ಚಿತ್ರರಂಗದಲ್ಲಿ ವದಂತಿಗಳು ಹಬ್ಬುತ್ತಿರುತ್ತವೆ. ಕನ್ನಡದಲ್ಲಿ ಕುರುಬನ ರಾಣಿ, ಹೃದಯವಂತ, ರವಿಮಾಮ ಸಿನಿಮಾಗಳಲ್ಲಿ ನಟಿಸಿದ್ದ ಖ್ಯಾತ ನಟಿ ನಗ್ಮಾಗೆ ಕಿಚ್ಚ ಸುದೀಪ್ ಅಭಿನಯದ ಹೆಬ್ಬುಲಿ ಚಿತ್ರದಲ್ಲಿ ವಿಲನ್ ಆಗಿದ್ದ ಭೋಜ್‌ಪುರಿ ನಟ ರವಿಕಿಶನ್ ಜೊತೆ ಸಂಬಂಧ ಇದೆ ಎಂದು ಗುಸು ಗುಸು ಕೇಳಿ ಬರುತ್ತಿತ್ತು. ಇದೀಗ ನಟ ರವಿಕಿಶನ್ ಈ ವದಂತಿಗೆ ತೆರೆ ಎಳೆದಿದ್ದಾರೆ.
ಇದನ್ನು ಓದಿ: ಸಿಎಂ ಮೊಮ್ಮಗನ ಜೊತೆ ಖ್ಯಾತ ನಟಿ ಏವಾಗ್ರಿನ್ ಬ್ಯುಟಿ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್; ಫೋಟೋಗಳು ಭಾರಿ ವೈರಲ್
ನಾನು ಮತ್ತು ನಗ್ಮಾ ಅನೇಕ ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದೇವೆ..ನಾನು ನಗ್ಮಾ ನಟಿಸುತ್ತಿದ್ದ ಸಿನಿಮಾಗಳು ಬ್ಲಾಕ್ ಬಸ್ಟರ್ ಆಗ್ತಿತ್ತು. ಹಾಗಾಗಿ ಹೆಚ್ಚು ಸಿನಿಮಾಗಳನ್ನು ಒಟ್ಟಿಗೆ ಮಾಡುತ್ತಿದ್ದೆವು. ಈ ಕಾರಣದಿಂದಾಗಿ ಬಹುಶಃ ಆ ಸುದ್ದಿ ಹಬ್ಬಿರಬಹುದು ಎಂದು ಹೇಳಿದ್ದಾರೆ.
ಇದನ್ನು ಓದಿ: ಮಹಿಳೆಯರಿಗೆ ಸಂತಸದ ಸುದ್ದಿ: ಅಂಚೆ ಕಚೇರಿಗಳಲ್ಲಿ ಹೊಸ ಯೋಜನೆ, ಅರ್ಜಿ ಸಲ್ಲಿಸುವುದು ಹೇಗೆ?
ನಾನು ಮದುವೆಯಾಗಿದ್ದೇನೆ. ನನ್ನ ಹೆಂಡತಿಯ ಜೊತೆ ಖುಷಿಯಾಗಿ ಇದ್ದೇನೆ. ಆರಾಧಿಸುವಂತಹ ಹೆಂಡತಿ ಇರುವಾಗ ನಾನು ಯಾಕೆ ಬೇರೆಯವರ ಜೊತೆ ಸಂಬಂಧ ಇಟ್ಟುಕೊಳ್ಳಲಿ. ಅದೆಲ್ಲವೂ ಸುಳ್ಳು ಸುದ್ದಿ. ನಾವಿಬ್ಬರೂ ಒಳ್ಳೆಯ ಫ್ರೆಂಡ್ಸ್ ಎಂದು ಕಿಶನ್ ಹೇಳಿದ್ದಾರೆ.
ಇದನ್ನು ಓದಿ: PPF, ಸುಕನ್ಯಾ ಸಮೃದ್ಧಿಯಂತಹ ಸಣ್ಣ ಉಳಿತಾಯ ಯೋಜನೆಗಳಿಗೆ ಆಧಾರ್- ಪ್ಯಾನ್ ಕಡ್ಡಾಯ; ಕೇಂದ್ರದ ಮಹತ್ವದ ನಿರ್ಧಾರ
3 ವಿವಾಹಿತ ನಟರು, ವಿವಾಹಿತ ಕ್ರಿಕೆಟಿಗ, ಆದರೂ 48 ನೇ ವಯಸ್ಸಿನಲ್ಲಿ ನಗ್ಮಾ ಏಕಾಂಗಿ
ಖ್ಯಾತ ವಿವಾಹಿತ ಮಾಜಿ ಕ್ರಿಕೆಟಿಗನ ಜೊತೆ ನಗ್ಮಾ ಹೆಸರೂ:
48 ವರ್ಷದ ಖ್ಯಾತ ನಟಿ ನಗ್ಮಾ ಅವಿವಾಹಿತರಾಗಿದ್ದರೂ, ಅವರ ಜೀವನದಲ್ಲಿ ಅನೇಕ ಪುರುಷರ ಹೆಸರು ತಳುಕು ಹಾಕಿಕೊಂಡಿದ್ದವು .ಹೌದು, 2001 ರಲ್ಲಿ ಅಂದಿನ ಭಾರತೀಯ ಕ್ರಿಕೆಟ್ ತಂಡದ ನಾಯಕರಾಗಿದ್ದ ಸೌರವ್ ಗಂಗೂಲಿ ನಗ್ಮಾ ಅವರೊಂದಿಗೆ ಸಂಬಂಧದಲ್ಲಿದ್ದು, ನಂತರ ಬೇರೆ ಬೇರೆಯಾದರು.
