PM Kisan: ಕೇಂದ್ರ ಸರ್ಕಾರವು (Central Govt) ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM Kisan Scheme) ಯೋಜನೆಯ ಮೂಲಕ ರೈತರಿಗೆ ಪ್ರತಿ ವರ್ಷ ರೂ.6,000 ಸಹಾಯಧನವನ್ನು ನೀಡುತ್ತಿರುವುದು ಎಂದು ನಿಮಗೆ ಗೊತ್ತಿರುವ ವಿಷಯ. ಕೇಂದ್ರ ಸರಕಾರ ಈ ಮೊತ್ತವನ್ನು ಮೂರು ಕಂತುಗಳಲ್ಲಿ ತಲಾ ರೂ.2 ಸಾವಿರದಂತೆ ರೈತರ ಖಾತೆಗೆ (Farmers account) ಜಮಾ ಮಾಡುತ್ತಿದ್ದು, ಏಪ್ರಿಲ್-ಜುಲೈ, ಆಗಸ್ಟ್-ನವೆಂಬರ್ ಮತ್ತು ಡಿಸೆಂಬರ್-ಮಾರ್ಚ್ ಕಂತುಗಳಿಗೆ ಸಂಬಂಧಿಸಿದ ಹಣವನ್ನು ಕಾಲಕಾಲಕ್ಕೆ ರೈತರ ಖಾತೆಗೆ ಜಮಾ ಮಾಡಲಾಗುತ್ತದೆ.
ಕೇಂದ್ರ ಸರ್ಕಾರ ಇದುವರೆಗೆ 13 ಕಂತುಗಳನ್ನು ಬಿಡುಗಡೆ ಮಾಡಿದ್ದು,. ಪಿಎಂ ಕಿಸಾನ್ 14ನೇ ಕಂತಿನ (PM Kisan 14th Installment) ಹಣ ಶೀಘ್ರದಲ್ಲೇ ರೈತರ ಖಾತೆಗೆ ಜಮೆಯಾಗಲಿದೆ. ಇದು ಏಪ್ರಿಲ್-ಜುಲೈ ತಿಂಗಳ ಕಂತು. ಪಿಎಂ ಕಿಸಾನ್ ಹಣವನ್ನು ಜುಲೈನಲ್ಲಿ ಯಾವಾಗ ಬೇಕಾದರೂ ಜಮಾ ಮಾಡಬಹುದು.
ಇದನ್ನು ಓದಿ: ನಿಮ್ಮ PF ಖಾತೆಯಲ್ಲಿ ಮೊಬೈಲ್ ಸಂಖ್ಯೆ, ಇಮೇಲ್ ಐಡಿ ನವೀಕರಿಸಿಲ್ಲವೇ..? ಹೀಗೆ ಮಾಡಿ
ಪಿಎಂ ಕಿಸಾನ್ (PM Kisan) 14 ನೇ ಕಂತಿನ ಹಣವನ್ನು ಮೇ ಅಂತ್ಯದೊಳಗೆ ಬಿಡುಗಡೆ ಮಾಡಲಾಗುವುದು ಎಂದು ವರದಿಯಾಗಿದ್ದು, ಈ ಬಗ್ಗೆ ಯಾವುದೇ ಅಧಿಕೃತ ಘೋಷಣೆಯಾಗಿಲ್ಲ. ಪಿಎಂ ಕಿಸಾನ್ ಹಣವನ್ನು ಪಡೆಯಲು ಅರ್ಹ ರೈತರು ಅಧಿಕೃತ ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸುವುದು ಹೇಗೆ ಎಂದು ಹಂತ ಹಂತದ ಪ್ರಕ್ರಿಯೆಯನ್ನು ತಿಳಿಯೋಣ.
ಪಿಎಂ ಕಿಸಾನ್ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?
- ಮೊದಲು https://www.pmkisan.gov.in/ ವೆಬ್‌ಸೈಟ್ ತೆರೆಯಿರಿ.
- ಮುಖಪುಟದಲ್ಲಿ ರೈತರ ಕಾರ್ನರ್ ( Farmers Corner) ವಿಭಾಗದಲ್ಲಿ ಹೊಸ ರೈತ ನೋಂದಣಿಯ (New Farmer Registration) ಮೇಲೆ ಕ್ಲಿಕ್ ಮಾಡಿ.
