Aadhaar: ಆಧಾರ್ ಕಾರ್ಡ್ (Aadhaar Card) ಹೊಂದಿರುವವರಿಗೆ ಇದು ಉತ್ತಮ ಅವಕಾಶವಿದ್ದು, ನಿಮ್ಮ ಆಧಾರ್ ವಿಳಾಸದಂತಹ ವಿವರಗಳನ್ನು ಉಚಿತವಾಗಿ ನವೀಕರಿಸಿಕೊಳ್ಳಬಹುದು. ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಈ ಅವಕಾಶವನ್ನು ಒದಗಿಸಿದ್ದು, ತಮ್ಮ ಆಧಾರ್ ಅನ್ನು ಮರುಮೌಲ್ಯಮಾಪನ (revalidate) ಮಾಡಲು ಗುರುತಿನ ಪುರಾವೆ ಮತ್ತು ವಿಳಾಸ ಪುರಾವೆ ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕಾಗುತ್ತದೆ. ಅದರಲ್ಲೂ 10 ವರ್ಷಕ್ಕಿಂತ ಮೇಲ್ಪಟ್ಟು ಆಧಾರ್ ಕಾರ್ಡ್ ಅಪ್ ಡೇಟ್ ಮಾಡದೇ ಇರುವವರು ಕೂಡಲೇ ತಮ್ಮ ವಿವರಗಳನ್ನು ಅಪ್ ಡೇಟ್ ಮಾಡಬೇಕು ಎಂದು ಯುಐಡಿಎಐ ಸೂಚಿಸಿದೆ.
ಇದನ್ನು ಓದಿ: ಪಡಿತರ ಚೀಟಿದಾರರಿಗೆ ಭರ್ಜರಿ ಸಿಹಿ ಸುದ್ದಿ; ಈ ತಿಂಗಳಲ್ಲೇ ಸಿಗಲಿದೆ ಎರಡು ಬಾರಿ ಉಚಿತ ರೇಷನ್!
ವಿಳಾಸ ಪುರಾವೆಗಳನ್ನು ಉಚಿತವಾಗಿ ನವೀಕರಿಸಲು ಅವಕಾಶವನ್ನು ಒದಗಿಸಲು UIDAI ನಿರ್ಧರಿಸಿದ್ದು, MyAadhaar ಪೋರ್ಟಲ್ ಮೂಲಕ ಎಲ್ಲಾ ಜನರು ಉಚಿತ ಡಾಕ್ಯುಮೆಂಟ್ ನವೀಕರಣದ (document update) ಸೌಲಭ್ಯವನ್ನು ಪಡೆದುಕೊಳ್ಳಲು ವಿನಂತಿಸಲಾಗಿದ್ದು, ಈ ಉಚಿತ ಸೇವೆಯು ಮಾರ್ಚ್ 15 ರಿಂದ ಜೂನ್ 14, 2023 ರವರೆಗೆ ಲಭ್ಯವಿರುತ್ತದೆ.’ ಎಂದು ತಿಳಿಸಿದೆ.
ಇದನ್ನು ಓದಿ: ರೈತರಿಗೆ ಗುಡ್ ನ್ಯೂಸ್, ಸರ್ಕಾರದಿಂದ ಬರೋಬ್ಬರಿ 18 ಲಕ್ಷ ರೂ ನೇರವಾಗಿ ಖಾತೆಗೆ..!
ಆದರೆ, ಈ ಉಚಿತ ಸೇವೆಯು ಮೈಆಧಾರ್ ಪೋರ್ಟಲ್ (MyAadhaar Portal) ಮೂಲಕ ಮಾತ್ರ ಎಂಬುದನ್ನು ಗಮನಿಸಬೇಕು. ನೇರವಾಗಿ ಆಧಾರ್ ಕೇಂದ್ರಗಳ ಮೂಲಕ ಅಪ್ ಡೇಟ್ ಮಾಡಿದರೆ 50 ರೂ ಇರುತ್ತದೆ. ಹೆಸರು, ಹುಟ್ಟಿದ ದಿನಾಂಕ, ವಿಳಾಸದಂತಹ ಜನಸಂಖ್ಯಾ (demographic) ವಿವರಗಳನ್ನು ಬದಲಾಯಿಸಲು ಜನರು ನಿಯಮಿತ ಆನ್‌ಲೈನ್ ನವೀಕರಣ ಸೇವೆಗಳನ್ನು (regular online update services) ಬಳಸಬಹುದು. ಇನ್ನು, ಬಯೋಮೆಟ್ರಿಕ್ ನವೀಕರಣಕ್ಕಾಗಿ ಹತ್ತಿರದ ಆಧಾರ್ ಕೇಂದ್ರಗಳಿಗೆ ಹೋಗಬೇಕು.
ವಿಳಾಸ ಪುರಾವೆಯನ್ನು ಉಚಿತವಾಗಿ ಅಪ್ಲೋಡ್ ಮಾಡುವುದು ಹೇಗೆ?
