Gas Cylinder Rate: ಗ್ಯಾಸ್ ಸಿಲಿಂಡರ್ ಬಳಕೆದಾರರಿಗೆ ಭರ್ಜರಿ ಸಿಹಿಸುದ್ದಿ. ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಭಾರಿ ಇಳಿಕೆಯಾಗಿದೆ. ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳು (public sector oil marketing company) ಗ್ರಾಹಕರಿಗೆ ಗುಡ್ ನ್ಯೂಸ್ ನೀಡಿವೆ. ಇದರಿಂದ ಎಷ್ಟೋ ಮಂದಿಗೆ ನೆಮ್ಮದಿ ಸಿಗಲಿದೆ ಎನ್ನಬಹುದು.
ಗ್ಯಾಸ್ ಸಿಲಿಂಡರ್ ಬೆಲೆ ರೂ. 85 ಇಳಿಕೆ
ಗ್ಯಾಸ್ ಸಿಲಿಂಡರ್ ಬೆಲೆ (gas cylinder price) ರೂ. 85 ಇಳಿಕೆ ಕಂಡಿದ್ದು, ಸಿಲಿಂಡರ್ ಬೆಲೆ ಇಳಿಕೆ ನಿರ್ಧಾರ ಇಂದಿನಿಂದಲೇ ಜಾರಿಗೆ ಬರಲಿದೆ. ಆದರೆ ಈ ಬೆಲೆ ಕಡಿತ ನಿರ್ಧಾರ ಕೆಲವರಿಗೆ ಮಾತ್ರ ಅನ್ವಯಿಸುತ್ತದೆ. ವಾಣಿಜ್ಯ ಅನಿಲ ಸಿಲಿಂಡರ್‌ಗಳಿಗೆ (commercial gas cylinder) ಮಾತ್ರ ದರ ಇಳಿಕೆ ಅನ್ವಯವಾಗುತ್ತದೆ ಎಂದು ಕಂಪನಿಗಳು ಹೇಳಿಕೊಂಡಿವೆ.
ಇದನ್ನು ಓದಿ: ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಅರ್ಜಿ ಅಹ್ವಾನ
ಅಂದರೆ 14.2 ಕೆಜಿ ಗ್ಯಾಸ್ ಸಿಲಿಂಡರ್ ಬಳಸುವವರಿಗೆ ಯಾವುದೇ ಪ್ರಯೋಜನವಿಲ್ಲ. ಎಲ್‌ಪಿಜಿ ಸಿಲಿಂಡರ್ ಬೆಲೆ ಸ್ಥಿರವಾಗಿ ಮುಂದುವರಿಯುತ್ತಿದೆ ಎಂದು ಹೇಳಬಹುದು. ಆದ್ದರಿಂದ ಸಿಲಿಂಡರ್ ಬೆಲೆ ಕಡಿತದ ಫಲಿತಾಂಶವು ಕೆಲವೇ ಜನರಿಗೆ ಅನ್ವಯಿಸುತ್ತದೆ.
ಆದರೆ , ವಾಣಿಜ್ಯ ಅನಿಲ ಸಿಲಿಂಡರ್‌ಗಳ ಬೆಲೆ ಕ್ರಮೇಣ ಇಳಿಕೆಯಾಗುತ್ತಿದೆ. ಕಳೆದ ತಿಂಗಳು ಸಹ ಸಿಲಿಂಡರ್ ಬೆಲೆ ರೂ. 172 ಇಳಿದಿದ್ದು, ಮತ್ತೆ ಈಗ ಸಿಲಿಂಡರ್ ಬೆಲೆ ರೂ. 85 ಇಳಿಕೆಯಾಗಿದೆ. ಅಂದರೆ ಒಂದು ತಿಂಗಳೊಳಗೆ ಸಿಲಿಂಡರ್ ಬೆಲೆ ರೂ. 250 ಕಡಿಮೆಯಾಗಿದೆ ಎನ್ನಬಹುದು.
ವಿವಿಧ ರಾಜ್ಯಗಳಲ್ಲಿ ಗ್ಯಾಸ್ ಸಿಲಿಂಡರ್ ಬೆಲೆ ಹೀಗೆವೆ
ದೆಹಲಿಯಲ್ಲಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ ರೂ. 83.5ಇಳಿಕೆಯಾಗಿ ರೂ. 1773 ಇದೆ. ಅದೇ ಗೃಹಬಳಕೆಯ14.2 ಕೆಜಿ ಸಿಲಿಂಡರ್ ಮೇ 1 ರಂದು ದರ ರೂ.1103 ಇತ್ತು. ಈಗಲೂ ದೆಹಲಿಯಲ್ಲಿ ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆ ಅದೇ ರೀತಿ ಮುಂದುವರಿದಿದೆ.
ಇದನ್ನು ಓದಿ: ನೀವು ಈ 6 ಕಾರ್ಯಗಳನ್ನು ಪೂರ್ಣಗೊಳಿಸಿದ್ದೀರಾ? ಜೂನ್‌ನಲ್ಲಿ ಮುಕ್ತಾಯಗೊಳ್ಳುವ ಕಾರ್ಯಗಳು ಇವೇ..!
ಕೋಲ್ಕತ್ತಾದಲ್ಲಿ ದರ ಕಡಿತದ ನಂತರ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ ರೂ. 1875 ಇದ್ದು, ಮುಂಬೈನಲ್ಲಿ ಈ ದರ ರೂ.1725 , ಚೆನ್ನೈನಲ್ಲಿ ಸಿಲಿಂಡರ್ ದರ ರೂ.1937 ಇದೆ. ಈ ಹಿಂದೆ ಕೋಲ್ಕತ್ತಾದಲ್ಲಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ ರೂ.1960, ಮುಂಬೈನಲ್ಲಿ 19 ಕೆಜಿ ಸಿಲಿಂಡರ್ ದರ ರೂ.1808 ಹಾಗು ಚೆನ್ನೈನಲ್ಲಿ ಇದುವರೆಗೆ ಸಿಲಿಂಡರ್ ಬೆಲೆ ರೂ.2021 ಇತ್ತು.
ಸದ್ಯ, ರಾಜ್ಯದಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್ ದರ ₹ 2190.5 ಇದ್ದು, 5 ಕೆಜಿ ಗೃಹಬಳಕೆಯ ಸಿಲಿಂಡರ್ ದರ ಸಬ್ಸಿಡಿ ಇಲ್ಲದೆ ₹ 406.0 ಇದ್ದು, 47 ಕೆಜಿ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ದರ ಪ್ರತಿ ಸಿಲಿಂಡರ್‌ಗೆ ₹ 5472.5 ಮತ್ತು ಗೃಹೇತರ 5 ಕೆಜಿ ಎಲ್‌ಪಿಜಿ ಸಿಲಿಂಡರ್ ಬೆಲೆ ₹ 579 ಇದೆ.
ಇದನ್ನು ಓದಿ: ಕೇಂದ್ರದ ಈ ಯೋಜನೆಯಡಿ ಪತಿ ಪತ್ನಿಗೆ ತಿಂಗಳಿಗೆ 10 ಸಾವಿರ ರೂ..!