Guarantee Schemes: ಇಂದು ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ, ಹಾಗು ಉಪಮುಖ್ಯಮಂತ್ರಿಯಾಗಿ ಡಿ ಕೆ ಶಿವಕುಮಾರ್ ಪ್ರಮಾಣವಚನ ಸ್ವೀಕರಿಸಿದ ಬಳಿಕ ಕಾಂಗ್ರೆಸ್ನ ಮೊದಲ ಸಂಪುಟ ಸಭೆ ನಡೆಯಲಿದೆ. ಈ ವೇಳೆ ಕಾಂಗ್ರೆಸ್ ಘೋಷಣೆ ಮಾಡಿರುವ 5 ಗ್ಯಾರಂಟಿಗಳ (Guarantee Schemes) ಜಾರಿ ಕುರಿತು ಮಹತ್ವದ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.
ಇದನ್ನು ಓದಿ: 2000 ನೋಟು ವಾಪಸಾತಿ, ಯಾರ ಮೇಲೆ ಹೇಗೆ ಪರಿಣಾಮ ಬೀರುತ್ತದೆ? ಭೂಮಿಯ ಬೆಲೆ ಕುಸಿಯುತ್ತದೆಯೇ?
ಹೌದು, ಈ ಮೊದಲೇ ಕಾಂಗ್ರೆಸ್ ಹೇಳಿದ್ದಂತೆ ಈ 5 ಗ್ಯಾರಂಟಿಗಳನ್ನು ಮೊದಲ ಸಂಪುಟ ಸಭಯಲ್ಲೇ ಚರ್ಚೆ ಮಾಡಿ ಜಾರಿ ಮಾಡುವುದಾಗಿ ತಿಳಿಸಿದೆ. ಹೀಗಾಗಿ ಕಾಂಗ್ರೆಸ್ನ ಮೊದಲ ಸಂಪುಟ ಸಭೆ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಗೃಹ ಜ್ಯೋತಿ, ಗೃಹಲಕ್ಷ್ಮಿ, ಯುವನಿಧಿ ಹಾಗೂ ಉಚಿತ ಬಸ್ ಪ್ರಯಾಣ ಸೇರಿ 10 ಕೆ.ಜಿ ಅಕ್ಕಿ ನೀಡುವ ಯೋಜನೆಯ ರೂಪುರೇಷೆ ಚರ್ಚೆಯಾಗಲಿದೆ.
ಇದನ್ನು ಓದಿ: BSNL ಬಂಪರ ಆಫರ್, 50 ಪ್ರತಿಶತ ರಿಯಾಯಿತಿಯೊಂದಿಗೆ ರೂ.49 ಕ್ಕೆ OTT ಪ್ಲಾನ್ ಲಭ್ಯ!
ಕಾಂಗ್ರೆಸ್ ಗ್ಯಾರಂಟಿಗೆ ಬೇಕಿದೆ 62 ಸಾವಿರ ಕೋಟಿ ರೂ..!!
ಕಾಂಗ್ರೆಸ್ ಸರ್ಕಾರ ರಾಜ್ಯದ ಜನತೆಗೆ 5 ಗ್ಯಾರಂಟಿ ಘೋಷಿಸಿದ್ದು, ಸದ್ಯ ಈ ಗ್ಯಾರಂಟಿಗಳು ಎಷ್ಟರ ಮಟ್ಟಿಗೆ ಜಾರಿಯಾಗಲಿದೆ ಎಂಬುದು ಕುತೂಹಲ ಮೂಡಿಸಿದೆ. ಈ ನಡುವೆ ಈ ಗ್ಯಾರಂಟಿಗಳ ಈಡೇರಿಸಲು ಬರೋಬ್ಬರಿ 62 ಸಾವಿರ ಕೋಟಿ ಅಗತ್ಯವಿದೆ. ಇದು ರಾಜ್ಯಕ್ಕೆ ಹೆಚ್ಚುವರಿ ಹೊರೆಯಾಗಲಿದ್ಯಾ ಅಥವಾ ಕೊರತೆ ಉಂಟಾಗದಂತೆ ಸರ್ಕಾರ ನಿರ್ವಹಣೆ ಮಾಡಲಿದ್ಯಾ ಎಂಬುದು ತಿಳಿದುಬರಬೇಕಿದೆ. ಇನ್ನು ಕಾಂಗ್ರೆಸ್ ಈ ಯೋಜನೆಗಳ ಜಾರಿಗೆ ಕೇವಲ 47 ಸಾವಿರ ಕೋಟಿ ರೂಪಾಯಿ ಸಾಕಾಗಲಿದೆ ಎನ್ನುತ್ತಿದೆ, ಇದು ರಾಜ್ಯ ಬಜೆಟ್ನ ಶೇ.15ರಷ್ಟು ಎಂದು ತಿಳಿಸಿದೆ.
ಯಾವ ಗ್ಯಾರಂಟಿ ಯೋಜನೆಗಳಿಗೆ ಎಷ್ಟು ದುಡ್ಡು ಬೇಕು?
ಕಾಂಗ್ರೆಸ್ ಘೋಷಿಸಿರುವ 5 ಉಚಿತ ಗ್ಯಾರಂಟಿ ಯೋಜನೆಗಳಿಗೆ ಎಷ್ಟು ದುಡ್ಡು ಬೇಕು ಅನ್ನುವ ಬಗ್ಗೆ ಆರ್ಥಿಕ ತಜ್ಞರು ವಿಶ್ಲೇಷಣೆ ಮಾಡಿದ್ದಾರೆ.
- 200 ಯೂನಿಟ್ ಉಚಿತ ವಿದ್ಯುತ್ ಯೋಜನೆಗೆ ಮಾಸಿಕ ಕನಿಷ್ಠ ₹26000 ಕೋಟಿ,
- ಮನೆ ಯಜಮಾನಿಗೆ ₹2000 ನೀಡಲು ವಾರ್ಷಿಕ ₹36,000 ಕೋಟಿ ,
- 10kgಕೆಜಿ ಉಚಿತ ಅಕ್ಕಿ ನೀಡಲು ವಾರ್ಷಿಕ ₹10,000 ಕೋಟಿ,
- ಮಹಿಳೆಯರ ಉಚಿತ ಬಸ್ ಪ್ರಯಾಣಕ್ಕೆ ವಾರ್ಷಿಕ ₹3250 ಕೋಟಿ
- ನಿರುದ್ಯೋಗ ಭತ್ಯೆ ನೀಡಲು ₹3000 ಕೋಟಿ ಬೇಕಾಗುತ್ತದೆ ಎಂದು ಅಂದಾಜಿಸಿದ್ದಾರೆ.
ಇದನ್ನು ಓದಿ: ನಿಮಗೆ ಬ್ಯಾಂಕ್ ಖಾತೆ ಇದೆಯೇ? ರೂ.436 ಕಟ್ ಆಗುತ್ತೆ.. ಯಾಕೆ ಗೊತ್ತೇ?