PM Kisan: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ (PM Kisan) 14 ನೇ ಕಂತಿಗಾಗಿ ಕಾಯುತ್ತಿರುವ ರೈತರಿಗೆ ಸಿಹಿಸುದ್ದಿ. ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಅರ್ಹ ರೈತರ ಖಾತೆಗಳಿಗೆ ಕೇಂದ್ರವು ಇಂದು ಹಣವನ್ನು ಜಮಾ ಮಾಡಲಿದ್ದಾರೆ.
14ನೇ ಕಂತಿನಡಿ 8.5 ಕೋಟಿ ರೂ. ರೈತರ ಖಾತೆಗೆ ತಲಾ 2 ಸಾವಿರ ರೂ.ನಂತೆ ಒಟ್ಟು 17,500 ಕೋಟಿ ರೂ. ಇಂದು ಅರ್ಹರ ಖಾತೆಗೆ ಜಮಾ ಆಗಲಿದ್ದು, ಅರ್ಹರು pmkisan.gov.in ವೆಬ್‌ಸೈಟ್ ಅಥವಾ ಅವರ ಬ್ಯಾಂಕ್ ಖಾತೆಯನ್ನು ಪರಿಶೀಲಿಸಬಹುದು. ಪಿಎಂ ಕಿಸಾನ್ ಅಡಿಯಲ್ಲಿ, ಕೇಂದ್ರವು 3 ಕಂತುಗಳಲ್ಲಿ ವಾರ್ಷಿಕವಾಗಿ ರೂ.6,000 ಸಹಾಯವನ್ನು ನೀಡುತ್ತದೆ.
PM Kisan: ಇಂದು ಪ್ರಧಾನಿ ಮೋದಿಯಿಂದ ಪಿಎಂ ಕಿಸಾನ್ ಹಣ ಬಿಡುಗಡೆ!!
ಪ್ರಧಾನಿ ಮೋದಿ ಅವರು ಇಂದು ಪಿಎಂ ಕಿಸಾನ್ ಸಮ್ಮಾನ್ ನಿಧಿಯ (PM Kisan) 14ನೇ ಕಂತನ್ನು ಬಿಡುಗಡೆ ಮಾಡಲಿದ್ದಾರೆ. ಪ್ರಧಾನಿ ಮೋದಿ ಜುಲೈ 27ರಂದು ರಾಜಸ್ಥಾನ ಮತ್ತು ಜುಲೈ 28ರಂದು ಗುಜರಾತ್‌ನಲ್ಲಿ 2 ದಿನಗಳ ರಾಜ್ಯ ಪ್ರವಾಸದಲ್ಲಿ ಇರಲಿದ್ದಾರೆ. ಇಂದು ರಾಜಸ್ಥಾನದಲ್ಲಿ ಪ್ರಧಾನಿ ಮೋದಿ ಅವರು, ನೇರ ಲಾಭ ವರ್ಗಾವಣೆ ಮೂಲಕ ದೇಶದ 8.5 ಕೋಟಿ ರೈತರ ಖಾತೆಗಳಿಗೆ ಸುಮಾರು 17,000 ಕೋಟಿ ರೂ. ಪಿಎಂ ಕಿಸಾನ್ ಸಮ್ಮಾನ್ ನಿಧಿಯ 14ನೇ ಕಂತನ್ನು ಹಣವನ್ನು ಬಿಡುಗಡೆ ಮಾಡಲಿದ್ದಾರೆ.
ಇದನ್ನು ಓದಿ: ರಾಜ್ಯದಲ್ಲಿಂದು ಭಾರೀ ಮಳೆ ಸಂಭವ: ಈ ಜಿಲ್ಲೆಗಳ ಶಾಲಾ-ಕಾಲೇಜಿಗೆ ರಜೆ ಘೋಷಣೆ..!
PM Kisan: DBTಮೂಲಕ ರೈತರ ಖಾತೆಗೆ 2,000 ರೂ.
