಿಂತ ಹೆಚ್ಚು ಕುಡಿದರೆ ಡ್ಯಾನ್ಸ್ ಆರಂಭಿಸುತ್ತೇನೆ. ನನ್ನನ್ನು ತಡೆಯುವುದು ಯಾರಿಗೂ ಸಾಧ್ಯವಿಲ್ಲ. ಇದೀಗ ನಾನು ಮದ್ಯ ಸೇವನೆಯನ್ನೇ ನಿಲ್ಲಿಸಿದ್ದೇನೆ. ಆಗ 2 ಪೆಗ್ಗಿಂತ ಹೆಚ್ಚು ಕುಡಿದರೆ ಬಳಿಕ ಏನೂ ಯೋಚಿಸದೆ ಬಿಂದಾಸ್ ಆಗಿ ವರ್ತಿಸುತ್ತಿದ್ದೆ. ಈಗ ಡ್ರಿಂಕ್ಸ್ ಮಾಡುವುದನ್ನು ನಿಲ್ಲಿಸಿದ್ದೇನೆ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.
ಇದನ್ನು ಓದಿ: ಹೀಟ್‌ಸ್ಟ್ರೋಕ್ ಕಾಯಿಲೆ ಲಕ್ಷಣಗಳೇನು, ಇದರಿಂದ ರಕ್ಷಣೆ ಪಡೆಯುವುದು ಹೇಗೆ? ಸಂಪೂರ್ಣ ಮಾಹಿತಿ ನೋಡಿ