ಹೊಸ ಆರ್ಥಿಕ ವರ್ಷ: ಸಿಲಿಂಡರ್ ಬೆಲೆ ಭಾರೀ ಇಳಿಕೆ, ಚಿನ್ನ ಕೊಳ್ಳಲು ಹೊಸ ನಿಯಮ, ಇಂದಿನಿಂದ‌ ಏನೆಲ್ಲಾ ಬದಲಾವಣೆ?

ಹೊಸ ಆರ್ಥಿಕ ವರ್ಷ: ಪೆಟ್ರೋಲಿಯಂ ಕಂಪನಿಗಳು ಸಾಮಾನ್ಯವಾಗಿ ಎಲ್‌ಪಿಜಿ ಸಿಲಿಂಡರ್‌ಗಳ(LPG cylinder) ಬೆಲೆಯನ್ನು ಪ್ರತಿ ತಿಂಗಳ ಮೊದಲ ದಿನ ಪರಿಷ್ಕರಣೆ ಮಾಡುತ್ತವೆ. ಅದೇ ರೀತಿ,ಹೊಸ ಹಣಕಾಸು ವರ್ಷದ ಮೊದಲ ದಿನವಾದ ಏಪ್ರಿಲ್ 1 ರಂದು…

LPG cylinder and gold

ಹೊಸ ಆರ್ಥಿಕ ವರ್ಷ: ಪೆಟ್ರೋಲಿಯಂ ಕಂಪನಿಗಳು ಸಾಮಾನ್ಯವಾಗಿ ಎಲ್‌ಪಿಜಿ ಸಿಲಿಂಡರ್‌ಗಳ(LPG cylinder) ಬೆಲೆಯನ್ನು ಪ್ರತಿ ತಿಂಗಳ ಮೊದಲ ದಿನ ಪರಿಷ್ಕರಣೆ ಮಾಡುತ್ತವೆ. ಅದೇ ರೀತಿ,ಹೊಸ ಹಣಕಾಸು ವರ್ಷದ ಮೊದಲ ದಿನವಾದ ಏಪ್ರಿಲ್ 1 ರಂದು ಸಿಲಿಂಡರ್‌ ದರದಲ್ಲಿ ಇಳಿಕೆಯಾಗಿದ್ದು, ಗ್ರಾಹಕರಿಗೆ ದೊಡ್ಡ ರಿಲೀಫ್ ಸಿಕ್ಕಿದೆ.

ಇದನ್ನು ಓದಿ: ಕೇಂದ್ರದಿಂದ ಭರ್ಜರಿ ಗುಡ್ ನ್ಯೂಸ್: ಹಿರಿಯ ನಾಗರಿಕ, ಸುಕನ್ಯಾ ಸಮೃದ್ಧಿ ಸೇರಿದಂತೆ ಈ ಉಳಿತಾಯ ಯೋಜನೆಗಳ ಮೇಲೆ ಬಂಪರ್ ಬಡ್ಡಿ..ಇಂದಿನಿಂದಲೇ ಜಾರಿ!

ಹೌದು, 2024 ರ ಆರ್ಥಿಕ ವರ್ಷದ ಮೊದಲ ದಿನದಂದು ವಾಣಿಜ್ಯ ಗ್ಯಾಸ್ ಸಿಲಿಂಡರ್‌ಗಳ ದರವನ್ನು (Commercial Gas Cylinders Rate) ಸುಮಾರು ₹92 ರಷ್ಟು ಕಡಿತಗೊಳಿಸಲಾಗಿದೆ. ಇಂದಿನಿಂದ ದೆಹಲಿಯಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ ರೂ.2028 ಇರಲಿದೆ. ಆದರೆ, ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ (domestic gas cylinder price) ಯಾವುದೇ ಬದಲಾವಣೆಯಾಗಿಲ್ಲ. ಕಳೆದ ತಿಂಗಳು ಗೃಹಬಳಕೆಯ ಸಿಲಿಂಡರ್‌ ಬೆಲೆ 50 ರೂ. ಏರಿಕೆ ಮಾಡಲಾಗಿತ್ತು.

Vijayaprabha Mobile App free

ಇದನ್ನು ಓದಿ: Ration Card ಹೊಂದಿರುವವರಿಗೆ ಇನ್ಮುಂದೆ ಉಚಿತವಾಗಿ ಸಿಗಲಿದೆ 150 ಕೆಜಿ ಅಕ್ಕಿ, ಇವರಿಗೆ ಮಾತ್ರ..!

ಚಿನ್ನ ಕೊಳ್ಳಲು ಇಂದಿನಿಂದ ಹೊಸ ನಿಯಮ:

gold silver price

ಚಿನ್ನ ಖರೀದಿ ಮತ್ತು ಮಾರಾಟ (gold buying and selling) ವಿಚಾರದಲ್ಲಿ ಇಂದಿನಿಂದ ಹೊಸ ನಿಯಮ ಜಾರಿಯಾಗಲಿದ್ದು, ಆರು ಅಂಕಿಯ ವಿಶಿಷ್ಟ ಗುರುತಿನ ಸಂಖ್ಯೆ-HUID ಇಲ್ಲದಿರುವ ಹಾಲ್‌ಮಾರ್ಕ್ ಮಾಡಿದ ಚಿನ್ನದ ಆಭರಣಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದ್ದು, ಇಂದಿನಿಂದ ಈ ನಿಯಮ ಜಾರಿಗೆ ಬರಲಿದೆ.

