• Home
  • ಪ್ರಮುಖ ಸುದ್ದಿ
  • ಆರೋಗ್ಯ
  • ಸಿನೆಮಾ
  • ಲೋಕಲ್ ಸುದ್ದಿ
  • ರಾಜಕೀಯ
  • Dina bhavishya
  • ವೆಬ್ ಸ್ಟೋರಿಸ್
  • Jobs News
Kannada Latest news | Online Kannada News | Kannada News Live | Karnataka News | ಕನ್ನಡ ನ್ಯೂಸ್ | ವಿಜಯಪ್ರಭ- Vijayaprabha
  • Home
  • ಪ್ರಮುಖ ಸುದ್ದಿ
  • ಆರೋಗ್ಯ
  • ಸಿನೆಮಾ
  • ಲೋಕಲ್ ಸುದ್ದಿ
  • ರಾಜಕೀಯ
  • Dina bhavishya
  • ವೆಬ್ ಸ್ಟೋರಿಸ್
  • Jobs News
No Result
View All Result
  • Home
  • ಪ್ರಮುಖ ಸುದ್ದಿ
  • ಆರೋಗ್ಯ
  • ಸಿನೆಮಾ
  • ಲೋಕಲ್ ಸುದ್ದಿ
  • ರಾಜಕೀಯ
  • Dina bhavishya
  • ವೆಬ್ ಸ್ಟೋರಿಸ್
  • Jobs News
No Result
View All Result
Kannada Latest news | Online Kannada News | Kannada News Live | Karnataka News | ಕನ್ನಡ ನ್ಯೂಸ್ | ವಿಜಯಪ್ರಭ- Vijayaprabha
No Result
View All Result
  • Home
  • ಪ್ರಮುಖ ಸುದ್ದಿ
  • ಆರೋಗ್ಯ
  • ಸಿನೆಮಾ
  • ಲೋಕಲ್ ಸುದ್ದಿ
  • ರಾಜಕೀಯ
  • Dina bhavishya
  • ವೆಬ್ ಸ್ಟೋರಿಸ್
  • Jobs News
Home ಪ್ರಮುಖ ಸುದ್ದಿ

Atal Pension Scheme: ಕೇಂದ್ರದ ಈ ಯೋಜನೆಯಡಿ ಪತಿ ಪತ್ನಿಗೆ ತಿಂಗಳಿಗೆ 10 ಸಾವಿರ ರೂ..!

Atal Pension Scheme: ಕೇಂದ್ರ ಸರ್ಕಾರ (Central Govt)ಅನೇಕ ಕಲ್ಯಾಣ ಯೋಜನೆಗಳನ್ನು ತಂದಿದೆ. ಇವುಗಳ ಉಪಯೋಗ ತಿಳಿಯದೇ ಎಷ್ಟೋ ಜನ ಉಪಯೋಗಿಸಲು ಸಾಧ್ಯವಾಗುತ್ತಿಲ್ಲ. ಇಲ್ಲಿ ನಾವು ಒಂದು ಯೋಜನೆಯ ಬಗ್ಗೆ ಮಾತನಾಡುತ್ತೇವೆ. ಈ ಮೂಲಕ ಗಂಡ-ಹೆಂಡತಿಗೆ ತಿಂಗಳಿಗೆ ರೂ.10 ಸಾವಿರ ಲಾಭ ಸಿಗಲಿದೆ. ವಿವರಗಳನ್ನು ತಿಳಿಯೋಣ.

VijayaprabhabyVijayaprabha
May 28, 2023
inಪ್ರಮುಖ ಸುದ್ದಿ
0
Atal Pension Scheme
0
SHARES
0
VIEWS
Share on FacebookShare on Twitter

Atal Pension Scheme: ಕೇಂದ್ರ ಸರ್ಕಾರ (Central Govt) ಅನೇಕ ಕಲ್ಯಾಣ ಯೋಜನೆಗಳನ್ನು ತಂದಿದೆ. ಇವುಗಳ ಉಪಯೋಗ ತಿಳಿಯದೇ ಎಷ್ಟೋ ಜನ ಉಪಯೋಗಿಸಲು ಸಾಧ್ಯವಾಗುತ್ತಿಲ್ಲ. ಇಲ್ಲಿ ನಾವು ಒಂದು ಯೋಜನೆಯ ಬಗ್ಗೆ ಮಾತನಾಡುತ್ತೇವೆ. ಈ ಮೂಲಕ ಗಂಡ-ಹೆಂಡತಿಗೆ ತಿಂಗಳಿಗೆ ರೂ.10 ಸಾವಿರ ಲಾಭ ಸಿಗಲಿದೆ. ವಿವರಗಳನ್ನು ತಿಳಿಯೋಣ

