ಟಿ20ಯಿಂದ ರೋಹಿತ್, ಕೊಹ್ಲಿ ಔಟ್; ಪೃಥ್ವಿ ರಿಟರ್ನ್ಸ್‌..ಈ ತ್ರಿಮೂರ್ತಿಗಳು ಇನ್ನೂ ʻಅನ್‌ಫಿಟ್‌ʼ; ಹೀಗಿದೆ ಮೂರೂ ಮಾದರಿಯ ಭಾರತ ತಂಡ

T20 WC ಸೆಮಿಸ್‌ನಲ್ಲಿ ಹೀನಾಯ ಸೋಲಿನ ನಂತರ ಟೀಂ ಇಂಡಿಯಾವನ್ನು ಬಿಸಿಸಿಐ ಸ್ವಚ್ಛಗೊಳಿಸಿದೆ. ಹಿರಿಯ ಆಟಗಾರರಾದ ರೋಹಿತ್ & ಕೊಹ್ಲಿಯನ್ನು ಟಿ20 ಸರಣಿಯಿಂದ ಹೊರಗಿಟ್ಟು ಹುಡುಗರಿಗೆ ಆದ್ಯತೆ ನೀಡಿದೆ. ಕಳೆದ ವರ್ಷಾಂತ್ಯದಲ್ಲಿ ಕಿವೀಸ್ ವಿರುದ್ಧ,…

Indian team

T20 WC ಸೆಮಿಸ್‌ನಲ್ಲಿ ಹೀನಾಯ ಸೋಲಿನ ನಂತರ ಟೀಂ ಇಂಡಿಯಾವನ್ನು ಬಿಸಿಸಿಐ ಸ್ವಚ್ಛಗೊಳಿಸಿದೆ. ಹಿರಿಯ ಆಟಗಾರರಾದ ರೋಹಿತ್ & ಕೊಹ್ಲಿಯನ್ನು ಟಿ20 ಸರಣಿಯಿಂದ ಹೊರಗಿಟ್ಟು ಹುಡುಗರಿಗೆ ಆದ್ಯತೆ ನೀಡಿದೆ.

ಕಳೆದ ವರ್ಷಾಂತ್ಯದಲ್ಲಿ ಕಿವೀಸ್ ವಿರುದ್ಧ, ಇತ್ತೀಚೆಗೆ ನಡೆದ ಶ್ರೀಲಂಕಾ ಸರಣಿಗೆ ರೋಹಿತ್, ಕೊಹ್ಲಿಯನ್ನು ಆಯ್ಕೆ ಮಾಡದ ಬಿಸಿಸಿಐ, ನ್ಯೂಜಿಲೆಂಡ್ ಸರಣಿಯಿಂದಲೂ ಹೊರಗಿಟ್ಟಿದೆ. ಇದರಿಂದ ಇದು ರೋಹಿತ್, ಕೊಹ್ಲಿ ಟಿ20 ವೃತ್ತಿ ಜೀವನದ ಅಂತ್ಯವೇ? ಎಂಬ ಅನುಮಾನಗಳು ವ್ಯಕ್ತವಾಗುತ್ತಿವೆ.

ಪೃಥ್ವಿ ರಿಟರ್ನ್ಸ್‌..ಈ ತ್ರಿಮೂರ್ತಿಗಳು ಇನ್ನೂ ʻಅನ್‌ಫಿಟ್‌ʼ:

Vijayaprabha Mobile App free

ನ್ಯೂಜಿಲೆಂಡ್‌ ವಿರುದ್ಧದ T20 ಮತ್ತು ODI ಸರಣಿಗೆ ಭಾರತ ತಂಡವನ್ನು ಹೊಸ ಆಯ್ಕೆ ಸಮಿತಿ ಪ್ರಕಟಿಸಿದೆ. ಬಹಳ ದಿನಗಳ ನಂತರ ಪೃಥ್ವಿ ಶಾ T20 ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಬುಮ್ರಾ, ರವೀಂದ್ರ ಜಡೇಜಾ ಮತ್ತು ಸಂಜು ಸಾಮ್ಸನ್‌ ಇನ್ನೂ ʻಅನ್‌ಫಿಟ್‌ʼ ಆಗಿದ್ದು, ಆಯ್ಕೆಗೆ ಪರಿಗಣಿಸಲಾಗಿಲ್ಲ. ವಿರಾಟ್‌ ಕೊಹ್ಲಿ ಮತ್ತು ರೋಹಿತ್‌ ಶರ್ಮಾ ಅವರನ್ನು T20 ತಂಡದಿಂದ ಹೊರಗಿಡಲಾಗಿದೆ. ಮದುವೆಯ ಕಾರಣದಿಂದಾಗಿ ಕೆ.ಎಲ್‌. ರಾಹುಲ್‌ ಈ ಬಾರಿ ಆಡುತ್ತಿಲ್ಲ.

ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಗೆ ಭಾರತ ತಂಡ ಪ್ರಕಟ:

ಜ.27ರಿಂದ ನಡೆಯಲಿರುವ ನ್ಯೂಜಿಲೆಂಡ್ ವಿರುದ್ಧದ 3 ಪಂದ್ಯಗಳ ಟಿ20 ಸರಣಿಗೆ ಬಿಸಿಸಿಐ ಭಾರತ ತಂಡವನ್ನು ಪ್ರಕಟಿಸಿದೆ. ಹಾರ್ದಿಕ್ ಪಾಂಡ್ಯ ಕ್ಯಾಪ್ಟನ್ ಆಗಿದ್ದು, ಸೂರ್ಯಕುಮಾರ್ ಉಪನಾಯಕರಾಗಿದ್ದಾರೆ. ಇಶಾನ್ ಕಿಶನ್, ರುತುರಾಜ್ ಗಾಯಕ್ವಾಡ್, ಗಿಲ್, ದೀಪಕ್ ಹೂಡಾ, ತ್ರಿಪಾಠಿ, ಜಿತೇಶ್ ಶರ್ಮಾ, ಸುಂದರ್, ಕುಲದೀಪ್, ಚಹಾಲ್, ಅರ್ಶ್ದೀಪ್, ಉಮ್ರಾನ್, ಶಿವಂ ಮಾವಿ, ಪೃಥ್ವಿ ಶಾ & ಮುಖೇಶ್ ಕುಮಾರ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ವೈಯಕ್ತಿಕ ಕಾರಣಗಳಿಂದ ರಾಹುಲ್ & ಅಕ್ಷರ್ ಅಲಭ್ಯರಾಗಿದ್ದಾರೆ.

ಕಿವೀಸ್ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡ ಪ್ರಕಟ:

ಜ.18ರಿಂದ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡವನ್ನು ಬಿಸಿಸಿಐ ಪ್ರಕಟಿಸಿದೆ.
ತಂಡ: ರೋಹಿತ್ ಶರ್ಮಾ (ಸಿ), ಹಾರ್ದಿಕ್ ಪಾಂಡ್ಯ (ವಿಸಿ), ಗಿಲ್, ಇಶಾನ್ ಕಿಶನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಕೆ.ಎಸ್.ಭರತ್(ಡಬ್ಲ್ಯುಕೆ), ವಾಷಿಂಗ್ಟನ್ ಸುಂದರ್, ಶಹಬಾಜ್ ಅಹ್ಮದ್, ಶಾರ್ದೂಲ್ ಟ್ಯಾಗೋರ್, ಚಹಲ್, ಕುಲದೀಪ್ ಯಾದವ್, ಶಮಿ ಸಿರಾಜ್, ಉಮ್ರಾನ್ ಮಲಿಕ್.

ಆಸ್ಟ್ರೇಲಿಯಾ ವಿರುದ್ಧದ ಮೊದಲ 2 ಟೆಸ್ಟ್ ಗೆ ಭಾರತ ತಂಡ;

ಭಾರತ & ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿ ಮುಂದಿನ ತಿಂಗಳಿನಿಂದ ಆರಂಭವಾಗಲಿದೆ. ಮೊದಲ 2 ಟೆಸ್ಟ್ ಪಂದ್ಯಗಳಿಗೆ ಬಿಸಿಸಿಐ ಟೀಮ್ ಇಂಡಿಯಾವನ್ನು ಪ್ರಕಟಿಸಿದೆ.

ರೋಹಿತ್(C), ಕೆ.ಎಲ್.ರಾಹುಲ್(VC), ಗಿಲ್, ಪೂಜಾರ, ಕೊಹ್ಲಿ, ಅಯ್ಯರ್, ಕೆ.ಎಸ್.ಭರತ್, ಇಶಾನ್, ಅಶ್ವಿನ್, ಅಕ್ಷರ್, ಕುಲದೀಪ್, ಜಡೇಜಾ, ಶಮಿ, ಸಿರಾಜ್, ಉಮೇಶ್, ಉನದ್ಕತ್, ಸೂರ್ಯಕುಮಾರ್ ಆಯ್ಕೆಯಾಗಿದ್ದಾರೆ. ಜಡೇಜಾರನ್ನು ಅಂತಿಮ ತಂಡಕ್ಕೆ ಸೇರಿಸುವುದು ಅವರ ಫಿಟ್ನೆಸ್ ಅನ್ನು ಅವಲಂಬಿಸಿರುತ್ತದೆಂದು ಬಿಸಿಸಿಐ ಹೇಳಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.