ಈ ನಿಯಮದಂತೆ ಹಾಲ್‌ ಮಾರ್ಕ್‌(Hallmark) ಮತ್ತು HUID ಸಂಖ್ಯೆ ಇಲ್ಲದ ಚಿನ್ನ ಅಥವಾ ಆಭರಣಗಳನ್ನು ಖರೀದಿಸಲು ಅಥವಾ ಮಾರಾಟ ಮಾಡಲು ಸಾಧ್ಯವಿಲ್ಲ. ವರ್ತಕರು ಮತ್ತು ಗ್ರಾಹಕರು ಇದನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಕೇಂದ್ರ ಆದೇಶಿಸಿದೆ.

ಇದನ್ನು ಓದಿ: 7 ದಿನಗಳಲ್ಲಿ ಪಾನ್ ಕಾರ್ಡ್‌ ಪಡೆಯುವುದು ಹೇಗೆ? PAN ಕಳೆದು ಹೋದರೆ 5 ನಿಮಿಷದಲ್ಲಿ ಹೀಗೆ ಡೌನ್‌ಲೋಡ್ ಮಾಡಿ

ಹೊಸ ಆರ್ಥಿಕ ವರ್ಷ.. ಏನೆಲ್ಲಾ ಬದಲಾವಣೆ?

Price of essential items

* ಹೊಸ ತೆರಿಗೆ ಪದ್ಧತಿ ಲಭ್ಯ: ವಾರ್ಷಿಕ 7.5 ಲಕ್ಷ ರೂ.ವರೆಗೆ ಆದಾಯವಿದ್ದರೆ ತೆರಿಗೆ ವಿನಾಯಿತಿ

*ಕಚ್ಚಾ ವಸ್ತು ದುಬಾರಿ ಹಿನ್ನೆಲೆ ಕಾರುಗಳು ತುಟ್ಟಿ, ಹೀರೋ ಮೋಟೋಕಾರ್ಪ್‌ನ ವಾಹನಗಳ ಬೆಲೆಗಳು 2% ರಷ್ಟು ಹೆಚ್ಚಳ

*380ಕ್ಕೂ ಹೆಚ್ಚು ಔಷಧಗಳ ಬೆಲೆ ದುಬಾರಿ

*ವೃದ್ಧರು ಉಳಿತಾಯ ಯೋಜನೆಯಡಿ ಇಟ್ಟಿರುವ ಠೇವಣಿ ಮೊತ್ತ ಹೆಚ್ಚಳ

*ಆನ್‌ಲೈನ್‌ ಗೇಮ್ಸ್‌ನಲ್ಲಿ 10 ಸಾವಿರಕ್ಕಿಂತ ಹೆಚ್ಚು ಹಣ ಗೆದ್ದರೆ ತೆರಿಗೆ ವರ್ಷಕ್ಕೆ 5 ಲಕ್ಷ ರೂ.ಗಿಂತ ದುಬಾರಿ ವಿಮೆಗಳಿಗೆ ತೆರಿಗೆ

ಇದನ್ನು ಓದಿ: ಪಡಿತರ ಚೀಟಿದಾರರಿಗೆ ಸರ್ಕಾರದಿಂದ ಮಹತ್ವದ ಆದೇಶ; ಆಯುಷ್ಮಾನ್ ಭಾರತ್ ಕಾರ್ಡ್​ ವಿತರಣೆ ಸಂಪೂರ್ಣ ಸ್ಥಗಿತ

*ಮಹಿಳಾ ಸಮ್ಮಾನ್ ಯೋಜನೆ ಪ್ರಾರಂಭ

*6 ಅಂಕಿಗಳ ಹಾಲ್‌ಮಾರ್ಕ್ ಮಾಡಿದ ಚಿನ್ನದ ಆಭರಣ ಮಾರಾಟ

*ಪ್ರಧಾನ ಮಂತ್ರಿ ವಯ ವಂದನಾ ಯೋಜನೆ ಬಂದ್

*PAN ಇಲ್ಲದೆ PF ಹಿಂಪಡೆಯುವಿಕೆಯ ಮೇಲೆ ಕಡಿಮೆ ತೆರಿಗೆ

*ಹಿರಿಯ ನಾಗರಿಕ, ಸುಕನ್ಯಾ ಸಮೃದ್ಧಿ ಸೇರಿದಂತೆ ಈ ಉಳಿತಾಯ ಯೋಜನೆಗಳ ಮೇಲೆ ಬಡ್ಡಿದರ ಹೆಚ್ಚಳ

ಇದನ್ನು ಓದಿ: ಎಣ್ಣೆ ಹೊಡೆದಾಗ ಕೊಹ್ಲಿ ಸ್ಥಿತಿ ಹೇಗಿರುತ್ತೆ.. ವಿರಾಟ್ ಕೊಹ್ಲಿ ಕುಡಿತದ ಸೀಕ್ರೆಟ್‌ ಬಿಚ್ಚಿಟ್ಟ ಪತ್ನಿ ಅನುಷ್ಕಾ ಶರ್ಮಾ

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.