Manmohan Singh : ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ (Manmohan Singh) 92ನೇ ವಯಸ್ಸಿನಲ್ಲಿ ನಿಧನರಾಗಿದ್ದು, ಅವರ ಜೀವನ ಚರಿತ್ರೆ, ಮಾಡಿದ ಸಾಧನೆ ಹಾಗು ದೇಶಕ್ಕೆ ನೀಡಿದ ಕೊಡುಗೆಗಳ ಮಾಹಿತಿ ಇಲ್ಲಿದೆ
1932ರ ಸೆಪ್ಟೆಂಬರ್ 26ರಂದು ಅವಿಭಜಿತ ಭಾರತದ ಪಂಜಾಬ್ ಪ್ರಾಂತ್ಯದಲ್ಲಿ ಜನಿಸಿದ್ದ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರು , ಇಂಗ್ಲೆಂಡ್ ನ ಕೇಂಬ್ರಿಜ್ ವಿಶ್ವವಿದ್ಯಾಲಯದಲ್ಲಿ1957ರಲ್ಲಿ ಪ್ರಥಮ ದರ್ಜೆಯೊಂದಿಗೆ ಅರ್ಥಶಾಸ್ತ್ರದಲ್ಲಿ ಆನರ್ಸ್ ಪದವಿ ಪಡೆದರು. 1962ರಲ್ಲಿ ಆಕ್ಸ್ ಫರ್ಡ್ ವಿಶ್ವವಿದ್ಯಾಲಯದ ನಫ್ ಫೀಲ್ಡ್ ಕಾಲೇಜಿನಿಂದ ಅರ್ಥಶಾಸ್ತ್ರದಲ್ಲಿ ಡಿ.ಫಿಲ್ ಗೌರವ ಪಡೆದ ಮನಮೋಹನ್ ಸಿಂಗ್ ಅವರ ಕೃತಿ ಭಾರತದ ರಫ್ತು ಸ್ಥಿತಿ ಹಾಗು ಸ್ವಾವಲಂಬಿ ಸುಸ್ಥಿರ ಪ್ರಗತಿಯಲ್ಲಿ ಅದರ ಭವಿಷ್ಯ ಭಾರತದ ಆಂತರಿಕ ಆಧಾರಿತ ವ್ಯಾಪಾರ ನೀತಿಯ ಆರಂಭಿಕ ವಿಮರ್ಶೆಯಾಗಿತ್ತು.
ಇದನ್ನೂ ಓದಿ: BIG BREAKING | ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಿಧಿವಶ
ದೇಶದ ಆರ್ಥಿಕ ಸುಧಾರಣೆಗೆ ಅಡಿಪಾಯ ಹಾಕಿದ ಮಹಾನ್ ನಾಯಕ ಮನಮೋಹನ್ ಸಿಂಗ್
ದೇಶದ ಆರ್ಥಿಕ ಸುಧಾರಣೆಗಳ ದಿಟ್ಟ ಹೆಜ್ಜೆ ಕೈಗೊಂಡು, ಆಧುನಿಕ ಭಾರತದ ಆರ್ಥಿಕತೆಯ ರೂವಾರಿ ಎನಿಸಿದ್ದ ಮನಮೋಹನ್ ಸಿಂಗ್ ಅವರು, 1991ರ ಅಕ್ಟೋಬರ್‍ನಲ್ಲಿ ಮೊದಲ ಬಾರಿಗೆ ರಾಜ್ಯಸಭೆ ಪ್ರವೇಶಿಸಿದ್ದರು. ಮನಮೋಹನ್ ಸಿಂಗ್ ಅವರು 1991ರಿಂದ 1996ರವರೆಗೆ ನರಸಿಂಹ ರಾವ್ ಸಂಪುಟದಲ್ಲಿ ಹಣಕಾಸು ಸಚಿವರಾಗಿದ್ದ ಆರ್ಥಿಕ ಸುಧಾರಣೆಗಳನ್ನು ಪರಿಚಯಿಸಿದರು. ಅವರ ಅಧಿಕಾರಾವಧಿಯಲ್ಲಿ ಅತ್ಯಧಿಕ GDP ಬೆಳವಣಿಗೆ ದರ 10.2 ಪ್ರತಿಶತ ದಾಖಲಾಗಿದ್ದು, ಶೇ.27ರಷ್ಟು ಸೀಟುಗಳನ್ನು ಹಿಂದುಳಿದ ವರ್ಗಗಳಿಗೆ ಹಂಚಿಕೆ ಮಾಡಲಾಗಿತ್ತು. ಬಳಿಕ 2004 ರಿಂದ 2014ರವರೆಗೆ ದೇಶದ ಪ್ರಧಾನಿಯಾಗಿದ್ದರು.
ಮಾಜಿ PM ಮನಮೋಹನ್ ಸಿಂಗ್ ಅವರ ಬಗ್ಗೆ ಎಲ್ಲರೂ ಹೇಳುವುದು ಒಂದೇ ಮಾತು. ಅದು ಅವರು ನಿಜವಾಗಿಯೂ ಜಾಸ್ತಿ ಮಾತನಾಡುವುದಿಲ್ಲ. ಬಹುತೇಕ ರಾಜಕೀಯ ನಾಯಕರಂತೆ ಅವರಲ್ಲ, ಅವರು, ಕೆಲಸ ತೋರಿಸುವ ನಾಯಕರಾಗಿದ್ದರು.
