• Home
  • ಪ್ರಮುಖ ಸುದ್ದಿ
  • ಆರೋಗ್ಯ
  • ಸಿನೆಮಾ
  • ಲೋಕಲ್ ಸುದ್ದಿ
  • ರಾಜಕೀಯ
  • Dina bhavishya
  • ವೆಬ್ ಸ್ಟೋರಿಸ್
  • Jobs News
Kannada Latest news | Online Kannada News | Kannada News Live | Karnataka News | ಕನ್ನಡ ನ್ಯೂಸ್ | ವಿಜಯಪ್ರಭ- Vijayaprabha
  • Home
  • ಪ್ರಮುಖ ಸುದ್ದಿ
  • ಆರೋಗ್ಯ
  • ಸಿನೆಮಾ
  • ಲೋಕಲ್ ಸುದ್ದಿ
  • ರಾಜಕೀಯ
  • Dina bhavishya
  • ವೆಬ್ ಸ್ಟೋರಿಸ್
  • Jobs News
No Result
View All Result
  • Home
  • ಪ್ರಮುಖ ಸುದ್ದಿ
  • ಆರೋಗ್ಯ
  • ಸಿನೆಮಾ
  • ಲೋಕಲ್ ಸುದ್ದಿ
  • ರಾಜಕೀಯ
  • Dina bhavishya
  • ವೆಬ್ ಸ್ಟೋರಿಸ್
  • Jobs News
No Result
View All Result
Kannada Latest news | Online Kannada News | Kannada News Live | Karnataka News | ಕನ್ನಡ ನ್ಯೂಸ್ | ವಿಜಯಪ್ರಭ- Vijayaprabha
No Result
View All Result
  • Home
  • ಪ್ರಮುಖ ಸುದ್ದಿ
  • ಆರೋಗ್ಯ
  • ಸಿನೆಮಾ
  • ಲೋಕಲ್ ಸುದ್ದಿ
  • ರಾಜಕೀಯ
  • Dina bhavishya
  • ವೆಬ್ ಸ್ಟೋರಿಸ್
  • Jobs News
Home ಪ್ರಮುಖ ಸುದ್ದಿ

ಪಡಿತರ ಚೀಟಿದಾರರಿಗೆ ಸರ್ಕಾರದಿಂದ ಮಹತ್ವದ ಆದೇಶ; ಆಯುಷ್ಮಾನ್ ಭಾರತ್ ಕಾರ್ಡ್​ ವಿತರಣೆ ಸಂಪೂರ್ಣ ಸ್ಥಗಿತ

Vijayaprabha by Vijayaprabha
March 31, 2023
in ಪ್ರಮುಖ ಸುದ್ದಿ
0
Ration Card and Ayushman Card
0
SHARES
0
VIEWS
Share on FacebookShare on Twitter

ಆಯುಷ್ಮಾನ್‌ ಆರೋಗ್ಯ ಕಾರ್ಡ್‌: ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆ ನೀತಿ ಸಂಹಿತೆ ಜಾರಿ ಮಾಡಲಾಗಿದೆ. ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯಾದ್ಯಂತ ಆಯುಷ್ಮಾನ್‌ ಭಾರತ್‌ ಪ್ರಧಾನಮಂತ್ರಿ ಜನಾರೋಗ್ಯ ಆರೋಗ್ಯ ಕರ್ನಾಟಕ ಕಾರ್ಡ್‌ (ಆರೋಗ್ಯ ಕಾರ್ಡ್‌) ವಿತರಣೆ ಕಾರ್ಯ ಸ್ಥಗಿತಗೊಳಿಸಿ ಆರೋಗ್ಯ ಇಲಾಖೆ ಆದೇಶಿಸಿದೆ.

ಇದನ್ನು ಓದಿ: ಇಂದಿನಿಂದ ಐಪಿಎಲ್‌ ಹಬ್ಬ: IPL ಉದ್ಘಾಟನಾ ಸಮಾರಂಭದಲ್ಲಿ ಸೊಂಟ ಬಳುಕಿಸಲಿದ್ದಾರೆ ರಶ್ಮಿಕಾ ಮಂದಣ್ಣ, ಮಿಲ್ಕಿ ಬ್ಯೂಟಿ ತಮನ್ನಾ