ಪ್ರಧಾನಿ ಮೋದಿ ಅವರು, 14ನೇ ಕಂತಿನ ಹಣವನ್ನು ಇಂದು 11 ಗಂಟೆಗೆ ವಿಡಿಯೋ ಕಾನ್ಪರೆನ್ಸ್ ಮೂಲಕ ದೇಶದ ರೈತರ ಸಮೂಖದಲ್ಲಿ 8.5 ಕೋಟಿ ರೈತರಿಗೆ ಖಾತೆಗೆ ಏಕ ಕಾಲಕ್ಕೆ ನೇರ ಹಣ ವರ್ಗಾವಣೆ (DBT)ಮೂಕಲ ಹಣ ವರ್ಗಾವಣೆ ಮಾಡಲಿದ್ದಾರೆ. ಪಿಎಂ ಕಿಸಾನ್ ಸಮೃದ್ಧಿ ಕೇಂದ್ರಗಳನ್ನು ಒಎನ್‌ಡಿಸಿಯಲ್ಲಿ 1500 ರೈತ ಉತ್ಪಾದಕ ಸಂಸ್ಥೆಗಳ ಆಗಮನವನ್ನು ಪ್ರಧಾನಿ ಘೋಷಿಸಲಿದ್ದಾರೆ.
PM Kisan: ಫಲಾನುಭವಿಗಳ ಪಟ್ಟಿಯಲ್ಲಿ ಹೆಸರನ್ನು ಹುಡುಕೋದು ಹೇಗೆ?
- Step 1: ಪಿಎಂ ಕಿಸಾನ್ ವೆಬ್‌ಸೈಟ್ https://pmkisan.gov.in/ ಭೇಟಿ ನೀಡಿ
- Step 2: ವೆಬ್‌ಸೈಟ್‌ನ ಬಲಭಾಗದಲ್ಲಿ ಇರುವ ಫಲಾನುಭವಿಗಳ ಪಟ್ಟಿ (Beneficiary list) ಮೇಲೆ ಕ್ಲಿಕ್ ಮಾಡಿ.
- Step 3: ನಂತರ ರಾಜ್ಯ, ಜಿಲ್ಲೆ, ಉಪ-ಜಿಲ್ಲೆ, ಬ್ಲಾಕ್ ಮತ್ತು ಹಳ್ಳಿಯಂತಹ ವಿವರಗಳನ್ನು ಆಯ್ಕೆಮಾಡಿ
- Step 4: ನಂತರ ಗೆಟ್ ರಿಪೋರ್ಟ್ ಮೇಲೆ ಕ್ಲಿಕ್ ಮಾಡಿ. ಫಲಾನುಭವಿಗಳ ಪಟ್ಟಿಯ ವಿವರಗಳು ಪ್ರಕಟವಾಗುತ್ತದೆ.
ಇದನ್ನು ಓದಿ: ಇಪಿಎಫ್ ಖಾತೆ ಹೊಂದಿದ ಉದ್ಯೋಗಿಗಳಿಗೆ ಭರ್ಜರಿ ಬಡ್ಡಿ ಘೋಷಿಸಿದ ಸರ್ಕಾರ; ಪಿಎಫ್ ಬ್ಯಾಲೆನ್ಸ್ ನೋಡುವುದು ಹೇಗೆ?
ಪ್ರಮುಖ ಲಿಂಕುಗಳು/ Important links
ವಾಟ್ಸಾಪ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಫೇಸ್ ಬುಕ್ ಪೇಜ್ | ಇಲ್ಲಿ ಕ್ಲಿಕ್ ಮಾಡಿ |
ಟೆಲಿಗ್ರಾಮ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಟ್ವಿಟ್ಟರ್ | ಇಲ್ಲಿ ಕ್ಲಿಕ್ ಮಾಡಿ |
ಶೇರ್ ಚಾಟ್ | ಇಲ್ಲಿ ಕ್ಲಿಕ್ಮಾಡಿ |