ಇದನ್ನೂ ಓದಿ: Government holiday : ಇಂದು ರಾಜ್ಯಾದ್ಯಂತ ಸರ್ಕಾರಿ ರಜೆ ಸೇರಿದಂತೆ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ!
ಏಕೈಕ ಅಲ್ಪಸಂಖ್ಯಾತ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ !
ಮಾಜಿ PM ಮನಮೋಹನ್ ಸಿಂಗ್ ಅವರ ಬಗ್ಗೆ ಎಲ್ಲರೂ ಹೇಳುವುದು ಒಂದೇ ಮಾತು. ಅದು ಅವರು ನಿಜವಾಗಿಯೂ ಜಾಸ್ತಿ ಮಾತನಾಡುವುದಿಲ್ಲ. ಬಹುತೇಕ ರಾಜಕೀಯ ನಾಯಕರಂತೆ ಅವರಲ್ಲ, ಅವರು, ಕೆಲಸ ತೋರಿಸುವ ನಾಯಕರಾಗಿದ್ದರು. ಭಾರತೀಯ ಅರ್ಥಶಾಸ್ತ್ರಜ್ಞ ಮತ್ತು ರಾಜಕಾರಣಿಯಾಗಿ ಮನಮೋಹನ್ ಸಿಂಗ್ 2004ರಿಂದ 2014ರ ವರೆಗೆ ಭಾರತದ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದ್ದು, ಏಕೈಕ ಅಲ್ಪಸಂಖ್ಯಾತರೊಬ್ಬರು ಅಂದರೆ ಸಿಖ್ ಸಮುದಾಯದವರು ಪ್ರಧಾನಮಂತ್ರಿಯಾಗಿರೋ ಕೀರ್ತಿ ಅವರಿಗೆ ಸಲ್ಲುತ್ತದೆ.
ಇದನ್ನೂ ಓದಿ: kodishri bhavishya | ನಿಜವಾಯ್ತು ಕೋಡಿಶ್ರೀಗಳು ನುಡಿದಿದ್ದ ‘ಮಾಜಿ ಪ್ರಧಾನಿ ಸಾವಿನ’ ಭವಿಷ್ಯ..!
ದುರ್ಬಲ ಪ್ರಧಾನಿಯಲ್ಲ ಮನಮೋಹನ್ ಸಿಂಗ್
ತಾನು ದುರ್ಬಲ ಪ್ರಧಾನಿ ಎಂಬ ಬಿಜೆಪಿ ಟೀಕೆಗೆ 2014ರಲ್ಲಿ ಮನಮೋಹನ್ ಸಿಂಗ್ ತಿರುಗೇಟು ನೀಡಿದ್ದರು. ʻನಾನು ವಾರದ ಪ್ರಧಾನಿಯಾಗಲು ಸಾಧ್ಯವಿಲ್ಲ. ಪರಿಸ್ಥಿತಿಗೆ ಅನುಗುಣವಾಗಿ ಚೆನ್ನಾಗಿಯೇ ಕೆಲಸ ಮಾಡಿದ್ದೇನೆ. ಇತಿಹಾಸವು ನನ್ನನ್ನು ಹೆಚ್ಚು ದಯೆಯಿಂದ ನೆನಪಿಸಿಕೊಳ್ಳುತ್ತದೆʼ ಎಂದು ಹೇಳಿದ್ದರು. RTI, ಉದ್ಯೋಗ ಖಾತ್ರಿ, ಅಮೆರಿಕದೊಂದಿಗೆ ಪರಮಾಣು ಒಪ್ಪಂದ, ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ & ಪ್ರಬಲ ವಿದೇಶಾಂಗ ನೀತಿಗಳಿಂದ ಅವರು ದುರ್ಬಲ ಪ್ರಧಾನಿ ಅಲ್ಲ ಎಂದು ಸಾಬೀತುಪಡಿಸಿದರು.
ದೇಶಕ್ಕೆ ಹೆಮ್ಮೆಯ ಮನಮೋಹನ್ ಸಿಂಗ್ ನೀಡಿದ ಕೊಡುಗೆಗಳಿವು..
- ಮುಕ್ತ ಮಾರುಕಟ್ಟೆ: 1994-95ರ ಬಜೆಟ್‌ನಲ್ಲಿ ಭಾರೀ ಬದಲಾವಣೆಗೆ ಕೈ ಹಾಕಿದರು. ಭಾರತ ಇಂದು ವಿಶ್ವದ 5ನೇ ದೊಡ್ಡ ಆರ್ಥಿಕತೆ ಹೊಂದಿದೆ ಎನ್ನುವುದಾದರೆ, ಅದಕ್ಕೆ ಸಿಂಗ್ ಹಾಕಿದ ಅಡಿಪಾಯ ಯಾರೂ ಮರೆಯುವಂತಿಲ್ಲ.
- ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (NREGA)
- ಮಾಹಿತಿ ಹಕ್ಕು ಕಾಯಿದೆ (RTI)
- ಆಧಾರ್ ಸೌಲಭ್ಯ.
- ನೇರ ಲಾಭ ವರ್ಗಾವಣೆ.
- ಕೃಷಿ ಸಾಲ ಮನ್ನಾ (2008): ಸುಮಾರು 60,000 ಕೋಟಿ ಸಾಲ ಮನ್ನಾ ಮೂಲಕ ರೈತರಿಗೆ ಪರಿಹಾರ ಒದಗಿಸುವ ಕಾರ್ಯ ಸಿಂಗ್ ಅಧಿಕಾರಾವಧಿಯಲ್ಲಿ ಆಗಿತ್ತು.