Ad 5

ಹೌದು, ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆ ಈ ಕ್ರಮವನ್ನು ಕೈಗೊಳ್ಳಲಾಗಿದ್ದು, ಮುಂದಿನ ಆದೇಶದವರೆಗೆ ವಿತರಣೆ ಮಾಡದಂತೆ ಕಟ್ಟುನಿಟ್ಟಿನ ಆದೇಶ ಮಾಡಲಾಗಿದ್ದು, ಈ ಕುರಿತು ಆರೋಗ್ಯ ಇಲಾಖೆ ಆಯುಕ್ತ ಡಿ. ರಂದೀಪ್‌ ಸುತ್ತೋಲೆ ಹೊರಡಿಸಿದ್ದಾರೆ. ಅಷ್ಟು, ಮಾತ್ರವಲ್ಲದೆ, ಗುರುತಿನ ಚೀಟಿ ಕುರಿತಂತೆ ಎಲ್ಲಾ ಪ್ರಕ್ರಿಯೆಗೆ ತಾತ್ಕಾಲಿಕ ಬ್ರೇಕ್​ ಹಾಕಲಾಗಿರುವುದರಿಂದ ರಾಜ್ಯದ ಜನರಿಗೆ ಆಯುಷ್ಮಾನ್ ಕಾರ್ಡ ಸದ್ಯಕ್ಕೆ ಸಿಗುವುದಿಲ್ಲ ಎನ್ನಲಾಗಿದೆ.

ಇದನ್ನು ಓದಿ: ಎಣ್ಣೆ ಹೊಡೆದಾಗ ಕೊಹ್ಲಿ ಸ್ಥಿತಿ ಹೇಗಿರುತ್ತೆ.. ವಿರಾಟ್ ಕೊಹ್ಲಿ ಕುಡಿತದ ಸೀಕ್ರೆಟ್‌ ಬಿಚ್ಚಿಟ್ಟ ಪತ್ನಿ ಅನುಷ್ಕಾ ಶರ್ಮಾ

ಬರುವ ಮೇ ತಿಂಗಳಲ್ಲಿ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಈಗಾಗಲೇ ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಾಗಿದೆ. ಆದ್ದರಿಂದ ಆಯುಷ್ಮಾನ್‌ ಭಾರತ್‌ ಪ್ರಧಾನಮಂತ್ರಿ ಜನಾರೋಗ್ಯ ಆರೋಗ್ಯ ಕರ್ನಾಟಕ ಕಾರ್ಡ್‌ ವಿತರಣೆಯನ್ನು ಸ್ಥಗಿತಗೊಳಿಸಬೇಕು ಮತ್ತು ಜತೆಗೆ ಕಾರ್ಡ್‌ ನೋಂದಣಿ, ಹಂಚಿಕೆ ಸೇರಿದಂತೆ ಆಯುಷ್ಮಾನ್‌ ಕಾರ್ಡ್‌ ಸಂಬಂಧಿಸಿದ ಯಾವುದೇ ಚಟುವಟಿಕೆಗಳ್ನು ಮುಂದಿನ ಆದೇಶದವರೆಗೂ ಕೈಗೊಳ್ಳಬಾರದು ಎಂದು ಆರೋಗ್ಯ ಇಲಾಖೆ ಆಯುಕ್ತ ಡಿ. ರಂದೀಪ್‌ ಸುತ್ತೋಲೆಯಲ್ಲಿ ತಿಳಿಸಿದ್ದಾರೆ

ಇದನ್ನು ಓದಿ: KPSC ಯಲ್ಲಿ 47 ಸಹಕಾರಿ ಸಂಘಗಳ ನಿರೀಕ್ಷಕರ ಹುದ್ದೆಗಳು; Degree ವಿದ್ಯಾರ್ಹತೆ, ಈಗಲೇ ಅರ್ಜಿ ಸಲ್ಲಿಸಿ

ಸದ್ಯ, ಈ ಸುತ್ತೋಲೆಯನ್ನು ರಾಜ್ಯದ ಎಲ್ಲಾ ಜಿಲ್ಲೆಗಳ ಆರೋಗ್ಯ ಅಧಿಕಾರಿ, ಜಿಲ್ಲಾಧಿಕಾರಿ, ಜಿಲ್ಲಾಸ್ಪತ್ರೆಗಳ ಮುಖ್ಯಸ್ಥರು, ಆಯುಷ್ಮಾನ್‌ ಯೋಜನೆ ಜಾರಿ ಅಧಿಕಾರಿಗಳಿಗೆ ಕಳುಹಿಸಲಾಗಿದ್ದು, ಚುನಾವಣೆ ಮುಗಿಯುವವರೆಗೂ ಹೊಸ ಆಯುಷ್ಮಾನ್‌ ಕಾರ್ಡ್‌ಗೆ ನೋಂದಣಿ ಪ್ರಕ್ರಿಯೆ ಸ್ಥಗಿತವಾಗಲಿದೆ.