ಅಸಂಘಟಿತ ವಲಯದ ಕಾರ್ಮಿಕರಿಗೆ (Unorganized Sector Labour) ಅದರಲ್ಲೂ ವಯೋವೃದ್ಧರಿಗೆ ಆದಾಯ ಭದ್ರತೆ ಕಲ್ಪಿಸಲು ಕೇಂದ್ರ ಸರ್ಕಾರ ಅಟಲ್ ಪಿಂಚಣಿ ಯೋಜನೆ (Atal Pension Scheme) ತಂದಿದ್ದು, ಈ ಯೋಜನೆಯನ್ನು ಹಣಕಾಸು ಸಚಿವ ದಿವಂಗತ ಅರುಣ್ ಜೇಟ್ಲಿ ಅವರು 2015 ರಲ್ಲಿ ಬಜೆಟ್ ಭಾಷಣದಲ್ಲಿ ಘೋಷಿಸಿದ್ದರು. ನಂತರ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರು 9 ಮೇ 2015 ರಂದು ಕೋಲ್ಕತ್ತಾದಲ್ಲಿ ಯೋಜನೆಯನ್ನು ಪ್ರಾರಂಭಿಸಿದ್ದು, ಇವುಗಳೊಂದಿಗೆ ಇನ್ನೂ ಎರಡು ಯೋಜನೆಗಳನ್ನು ಪ್ರಾರಂಭಿಸಲಾಗಿದೆ.

ಇದನ್ನು ಓದಿ: ನಿಮ್ಮ ಮೊಬೈಲ್ ಫೋನ್ ಕಳೆದುಹೋಗಿದೆಯೇ? ಕೇಂದ್ರ ಸರ್ಕಾರದ ಈ ಪೋರ್ಟಲ್ ಗೆ ಹೋಗಿ, ನೀವೇ ಹುಡುಕಬಹುದು..!

ಅಟಲ್ ಪಿಂಚಣಿ ಯೋಜನೆಗೆ ಅರ್ಹರು ಯಾರು?

Atal Pension Yojana 1
Atal Pension Yojana

ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಭೀಮಾ ಯೋಜನೆ (PMJJBY)ಮತ್ತು ಪ್ರಧಾನ ಮಂತ್ರಿ ಸರಾಕ್ಷಾ ಬಿಮಾ ಯೋಜನೆ (PMSBY)ಗಳಂತಹ ವಿಮಾ ಯೋಜನೆಗಳನ್ನು ಪ್ರಾರಂಭಿಸಲಾಗಿದೆ. ಇತ್ತೀಚೆಗೆ ಪ್ರೀಮಿಯಂ ಶುಲ್ಕವನ್ನೂ ಹೆಚ್ಚಿಸಲಾಗಿದೆ. ಅಟಲ್ ಪಿಂಚಣಿ ಯೋಜನೆಗೆ ಬಂದಾಗ… ಈ ಯೋಜನೆಯು ನಿವೃತ್ತಿಯ ನಂತರದ ಜೀವನಕ್ಕಾಗಿ ಸ್ವಯಂಪ್ರೇರಿತ ಉಳಿತಾಯವನ್ನು ಉತ್ತೇಜಿಸುತ್ತದೆ. 18 ರಿಂದ 40 ವರ್ಷ ವಯಸ್ಸಿನ ಯಾವುದೇ ಭಾರತೀಯ ನಾಗರಿಕರು ಈ ಯೋಜನೆಯಡಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಲು ಅರ್ಹರಾಗಿರುತ್ತಾರೆ.

