ಬೆಂಗಳೂರು: ದೇಶದ ಚಿನಿವಾರ ಪೇಟೆಯಲ್ಲಿ ಬುಧವಾರ ಚಿನ್ನದ ಬೆಲೆ ಯಾವುದೇ ಬದಲಾವಣೆಯಾಗದೆ ಸ್ಥಿರವಾದ್ದು, ಬೆಳ್ಳಿ ದರ ಮಾತ್ರ ಇಳಿಕೆಯಾದ್ದು, 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 47,650 ರೂ. ದಾಖಲಾಗಿದ್ದು, 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 51,980 ರೂ. ಆಗಿದ್ದು, 1 ಕೆಜಿ ಬೆಳ್ಳಿ ದರ 300 ರೂ. ಕಡಿಮೆಯಾಗಿ 60,000 ರೂ. ಇದೆ.
ಇನ್ನು, ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 47,650 ರೂ. & 1 ಕೆಜಿ ಬೆಳ್ಳಿ ಬೆಲೆ 65,600 ರೂ. ದಾಖಲಾಗಿದೆ.
ರಾಜ್ಯದ ಪ್ರಮುಖ ನಗರಗಳಲ್ಲಿ ಇಂದಿನ ತೈಲ ದರ:
ರಾಜಧಾನಿ ಬೆಂಗಳೂರಿನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಯಥಾಸ್ಥಿತಿಯಲ್ಲಿದ್ದು, ಪೆಟ್ರೋಲ್ ಲೀಟರ್ಗೆ 101.96 ರೂ.ಗೆ ಮಾರಾಟವಾಗುತ್ತಿದ್ದರೆ, ಡೀಸೆಲ್ 87.91ರೂ.ಗೆ ಮಾರಾಟವಾಗುತ್ತಿದೆ.
ಇನ್ನು, ಹುಬ್ಬಳ್ಳಿಯಲ್ಲಿ ಪೆಟ್ರೋಲ್ ದರ ಒಂದು ಲೀಟರ್ಗೆ 101.65 ರೂಪಾಯಿ ಮತ್ತು ಡೀಸೆಲ್ ದರ ಒಂದು ಲೀಟರ್ಗೆ 87.65 ರೂಪಾಯಿ ಇದ್ದು,ಮೈಸೂರಿನಲ್ಲಿ ಒಂದು ಲೀಟರ್ ಪೆಟ್ರೋಲ್ಗೆ 101.44 ರೂಪಾಯಿ ಇದ್ದು, ಒಂದು ಲೀಟರ್ ಡೀಸೆಲ್ಗೆ 87.43 ರೂಪಾಯಿ ದಾಖಲಾಗಿದೆ.