ಆಯುಷ್ಮಾನ್‌ ಯೋಜನೆ ಆರೋಗ್ಯ ಸೇವೆಯಲ್ಲಿ ಯಾವುದೇ ವ್ಯತ್ಯಾಸವಿಲ್ಲ :

ಇನ್ನು, ಆಯುಷ್ಮಾನ್‌ ಭಾರತ್‌ ಪ್ರಧಾನಮಂತ್ರಿ ಜನಾರೋಗ್ಯ ಆರೋಗ್ಯ ಕರ್ನಾಟಕ ಕಾರ್ಡ್‌(ಅಯುಷ್ಮಾನ್ ಕಾರ್ಡ್)(Ayushman Bharat Prime Minister Janarogya Arogya Karnataka Card) ಹೊಸದಾಗಿ ವಿತರಣೆ ಮಾಡುವುದಕ್ಕೆ ಮಾತ್ರ ನಿರ್ಬಂಧ ಹಾಕಲಾಗಿದ್ದು, ಈ ಆರೋಗ್ಯ ಕಾರ್ಡ್‌ ಬಳಸಿ ಚಿಕಿತ್ಸೆ ಪಡೆಯಲು ಯಾವುದೇ ನಿರ್ಬಂಧ ಇಲ್ಲ. ಈಗಾಗಲೇ ಅಯುಷ್ಮಾನ್ ಕಾರ್ಡ್ ಹೊಂದಿರುವ ಫಲಾನುಭವಿಗಳು ಆಸ್ಪತ್ರೆಯಲ್ಲಿ ಆರೋಗ್ಯ ಸೌಲಭ್ಯಗಳನ್ನು ಎಂದಿನಂತೆಯೇ ಪಡೆಯಬಹುದು.

ಇದನ್ನು ಓದಿ: ಏಪ್ರಿಲ್‌ 1 ರಿಂದ ಇವುಗಳ ಬೆಲೆ ಭಾರೀ ಹೆಚ್ಚಳ: ಯಾವುದು ದುಬಾರಿ? ಯಾವುದು ಅಗ್ಗ? ಇಲ್ಲಿದೆ ನೋಡಿ

ಆಯುಷ್ಮಾನ್‌ ಆರೋಗ್ಯ ಕಾರ್ಡ್‌ ನಿಂದ ಸಿಗುವ ಸೌಲಭ್ಯವೇನು? ಪಡೆಯುವುದು ಹೇಗೆ ?

ಆಯುಷ್ಮಾನ್‌ ಆರೋಗ್ಯ ಕಾರ್ಡ್‌(Ayushman Health Card) ನಿಂದ ಬಿಪಿಎಲ್‌ ಕಾರ್ಡ್‌(BPL Card) ಹೊಂದಿರುವವರಿಗೆ ಒಂದು ವರ್ಷಕ್ಕೆ 5 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆ ಲಭ್ಯವಿದ್ದು, ಎಪಿಎಲ್ ಕಾರ್ಡ್ ಹೊಂದಿರುವವರಿಗೆ ಪಾವತಿ ಆಧಾರದ ಮೇಲೆ ಸರ್ಕಾರಿ ಪ್ಯಾಕೇಜ್ ದರದ ಶೇ.30 ರಷ್ಟು ಚಿಕತ್ಸಾ ವೆಚ್ಚ ಲಭ್ಯವಿದ್ದು, ವಾರ್ಷಿಕ ಮಿತಿ ಪ್ರತಿ ಕುಟುಂಬಕ್ಕೆ 1.50 ಲಕ್ಷ ರೂ ಇರುತ್ತದೆ. ಇನ್ನು, ಆಯುಷ್ಮಾನ್‌ ಆರೋಗ್ಯ ಯೋಜನೆಯಡಿ ರೋಗಿಗಳು ಚಿಕಿತ್ಸೆ ಪಡೆಯಲು ತಮ್ಮ ರೇಷನ್ ಕಾರ್ಡ್, ಆಧಾರ್ ಕಾರ್ಡ್ ಅನ್ನು ಹಾಜರುಪಡಿಸಬೇಕು.