ಇದನ್ನು ಓದಿ:BPL ಕಾರ್ಡ್ ನೀರಿಕ್ಷೆಯಲ್ಲಿ ಇದ್ದವರಿಗೆ ಜೂನ್ 1 ರಿಂದ ಹೊಸ ಅರ್ಜಿ ಆರಂಭ; ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ನೋಡಿ

60 ವರ್ಷ ತುಂಬಿದ ನಂತರ ಈ ಯೋಜನೆಯಡಿ ಕನಿಷ್ಠ ರೂ.1000 ರಿಂದ ರೂ.5000 ಪಿಂಚಣಿಯನ್ನು ನೀಡಲಾಗುತ್ತದೆ. ಮೇಲಿನ ಮೂರು ಯೋಜನೆಗಳಲ್ಲಿ ಅಟಲ್ ಪಿಂಚಣಿ ಯೋಜನೆಯು ಕೇಂದ್ರ ಸರ್ಕಾರವು ನೀಡುವ ಯೋಜನೆಗಳಲ್ಲಿ ಬಹಳ ಜನಪ್ರಿಯವಾಗಿದ್ದು, 2021-22ರಲ್ಲಿ 64 ಲಕ್ಷ ಜನರು ಈ ಯೋಜನೆಗೆ ಸೇರಿದ್ದಾರೆ. ಈಗಾಗಲೇ ಈ ಅಟಲ್ ಪಿಂಚಣಿ ಯೋಜನೆಗೆ ಸೇರ್ಪಡೆಗೊಂಡವರ ಸಂಖ್ಯೆ 4 ಕೋಟಿ ತಲುಪಿದೆ.

Parineeti Chopra Raghav Chadha share wedding photos, Priyanka Chopra blessed
Parineeti Chopra Raghav Chadha share wedding photos, Priyanka Chopra blessed
ಸೌಂದರ್ಯ ಇದ್ದರೂ ಅವಕಾಶ ಸಿಗದ ನಟಿಯರು
ಸೌಂದರ್ಯ ಇದ್ದರೂ ಅವಕಾಶ ಸಿಗದ ನಟಿಯರು
ಖ್ಯಾತ ನಟಿ ಪವಿತ್ರಾ ಲೋಕೇಶ್ ಒಂದು ದಿನದ ಸಂಭಾವನೆ ಎಷ್ಟು ಗೊತ್ತಾ? ಇಲ್ಲಿದೆ ನೋಡಿ
ಖ್ಯಾತ ನಟಿ ಪವಿತ್ರಾ ಲೋಕೇಶ್ ಒಂದು ದಿನದ ಸಂಭಾವನೆ ಎಷ್ಟು ಗೊತ್ತಾ? ಇಲ್ಲಿದೆ ನೋಡಿ
ನಟಿ ಸಾರಾ ಅಲಿ ಖಾನ್​​ ಜೊತೆ ಕ್ರಿಕೆಟರ್ ಶುಭ್​ಮನ್ ಗಿಲ್ ​ಬ್ರೇಕಪ್‌? ಇಲ್ಲಿದೆ ಸಾಕ್ಷಿ!
ನಟಿ ಸಾರಾ ಅಲಿ ಖಾನ್​​ ಜೊತೆ ಕ್ರಿಕೆಟರ್ ಶುಭ್​ಮನ್ ಗಿಲ್ ​ಬ್ರೇಕಪ್‌? ಇಲ್ಲಿದೆ ಸಾಕ್ಷಿ!
ನಟಿ ಮಹಾಲಕ್ಷ್ಮಿ ಗೆ ರವೀಂದರ್​ ಡಿವೋರ್ಸ್​ ಕೊಡ್ತಿದ್ದಾರಾ? ಈ ಬಗ್ಗೆ ನಟಿ ಹೇಳಿದ್ದೇನು?
ನಟಿ ಮಹಾಲಕ್ಷ್ಮಿ ಗೆ ರವೀಂದರ್​ ಡಿವೋರ್ಸ್​ ಕೊಡ್ತಿದ್ದಾರಾ? ಈ ಬಗ್ಗೆ ನಟಿ ಹೇಳಿದ್ದೇನು?

