ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟ ಆರ್.ಚಂದ್ರು; ಕಬ್ಜ-2 ಸಿನಿಮಾ ಘೋಷಣೆ 

ನಿರ್ದೇಶಕ ಆರ್.ಚಂದ್ರು ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದು, ಕಬ್ಜ-2 ಸಿನಿಮಾದ ಕೆಲಸದಲ್ಲಿ ತೊಡಗುವುದಾಗಿ ತಿಳಿಸಿದ್ದಾರೆ.

ಕಬ್ಜಗಿಂತಲೂ ಕಬ್ಜ 2 ಬಜೆಟ್ ದೊಡ್ಡದಾಗಿಯೇ ಇರಲಿದ್ದು, ಭಾರೀ ಬಜೆಟ್ ನಲ್ಲಿ ಕಬ್ಜ 2 ಮೂಡಿ ಬರಲಿದೆಯಂತೆ 

ಭಾರತೀಯ ಸಿನಿಮಾ ರಂಗದ ಖ್ಯಾತ ಕಲಾವಿದರು ಕಬ್ಜ 2 ಸಿನಿಮಾದಲ್ಲಿ ಇರಲಿದ್ದಾರಂತೆ.

ಇನ್ನು, ಕಥೆ ಬರೆಯುವುದರಲ್ಲಿ ತೊಡಗಿರುವ ನಿರ್ದೇಶಕ ಚಂದ್ರು, ಮುಂದಿನ ದಿನಗಳಲ್ಲಿ ತಾರಾಬಳಗದ ಬಗ್ಗೆ ಮಾಹಿತಿ ನೀಡುವುದಾಗಿ ತಿಳಿಸಿದ್ದಾರೆ. 

ಕಬ್ಜ 2 ಸಿನಿಮಾದ ಕಥೆ, ಮೇಕಿಂಗ್, ತಾರಾಗಣ, ಬಜೆಟ್ ಯಾವುದರಲ್ಲೂ ಕಡಿಮೆ ಮಾಡುವುದಿಲ್ಲ. ಗ್ರ್ಯಾಂಡ್ ಆಗಿ ಸಿನಿಮಾ ಮಾಡುವಂತಹ ಶಕ್ತಿಯನ್ನು ಕಬ್ಜ ನೀಡಿದೆ. 

ಪ್ಯಾನ್ ಇಂಡಿಯಾ ಸಿನಿಮಾ ಮಾಡುವ ಹುಮ್ಮಸ್ಸನ್ನು ಮತ್ತಷ್ಟು ಹೆಚ್ಚು ಮಾಡಿದೆ’ ಎಂದು ನಿರ್ದೇಶಕ ಚಂದ್ರು ಹೇಳಿದ್ದಾರೆ.

ಕಬ್ಜ ಸಿನಿಮಾ ಮೊದಲ ಭಾಗ ರಿಲೀಸ್ ಆಗಿ ಎರಡನೇ ದಿನಕ್ಕೆ ನೂರು ಕೋಟಿ ಕ್ಲಬ್ ಸೇರಿದ್ದು, ನಾನಾ ಕಾರಣಗಳಿಂದಾಗಿ ಈ ಸಿನಿಮಾ ವಿಶೇಷತೆಯನ್ನೂ ಒಳಗೊಂಡಿತ್ತು.

ಈ ಸಿನಿಮದಲ್ಲಿ ರಿಯಲ್ ಸ್ಟಾರ್ ಉಪೇಂದ್ರ , ಕಿಚ್ಚ ಸುದೀಪ್ ಮತ್ತು ಶಿವರಾಜ್ ಕುಮಾರ್ ಮೊದಲ ಬಾರಿಗೆ ಒಂದೇ ಚಿತ್ರದಲ್ಲಿ ನಟಿಸಿ, ಅಭಿಮಾನಿಗಳಿಗೆ ತ್ರಿಬಲ್ ಮನರಂಜನೆಯನ್ನು ನೀಡಿದ್ದರು.

ಅಷ್ಟೇ ಅಲ್ಲ, ಬಹುಭಾಷಾ ನಟಿ ಶ್ರಿಯಾ ಶರಣ್ ಕೂಡ ನಟಿಸಿದ್ದು, ಕಬ್ಜ ಸಿನಿಮಾವನ್ನು ₹120 ಕೋಟಿ ಬಂಡವಾಳದಲ್ಲಿ ನಿರ್ಮಾಣ ಮಾಡಲಾಗಿದೆ. 

ಈಗ ಆರ್.ಚಂದ್ರು ಅವರು ಕಬ್ಜ 2 ಸಿನಿಮಾ 120 ಕೋಟಿಗಿಂತಲೂ ಅಧಿಕ ಹೆಚ್ಚಿನ ನಿರ್ಮಾಣ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.