ಇದನ್ನು ಓದಿ: ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಆನೆ ಕಾವಾಡಿಗ ಹುದ್ದೆಗಳಿಗೆ ಅರ್ಜಿ ಅಹ್ವಾನ; ವಿದ್ಯಾರ್ಹತೆ ಬೇಕಿಲ್ಲ, ಇಂದೇ ಅರ್ಜಿ ಸಲ್ಲಿಸಿ

ಆಯುಷ್ಮಾನ್‌ ಆರೋಗ್ಯ ಕಾರ್ಡ್‌ ಹೊಂದಿದವರಿಗೆ ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಲಭ್ಯವಿದ್ದರೆ ಅಲ್ಲಿ ಮಾತ್ರ ಅಲ್ಲಿಯೇ ನೀಡಲಾಗುತ್ತದೆ. ಒಂದು ವೇಳೆ ಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಇಲ್ಲದಿದ್ದರೆ ರೆಫರಲ್ ಮಾಡಿಸಿಕೊಂಡು, ರೋಗಿ ತಾನು ಇಚ್ಛಿಸುವ ಯಾವುದೇ ನೋಂದಾಯಿತ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದು.

ಇನ್ನು, ಆಯುಷ್ಮಾನ್‌ ಆರೋಗ್ಯ ಯೋಜನೆಯಡಿ ಹೃದಯರೋಗ, ಕ್ಯಾನ್ಸರ್, ಮೂತ್ರಪಿಂಡದ ಕಾಯಿಲೆ, ನವಜಾತ ಶಿಶುಗಳ ಕಾಯಿಲೆ ಸೇರಿದಂತೆ ತೃತೀಯ ಹಂತದ ಸುಮಾರು 900 ಚಿಕಿತ್ಸೆಗಳು ಹಾಗೂ ರಸ್ತೆ ಅಪಘಾತ ಸೇರಿದಂತೆ 169 ತುರ್ತು ಚಿಕಿತ್ಸೆಗಳಿಗೆ ಯಾವುದೇ ರೆಫರಲ್ ಇಲ್ಲದೆ ನೇರವಾಗಿ ನೋಂದಾಯಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದು

ಇದನ್ನು ಓದಿ: ರಾಜ್ಯದಲ್ಲಿ ಚುನಾವಣೆ ದಿನಾಂಕ ಘೋಷಣೆ; ಇಂದಿನಿಂದಲೇ ನೀತಿ ಸಂಹಿತೆ ಜಾರಿ, ಯಾವುದಕ್ಕೆ ಅನ್ವಯ? ಚುನಾವಣೆ ಪ್ರಮುಖ ದಿನಾಂಕಗಳು ಇಲ್ಲಿವೆ

ವಿಜಯಪ್ರಭ.ಕಾಂ ಫಾಲೋ ಮಾಡಿ
ಕ್ಷಣ ಕ್ಷಣದ ಮಾಹಿತಿಗಾಗಿ Vijayaprabha WhatsApp Group ಫಾಲೋ ಮಾಡಿ ಮಹತ್ವದ ಮಾಹಿತಿಗಾಗಿ Vijayaprabha Facebook Page ಫಾಲೋ ಮಾಡಿ ವೈವಿಧ್ಯಮಯ ಸುದ್ದಿಗಳಿಗಾಗಿ Vijayaprabha Twitter ಪೇಜ್ ಫಾಲೋ ಮಾಡಿ

Tags: Ayushman Bharat cardAyushman Bharat Prime Minister Janarogya Arogya Karnataka CardAyushman health cardBPL cardBPL card holdersdistribution of Ayushman Bharat card in the state is completely stoppedfeaturedhealth cardVIJAYAPRABHA.COMಆಯುಷ್ಮಾನ್ ಕಾರ್ಡಆಯುಷ್ಮಾನ್ ಭಾರತ್ ಕಾರ್ಡ್​ ವಿತರಣೆ ಸಂಪೂರ್ಣ ಸ್ಥಗಿತಆಯುಷ್ಮಾನ್‌ ಭಾರತ್‌ ಪ್ರಧಾನಮಂತ್ರಿ ಜನಾರೋಗ್ಯ ಆರೋಗ್ಯ ಕರ್ನಾಟಕ ಕಾರ್ಡ್‌ಆರೋಗ್ಯ ಇಲಾಖೆಆರೋಗ್ಯ ಕಾರ್ಡ್‌ಬಿಪಿಎಲ್​ ಕಾರ್ಡ್ಬಿಪಿಎಲ್‌ ಕಾರ್ಡ್‌ ಹೊಂದಿರುವವರಿಗೆ ಸರ್ಕಾರದಿಂದ ಮಹತ್ವದ ಆದೇಶ
Previous Post

ಇಂದಿನಿಂದ ಐಪಿಎಲ್‌ ಆರಂಭ; ಏನಿದು ʻಇಂಪ್ಯಾಕ್ಟ್ ಪ್ಲೇಯರ್ʼ ನಿಯಮ ಏನು? ಆವೃತ್ತಿಯ ವಿಶೇಷತೆಗಳೇನು?