- ಅದರ ನಂತರ ನೀವು ಗ್ರಾಮೀಣ ರೈತರಾಗಿದ್ದರೆ ಗ್ರಾಮೀಣ ರೈತ ನೋಂದಣಿ (Rural Farmer Registration) ಮತ್ತು ನೀವು ನಗರ ರೈತರಾಗಿದ್ದರೆ ನಗರ ರೈತ ನೋಂದಣಿ (Urban Farmer Registration) ಆಯ್ಕೆಮಾಡಿ.
- ನಂತರ ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಮತ್ತು ರಾಜ್ಯದ ಹೆಸರನ್ನು ಆಯ್ಕೆ ಮಾಡಿ.
- ಅದರ ನಂತರ ಕ್ಯಾಪ್ಚಾ ಕೋಡ್ ನಮೂದಿಸಿ ಗೆಟ್ ಒಟಿಪಿ (Get OTP) ಮೇಲೆ ಕ್ಲಿಕ್ ಮಾಡಿ, ಮೊಬೈಲ್ ಸಂಖ್ಯೆಗೆ ಕಳುಹಿಸಿದ OTP ಅನ್ನು ನಮೂದಿಸಿ.
- ಅದರ ನಂತರ ರೈತರ ಸಂಪೂರ್ಣ ವಿವರಗಳು ಮತ್ತು ಭೂಮಿಗೆ ಸಂಬಂಧಿಸಿದ ವಿವರಗಳನ್ನು ನಮೂದಿಸಿ ನೋಂದಣಿ ಪೂರ್ಣಗೊಳಿಸಬೇಕು.
- ಪಿಎಂ ಕಿಸಾನ್ ಅರ್ಹರ ಪಟ್ಟಿಯಲ್ಲಿ ಸೇರ್ಪಡೆಗೊಂಡರೆ, ಪ್ರತಿ ನಾಲ್ಕು ತಿಂಗಳಿಗೊಮ್ಮೆ ರೂ.2,000 ಜಮಾ ಮಾಡಲಾಗುತ್ತದೆ. ಪಿಎಂ ಕಿಸಾನ್ 14 ನೇ ಕಂತಿನ ಬಿಡುಗಡೆಯ ನಂತರ ಹಣವನ್ನು ಸ್ವೀಕರಿಸಲಾಗಿದೆಯೇ ಎಂದು ಪರಿಶೀಲಿಸಿ.
ಇದನ್ನು ಓದಿ: ಸರ್ಕಾರದಿಂದ ಉಚಿತ ವಿದ್ಯುತ್, 2000ರೂ ನೀಡಲು ಡೇಟ್ ಫಿಕ್ಸ್
ಪಿಎಂ ಕಿಸಾನ್ ಯೋಜನೆಯಡಿ ಬಿಡುಗಡೆಯಾದ ಹಣ ಪರಿಶೀಲಿಸುವುದು ಹೇಗೆ?
- ಮೊದಲು https://www.pmkisan.gov.in/ ವೆಬ್‌ಸೈಟ್ ತೆರೆಯಿರಿ. ಮುಖಪುಟದಲ್ಲಿ ರೈತರ ಕಾರ್ನರ್ (Farmers Corner ) ವಿಭಾಗದಲ್ಲಿ ಫಲಾನುಭವಿ ಸ್ಥಿತಿಯ (Beneficiary Status) ಮೇಲೆ ಕ್ಲಿಕ್ ಮಾಡಿ.
- ನೋಂದಣಿ ಸಂಖ್ಯೆ ಅಥವಾ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು. ಕ್ಯಾಪ್ಚಾ ನಮೂದಿಸಿ Get Data ಮೇಲೆ ಕ್ಲಿಕ್ ಮಾಡಿ. ಫಲಾನುಭವಿಯ ಸ್ಥಿತಿಯು ಪರದೆಯ ಮೇಲ್ಭಾಗದಲ್ಲಿ ಕಾಣಿಸುತ್ತದೆ.
ಇದನ್ನು ಓದಿ: ಗ್ಯಾರಂಟಿ ಯೋಜನೆ ಲಾಭಕ್ಕಾಗಿ ಬಿಪಿಎಲ್ ಕಾರ್ಡ್ಗೆ ಮುಗಿಬಿದ್ದ ಜನರು; ಬಿಗ್ ಶಾಕ್ ನೀಡಿದ ಆಹಾರ ಇಲಾಖೆ!