- ಮೊದಲು https://myaadhaar.uidai.gov.in/ ಗೆ ಲಾಗಿನ್ ಮಾಡಿ
- ಹೆಸರು, ಲಿಂಗ, ಹುಟ್ಟಿದ ದಿನಾಂಕ, ವಿಳಾಸ ನವೀಕರಣವನ್ನು ಆಯ್ಕೆಮಾಡಿ.
- ಅದರ ನಂತರ ಅಪ್‌ಡೇಟ್ ಆಧಾರ್ ಆನ್‌ಲೈನ್ (update Aadhaar online) ಆಯ್ಕೆಯನ್ನು ಕ್ಲಿಕ್ ಮಾಡಿ.
- ಜನಸಂಖ್ಯಾ(ಡೆಮೊಗ್ರಾಫಿಕ್) ಆಯ್ಕೆಗಳಿಂದ ವಿಳಾಸ ಆಯ್ಕೆಯನ್ನು(Address option) ಆರಿಸಬೇಕು. ಅದರ ನಂತರ ಮುಂದುವರೆಯಿರಿ ಅಪ್ಡೇಟ್ ಆಧಾರ್ (proceed update aadhaar) ಅನ್ನು ಕ್ಲಿಕ್ ಮಾಡಿ.
- ನಂತರ ಸ್ಕ್ಯಾನ್ ಮಾಡಿದ ದಾಖಲೆಯ ಪ್ರತಿಯನ್ನು ಅಪ್‌ಲೋಡ್ ಮಾಡಬೇಕು. ಡೆಮೊಗ್ರಾಫಿಕ್ ಮಾಹಿತಿಯನ್ನು ನಮೂದಿಸಿ.
- ನಂತರ 50ರು. ಪಾವತಿಸಬೇಕು. (ಜೂನ್ 14 ರವರೆಗೆ ಉಚಿತವಾಗಿರುತ್ತದೆ)
- ಅದರ ನಂತರ, ಸೇವಾ ವಿನಂತಿ ಸಂಖ್ಯೆ ಜನರೇಟ್ ಆಗುತ್ತದೆ. ಸ್ಥಿತಿಯನ್ನು ತಿಳಿಯಲು ಆ ಸಂಖ್ಯೆಯನ್ನು ಸೇವ್ ಮಾಡಿಕೊಳ್ಳಬೇಕು.
- ಪರಿಶೀಲನೆಯ (internal check) ನಂತರ ನೀವು ಸಂದೇಶವನ್ನು ಪಡೆಯುತ್ತೀರಿ.
ಇದನ್ನು ಓದಿ: ಆರೋಗ್ಯವಂತ ವ್ಯಕ್ತಿಗೆ ರೂ.3 ಲಕ್ಷ ಬೆನಿಫಿಟ್; ಏಳು ಪಟ್ಟು ಹೆಚ್ಚು ಡೆತ್ ಬೆನಿಫಿಟ್!
ಹೆಸರು, ಹುಟ್ಟಿದ ದಿನಾಂಕ ಬಲಾಯಿಸುವುದು ಹೇಗೆ
- ಮೊದಲು ನೀವು ಆಧಾರ್ ಸಂಖ್ಯೆಯ ಸಹಾಯದಿಂದ https://myaadhaar.uidai.gov.in ಪೋರ್ಟಲ್‌ಗೆ ಲಾಗಿನ್ ಆಗಬೇಕು. ನೋಂದಾಯಿತ
- ಮೊಬೈಲ್ ಸಂಖ್ಯೆಗೆ (mobile number) ಕಳುಹಿಸಲಾದ ಒಂದು ಬಾರಿಯ ಪಾಸ್‌ವರ್ಡ್ (OTP) ಅನ್ನು ನಮೂದಿಸಿ.
- ಡಾಕ್ಯುಮೆಂಟ್ ನವೀಕರಣ (Update Document) ಆಯ್ಕೆಯನ್ನು ಆರಿಸಿ. ನಂತರ ಪ್ರಸ್ತುತ ವಿವರಗಳು ಕಾಣಿಸಿಕೊಳ್ಳುತ್ತವೆ.
- ಅದರಲ್ಲಿ ಹೆಸರು ನವೀಕರಿಸಲು (Update Name) ಹಾಗು ಹುಟ್ಟಿದ ದಿನಾಂಕ ನವೀಕರಿಸಲು (Update Date of Birth) ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
- ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಅಪ್‌ಲೋಡ್ ಮಾಡಬೇಕು.
- ನಂತರ 50ರೂಪಾಯಿ ಪಾವತಿಸಬೇಕು.
- ಪರಿಶೀಲನೆಯ (internal check) ನಂತರ ನೀವು ಸಂದೇಶವನ್ನು ಪಡೆಯುತ್ತೀರಿ.
ಇದನ್ನು ಓದಿ: ರೇಷನ್ ಕಾರ್ಡ್ ಇದ್ದವರು ಈ ಕೆಲಸ ಮಾಡದಿದ್ದರೆ, ರೇಷನ್ ಕಾರ್ಡ್ ರದ್ದು; ಸರ್ಕಾರದಿಂದ ಹೊಸ ರೂಲ್ಸ್ ಜಾರಿ!