ಇಂತಹ  ಹುಡುಗನನ್ನು ಮದುವೆ ಆಗ್ತೀನಿ; 2ನೇ ಮದುವೆಗೆ ನಾನು ರೆಡಿ ಎಂದ ಖ್ಯಾತ ನಟಿ ಪ್ರೇಮ!

ಕನ್ನಡ ಚಿತ್ರರಂಗದ ಖ್ಯಾತ ನಟಿ ಪ್ರೇಮಾ (Prema) ಹಿಟ್ ಸಿನಿಮಾಗಳನ್ನು ನೀಡಿದ್ದು, ಅನೇಕ ಸ್ಟಾರ್ ಹೀರೋಗಳ ಜೊತೆ ನಟಿಸಿದ್ದಾರೆ. 

ಕೆಲ ವರ್ಷಗಳಿಂದ ಸಿನಿಮಾಗೆ ಬ್ರೇಕ್ ಕೊಟ್ಟಿದ್ದ ಖ್ಯಾತ ನಟಿ ಪ್ರೇಮಾ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. 

ಸದ್ಯ, ಮತ್ತೆ ಸದ್ದು ಮಾಡುತ್ತಿದ್ದಾರೆ ಪ್ರೇಮ. ಆದರೆ, ಸಿನಿಮಾ ವಿಚಾರಕ್ಕಲ್ಲ, ತಮ್ಮ ವೈಯಕ್ತಿಕ ಜೀವನದ ವಿಚಾರಕ್ಕಾಗಿ  

ಹೌದು, ಸಿನಿಮಾಗಳಲ್ಲಿ ಫುಲ್ ಬ್ಯುಸಿ ಇರುವಾಗಲೇ 2006 ರಲ್ಲಿ ಪ್ರೇಮ ಜೀವನ್ ಅಪ್ಪಚ್ಚು ರನ್ನು ವಿವಾಹವಾಗಿದ್ದರು. 

ಆದ್ರೆ ಕಾರಣಾಂತಗಳಿಂದ ಮದುವೆ ಜೀವನದಲ್ಲಿ ಭಾರೀ ಏರುಪೇರಾಗಿ ಇಬ್ಬರೂ ವಿಚ್ಛೇದನ ಪಡೆದು ದೂರವಾಗಿದ್ದಾರೆ.

ಈ ಬಗ್ಗೆ ನಟಿ ಪ್ರೇಮಾ ಸಂದರ್ಶನವೊಂದರಲ್ಲಿ ತನ್ನ ಮೊದಲ ಮದುವೆ ಹಾಗೂ ಅದರಲ್ಲಿ ಅನುಭವಿಸಿದ ಯಾತನೆ ಹಾಗು 2ನೇ ಮದುವೆ ಬಗ್ಗೆ ಕೂಡ ಮಾತಾಡಿದ್ದಾರೆ

ಮದುವೆ ಎಂಬುದು ಪ್ರತಿಯೊಬ್ಬರ ಜೀವನದಲ್ಲೂ ಮುಖ್ಯವಾಗಿದ್ದು, ಒಳ್ಳೆಯ ವ್ಯಕ್ತಿ ಸಿಕ್ಕರೆ ಮತ್ತೆ ಮದುವೆ ಆಗುತ್ತೀನಿ.

70ರ ವಯಸ್ಸಿನಲ್ಲಿ ಸಹ ಮದುವೆಯಾಗುವವರು ಇದ್ದು, ನಾನ್ಯಾಕೆ ಮದುವೆ  ಆಗಬಾರದು. ಇದು ನನ್ನ ಬದುಕು, ನನಗೆ ಇಷ್ಟ, ಖಂಡಿತವಾಗಿ ನಾನ ಮದುವೆಯಾಗುತ್ತೀನಿ

ಇನ್ನು, ನನ್ನ ಆರೋಗ್ಯದ ಬಗ್ಗೆ ಸುಳ್ಳು ಸುದ್ದಿ ಹರಡಿದ್ದಾರೆ. ನಾನು ಖಿನ್ನತೆಗೆ ಒಳಗಾಗಿದ್ದು ನಿಜ.ಆದರೆ  ನನಗೆ ಯಾವ ತೊಂದರೆಯೂ ಇಲ್ಲ.

ನಾನು ಜೀವನದಲ್ಲಿ ಅನೇಕ ಕಷ್ಟ ನೋಡಿದ್ದು, ನೊಂದಿದ್ದೇನೆ. ಆತನಿಂದ ವಿಚ್ಚೇದನ ಪಡೆಯಲು ನಿರ್ಧರಿಸಿದ್ದೆ. 

ಅಷ್ಟೇ ಅಲ್ಲ, ನಾನೇ ನ್ಯಾಯಾಲಕ್ಕೆ ಅಲೆದಾಡಿ ವಿಚ್ಚೇದನ ಪಡೆದು ಆತನಿಂದ ದೂರವಾಗಿದ್ದೇನೆ ಎಂದು ಹೇಳಿದ್ದಾರೆ  

ಅಷ್ಟೇ ಅಲ್ಲ, ಒಳ್ಳೆಯ ಹುಡುಗ ಸಿಕ್ಕರೆ ಖಂಡಿತ ಮತ್ತೆ ಮದುವೆ ಆಗುತ್ತೇನೆ ಎಂದು ಖ್ಯಾತ ನಟಿ ಪ್ರೇಮ ಹೇಳಿದ್ದಾರೆ.