ಇದನ್ನು ಓದಿ: Jioದಿಂದ ಅದ್ಭುತ ಕೊಡುಗೆ: ಅತಿ ಕಡಿಮೆ ಬೆಲೆಯಲ್ಲಿ ಅನಿಯಮಿತ ಡೇಟಾ.. 30 ದಿನಗಳ ಫ್ರಿ ಟ್ರಯಲ್, ಇನ್ನೂ ಹಲವು ಅದ್ಭುತ ಕೊಡುಗೆಗಳು!
ವಿವಾಹಿತ ತಮಿಳು ಖ್ಯಾತ ನಟನ ಜೊತೆ ನಗ್ಮಾ:
ಸೌರವ್ ಗಂಗೂಲಿಯೊಂದಿಗೆ ಸಂಬಂಧ ಮುರಿದುಬಿದ್ದ ನಂತರ, ಅವರು ದಕ್ಷಿಣ ಭಾರತದ ನಟ ಶರತ್ ಕುಮಾರ್ ಅವರನ್ನು ಪ್ರೀತಿಸುತ್ತಿದ್ದರು. ಶರತ್ ಕುಮಾರ್ ಅವರು ನಟ ಮತ್ತು ಸಂಸದರಾಗಿದ್ದು, ಅವರು ನಗ್ಮಾ ಅವರನ್ನು ಪ್ರೀತಿಸುವ ಮೊದಲೇ ಮದುವೆಯಾಗಿದ್ದರು. ಇಬ್ಬರೂ ಪ್ರೀತಿಸುತ್ತಿದ್ದರು ಆದರೆ ಅವರ ಸಂಬಂಧವು ಸಕಾರಾತ್ಮಕವಾಗಿ ಕೊನೆಗೊಳ್ಳಲಿಲ್ಲ. ಶರತ್‌ನ ಹೆಂಡತಿಗೆ ನಟಿಯೊಂದಿಗಿನ ಸಂಬಂಧದ ಬಗ್ಗೆ ತಿಳಿದ ತಕ್ಷಣ, ಅವಳು ಅವರನ್ನು ತೊರೆದು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದಳು. ವಿವಾದದ ನಂತರ, ನಗ್ಮಾ ಶರತ್‌ನಿಂದ ದೂರವಾಗಲು ನಿರ್ಧರಿಸಿದರು.
ಇದನ್ನು ಓದಿ: ಕಾಜಲ್ ಅಗರ್ವಾಲ್ ಸ್ಟೇಟ್‌ಮೆಂಟ್‌ಗೆ ಬಿಟೌನ್ ಶಾಕ್; ಭಾರಿ ವಿವಾದ ಹುಟ್ಟುಹಾಕಿದ ಕಾಜಲ್ ಅಗರ್ವಾಲ್ ಹೇಳಿಕೆ
ಮತ್ತೊಬ್ಬ ಬೋಜ್ ಪುರಿ ನಟನ ಜೊತೆ ನಗ್ಮಾ:
ಖ್ಯಾತ ನಟ ರವಿ ಕಿಶನ್‌ನೊಂದಿಗೆ ಸಂಬಂಧದ ನಂತರ, ನಗ್ಮಾ ಜೀವನದಲ್ಲಿ ಭೋಜ್‌ಪುರಿ ಚಲನಚಿತ್ರಗಳಲ್ಲಿ ರವಿಯ ದೊಡ್ಡ ಸ್ಪರ್ಧೆಯಾಗಿದ್ದ ಮತ್ತೊಬ್ಬ ಭೋಜ್‌ಪುರಿ ನಟ ಮನೋಜ್ ತಿವಾರಿ ಹೆಸರು ಕೇಳಿ ಬಂದಿತ್ತು.
ಇದನ್ನು ಓದಿ: ಹೊಸ ಆರ್ಥಿಕ ವರ್ಷ: ಸಿಲಿಂಡರ್ ಬೆಲೆ ಭಾರೀ ಇಳಿಕೆ, ಚಿನ್ನ ಕೊಳ್ಳಲು ಹೊಸ ನಿಯಮ, ಇಂದಿನಿಂದ ಏನೆಲ್ಲಾ ಬದಲಾವಣೆ?