Next Post

7 ದಿನಗಳಲ್ಲಿ ಪಾನ್ ಕಾರ್ಡ್‌ ಪಡೆಯುವುದು ಹೇಗೆ? PAN ಕಳೆದು ಹೋದರೆ 5 ನಿಮಿಷದಲ್ಲಿ ಹೀಗೆ ಡೌನ್‌ಲೋಡ್ ಮಾಡಿ

Next Post
Pan card

7 ದಿನಗಳಲ್ಲಿ ಪಾನ್ ಕಾರ್ಡ್‌ ಪಡೆಯುವುದು ಹೇಗೆ? PAN ಕಳೆದು ಹೋದರೆ 5 ನಿಮಿಷದಲ್ಲಿ ಹೀಗೆ ಡೌನ್‌ಲೋಡ್ ಮಾಡಿ

Leave a Reply Cancel reply

Your email address will not be published. Required fields are marked *

No Result
View All Result

Recent Posts

  • EMRS Recruitment: 38,480 ಹುದ್ದೆಗಳ ಬೃಹತ್ ನೇಮಕಾತಿ; SSLC, ಪಿಯುಸಿ, ಐಟಿಐ, ಪದವಿ ಆದವರಿಗೆ ಅವಕಾಶ
  • PM Kisan Yojana: ರೈತರಿಗೆ ಸಂತಸದ ಸುದ್ದಿ, ಖಾತೆಗಳಿಗೆ 10 ಸಾವಿರ ರೂ…!
  • Today panchanga: 08 ಜೂನ್ 2023 ಇಂದು ಜ್ಯೇಷ್ಠ ಪಂಚಮಿ ವೇಳೆ ಶುಭ ಮತ್ತು ಅಶುಭ ಸಮಯ ಯಾವಾಗ?
  • Dina bhavishya: 08 ಜೂನ್ 2023 ಇಂದು ಗಜಕೇಸರಿ ಯೋಗದಿಂದ ಈ 3 ರಾಶಿಯವರಿಗೆ ಅದೃಷ್ಟ ಖುಲಾಯಿಸುತ್ತದೆ..!
  • ITBP Recruitment: ಹೆಡ್ ಕಾನ್ಸ್‌ಟೇಬಲ್ ಹುದ್ದೆಗಳಿಗೆ ಅರ್ಜಿ ಅಹ್ವಾನ; ತಿಂಗಳಿಗೆ ರೂ. 25,500-81,100 ಸಂಬಳ

Recent Comments

    Categories

    • Dina bhavishya
    • Home
    • Jobs News
    • ಆರೋಗ್ಯ
    • ಪ್ರಮುಖ ಸುದ್ದಿ
    • ರಾಜಕೀಯ
    • ಲೋಕಲ್ ಸುದ್ದಿ
    • ಸಿನೆಮಾ
    • Home
    • ಪ್ರಮುಖ ಸುದ್ದಿ
    • ಆರೋಗ್ಯ
    • ಸಿನೆಮಾ
    • ಲೋಕಲ್ ಸುದ್ದಿ
    • ರಾಜಕೀಯ
    • Dina bhavishya
    • ವೆಬ್ ಸ್ಟೋರಿಸ್
    • Jobs News

    © 2023 vijayaprabha - Kannada News by Newbie Techy.

    No Result
    View All Result
    • Home
    • ಪ್ರಮುಖ ಸುದ್ದಿ
    • ಆರೋಗ್ಯ
    • ಸಿನೆಮಾ
    • ಲೋಕಲ್ ಸುದ್ದಿ
    • ರಾಜಕೀಯ
    • Dina bhavishya
    • ವೆಬ್ ಸ್ಟೋರಿಸ್
    • Jobs News

    © 2023 vijayaprabha - Kannada News by Newbie Techy.

    Are you sure want to unlock this post?
    Unlock left : 0
    Are you sure want to cancel subscription?