ಗಂಡ-ಹೆಂಡತಿ ಇಬ್ಬರೂ ತಿಂಗಳಿಗೆ ರೂ.10 ಸಾವಿರ ಪಿಂಚಣಿ

ಪತಿ ಮತ್ತು ಪತ್ನಿ ಇಬ್ಬರೂ ಈ ಯೋಜನೆಗೆ ಸೇರಬಹುದಾಗಿದ್ದು, ಇಬ್ಬರಿಗೂ 60 ವರ್ಷ ತುಂಬಿದ ನಂತರ ತಿಂಗಳಿಗೆ ರೂ.5 ಸಾವಿರ ಪಿಂಚಣಿ ಸಿಗಲಿದೆ. ಅಂದರೆ ಈ ಯೋಜನೆಯ ಮೂಲಕ ಗಂಡ-ಹೆಂಡತಿ ಇಬ್ಬರೂ ತಿಂಗಳಿಗೆ ರೂ.10 ಸಾವಿರ ಪಿಂಚಣಿ ಪಡೆಯಬಹುದಾಗಿದ್ದು, ಉಳಿತಾಯದ ವಯಸ್ಸು ಚಿಕ್ಕದಾಗಿದೆಯೋ, ಈ ಯೋಜನೆಗೆ ಸೇರುವ ನಿಮಗೆ ಹೆಚ್ಚು ಲಾಭ ಸಿಗುತ್ತದೆ.

ನೀವು 18 ನೇ ವಯಸ್ಸಿನಲ್ಲಿ ಅಟಲ್ ಪಿಂಚಣಿ ಯೋಜನೆಗೆ ಸೇರಿದರೆ, ನೀವು ತಿಂಗಳಿಗೆ 42 ರಿಂದ 210 ರೂವರೆಗೂ ಹೂಡಿಕೆ ಮಾಡಬಹುದು. ಹೆಚ್ಚುತ್ತಿರುವ ವಯಸ್ಸಿನೊಂದಿಗೆ ಈ ಪ್ರಮಾಣವು ಹೆಚ್ಚಾಗುತ್ತದೆ. ಅಟಲ್ ಪಿಂಚಣಿ ಯೋಜನೆಯಡಿ ಕನಿಷ್ಠ 20 ವರ್ಷಗಳ ಹೂಡಿಕೆ ಮಾಡಬೇಕು. ಮಾಸಿಕ, ತ್ರೈಮಾಸಿಕ ಮತ್ತು ಅರ್ಧವಾರ್ಷಿಕ ಆಧಾರದ ಮೇಲೆ ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಮಾಡಬಹುದು.

ಇದನ್ನು ಓದಿ: ಜಿಯೋದಿಂದ ಹೊಸ ಬ್ರಾಡ್‌ಬ್ಯಾಂಡ್ ಯೋಜನೆ, ಕೇವಲ ರೂ.1200ಕ್ಕೆ 3 ತಿಂಗಳ ಇಂಟರ್ನೆಟ್!

ಅಟಲ್ ಪಿಂಚಣಿ ಯೋಜನೆಗೆ ಸೇರುವುದು ಹೇಗೆ?

  • ಎಲ್ಲಾ ರಾಷ್ಟ್ರೀಕೃತ ಬ್ಯಾಂಕ್‌ಗಳು ಈ ಯೋಜನೆಯನ್ನು ನೀಡುತ್ತವೆ. ಈ ಬ್ಯಾಂಕ್‌ಗಳ ವೆಬ್‌ಸೈಟ್‌ಗೆ ಹೋಗಿ ಮತ್ತು ಅಟಲ್ ಪಿಂಚಣಿ ಖಾತೆಯನ್ನು ತೆರೆಯಬಹುದು.
  • ಅಟಲ್ ಪಿಂಚಣಿ ಅರ್ಜಿ ನಮೂನೆಗಳು ಆನ್‌ಲೈನ್ ಅಥವಾ ಬ್ಯಾಂಕ್‌ಗಳಲ್ಲಿ ಲಭ್ಯವಿದ್ದು, ಇವುಗಳನ್ನು ಡೌನ್‌ಲೋಡ್ ಮಾಡಿಕೊಂಡು ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ.
  • ಅರ್ಜಿ ನಮೂನೆಯನ್ನು ಭರ್ತಿ ಮಾಡಿದ ನಂತರ, ಮೊಬೈಲ್ ಸಂಖ್ಯೆಯ ಜೊತೆಗೆ ಆಧಾರ್ ಕಾರ್ಡ್‌ನ ನಕಲು ಪ್ರತಿಯನ್ನು ಸಹ ನೀಡಬೇಕು.
  • ಅರ್ಜಿಯನ್ನು ಅನುಮೋದಿಸಿದ ನಂತರ ನೀವು ದೃಢೀಕರಣ ಸಂದೇಶವನ್ನು ಪಡೆಯುತ್ತೀರಿ.

ಇನ್ನು, ರೂ.1000 ಪಿಂಚಣಿ ಪಡೆಯಲು.. ತಿಂಗಳಿಗೆ ರೂ.42 ವಂತಿಗೆ ನೀಡಬೇಕು. ತಿಂಗಳಿಗೆ ರೂ.5 ಸಾವಿರ ಪಿಂಚಣಿಗೆ ರೂ. 210 ಹೂಡಿಕೆ ಮಾಡಬೇಕು. ಇದೇ ತ್ರೈಮಾಸಿಕಕ್ಕೆ ರೂ. 626, ಅರ್ಧ ವಾರ್ಷಿಕ ರೂ. 1,239 ಹೂಡಿಕೆ ಮಾಡಬೇಕು. ಇನ್ನು, ನಾಮಿನಿಗೆ ಒಂದೇ ಬಾರಿಗೆ ರೂ. 8.5 ಲಕ್ಷ ಪಾವತಿಸಲಾಗುವುದು. ಈ ಮೂಲಕ ಪತಿ ಪತ್ನಿಗೆ ರೂ.10 ಸಾವಿರ ಪಿಂಚಣಿ ದೊರೆಯಲಿದೆ.

ಇದನ್ನು ಓದಿ: ನಿಮಗೆ ಪಿಎಂ ಕಿಸಾನ್ 14 ನೇ ಕಂತಿನ ಹಣ ಬೇಕಾದರೆ ಈ ರೀತಿ ಮಾಡಿ..!

Tags: (PMSBYAtal Pension Yojanacentral governmentfeaturedHow to Join Atal Pension YojanaPensionPMJJBYPradhan Mantri Jeevan Jyoti Bhima YojanaPradhan Mantri Saraksha Bima YojanaPrime Minister Narendra ModiSpouseTal Pension YojanaUnorganized Sector LabourVIJAYAPRABHA.COMಅಟಲ್ ಪಿಂಚಣಿ ಯೋಜನೆಅಟಲ್ ಪಿಂಚಣಿ ಯೋಜನೆಗೆ ಸೇರುವುದು ಹೇಗೆ?ಅಸಂಘಟಿತ ವಲಯದ ಕಾರ್ಮಿಕಕೇಂದ್ರ ಸರ್ಕಾರಗಂಡ ಹೆಂಡತಿಟಲ್ ಪಿಂಚಣಿ ಯೋಜನೆಪಿಂಚಣಿಪ್ರಧಾನ ಮಂತ್ರಿ ಜೀವನ್ ಜ್ಯೋತಿ ಭೀಮಾ ಯೋಜನೆಪ್ರಧಾನ ಮಂತ್ರಿ ಸರಾಕ್ಷಾ ಬಿಮಾ ಯೋಜನೆಪ್ರಧಾನಿ ನರೇಂದ್ರ ಮೋದಿ
Previous Post

Sanchar Saathi portal: ನಿಮ್ಮ ಮೊಬೈಲ್ ಫೋನ್ ಕಳೆದುಹೋಗಿದೆಯೇ? ಕೇಂದ್ರ ಸರ್ಕಾರದ ಈ ಪೋರ್ಟಲ್ ಗೆ ಹೋಗಿ, ನೀವೇ ಹುಡುಕಬಹುದು..!

Next Post

Dina bhavishya: 29 ಮೇ 2023 ಇಂದು ಮೇಷ ಮತ್ತು ಕನ್ಯಾ ರಾಶಿಯವರಿಗೆ ಅದ್ಭುತವಾದ ಲಾಭಗಳು…!

Next Post
Dina bhavishya

Dina bhavishya: 29 ಮೇ 2023 ಇಂದು ಮೇಷ ಮತ್ತು ಕನ್ಯಾ ರಾಶಿಯವರಿಗೆ ಅದ್ಭುತವಾದ ಲಾಭಗಳು...!

Leave a Reply Cancel reply

Your email address will not be published. Required fields are marked *

No Result
View All Result

Recent Posts

  • Bengaluru Bandh: ಕಾವೇರಿ ನೀರು ಹರಿಸುವುದನ್ನು ವಿರೋಧಿಸಿ ಇಂದು ಬಂದ್; ಏನಿರುತ್ತೆ, ಏನಿರಲ್ಲ?
  • saffron water: ಆರೋಗ್ಯವೇ ಭಾಗ್ಯ, ಕೇಸರಿ ನೀರಿನ ಅದ್ಬುತ ಪ್ರಯೋಜನಗಳು
  • Dina bhavishya: ಇಂದಿನ ಸುಕರ್ಮ ಯೋಗದಿಂದ ಈ ರಾಶಿಯವರಿಗೆ ಕೆಲಸದಲ್ಲಿ ಉತ್ತಮ ಯಶಸ್ಸು, ಜೀವನದಲ್ಲಿ ಪ್ರಗತಿ..!
  • KPSC Recruitment 2023: 230 ವಾಣಿಜ್ಯ ತೆರಿಗೆ ನಿರೀಕ್ಷಕ ಹುದ್ದೆಗಳಿಗೆ ಅರ್ಜಿ ಅಹ್ವಾನ; ಸೆಪ್ಟೆಂಬರ್ 30 ಕೊನೆ ದಿನ
  • ಅಕ್ಟೋಬರ್ 1ರಿಂದ ಈ ನಿಯಮಗಳಲ್ಲಿ ಬದಲು; ಈಗಲೇ ಈ ಕೆಲಸ ಪೂರ್ಣಗೊಳಿಸಿ

Recent Comments

    Categories

    • Dina bhavishya
    • Home
    • Jobs News
    • ಆರೋಗ್ಯ
    • ಪ್ರಮುಖ ಸುದ್ದಿ
    • ರಾಜಕೀಯ
    • ಲೋಕಲ್ ಸುದ್ದಿ
    • ಸಿನೆಮಾ
    • Home
    • ಪ್ರಮುಖ ಸುದ್ದಿ
    • ಆರೋಗ್ಯ
    • ಸಿನೆಮಾ
    • ಲೋಕಲ್ ಸುದ್ದಿ
    • ರಾಜಕೀಯ
    • Dina bhavishya
    • ವೆಬ್ ಸ್ಟೋರಿಸ್
    • Jobs News

    © 2023 vijayaprabha - Kannada News by Newbie Techy.

    ahomescontents
    No Result
    View All Result
    • Home
    • ಪ್ರಮುಖ ಸುದ್ದಿ
    • ಆರೋಗ್ಯ
    • ಸಿನೆಮಾ
    • ಲೋಕಲ್ ಸುದ್ದಿ
    • ರಾಜಕೀಯ
    • Dina bhavishya
    • ವೆಬ್ ಸ್ಟೋರಿಸ್
    • Jobs News

    © 2023 vijayaprabha - Kannada News by Newbie Techy.

    Are you sure want to unlock this post?
    Unlock left : 0
    Are you sure want to cancel subscription?
    Parineeti Chopra Raghav Chadha share wedding photos, Priyanka Chopra blessedಸೌಂದರ್ಯ ಇದ್ದರೂ ಅವಕಾಶ ಸಿಗದ ನಟಿಯರುಖ್ಯಾತ ನಟಿ ಪವಿತ್ರಾ ಲೋಕೇಶ್ ಒಂದು ದಿನದ ಸಂಭಾವನೆ ಎಷ್ಟು ಗೊತ್ತಾ? ಇಲ್ಲಿದೆ ನೋಡಿನಟಿ ಸಾರಾ ಅಲಿ ಖಾನ್​​ ಜೊತೆ ಕ್ರಿಕೆಟರ್ ಶುಭ್​ಮನ್ ಗಿಲ್ ​ಬ್ರೇಕಪ್‌? ಇಲ್ಲಿದೆ ಸಾಕ್ಷಿ!ನಟಿ ಮಹಾಲಕ್ಷ್ಮಿ ಗೆ ರವೀಂದರ್​ ಡಿವೋರ್ಸ್​ ಕೊಡ್ತಿದ್ದಾರಾ? ಈ ಬಗ್ಗೆ ನಟಿ ಹೇಳಿದ್ದೇನು?