ಮೆಗಾಸ್ಟಾರ್ ಚಿರಂಜೀವಿ ತಮ್ಮನ ಮಗಳ ದಾಂಪತ್ಯದಲ್ಲಿ ಬಿರುಕು, ನಿಹಾರಿಕಾ ವಿಚ್ಛೇದನ ಫಿಕ್ಸ್!?

ಮೆಗಾ ಪುತ್ರಿ ನಿಹಾರಿಕಾ ಕೊನಿಡೇಲ 

ತೆಲುಗಿನ ಮೆಗಾಸ್ಟಾರ್ ನಟ ಚಿರಂಜೀವಿ ಸಹೋದರ ನಾಗ ಬಾಬು ಪುತ್ರಿ ನಿಹಾರಿಕಾ ದಾಂಪತ್ಯ ಜೀವನದಲ್ಲಿ ಬಿರುಕು ಕಾಣಿಸಿಕೊಂಡಿದೆ ಎನ್ನಲಾಗಿದೆ. 

‘ಒಕ ಮನಸು’ ಸಿನಿಮಾದ ಮೂಲಕ ಟಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದರು ನಿಹಾರಿಕಾ ಕೊನಿಡೇಲ

ನಟಿ, ನಿರ್ಮಾಪಕಿ ನಿಹಾರಿಕಾ 

ಆ ಬಳಿಕ ಮುದ್ದಪ್ಪು ಆವಕೈ, ಸೂರ್ಯಕಾಂತಂ ಸಿನಿಮಾಗಳಲ್ಲಿ ನಟಿಸಿ, ಈಗ ನಿರ್ಮಾಪಕಿಯಾಗಿ ಸಿನಿಮಾ ಮಾಡಲು ಮುಂದಾಗಿದ್ದಾರೆ.

ನಿಹಾರಿಕಾ ಅವರು ಡಿಸೆಂಬರ್ 2020 ರಲ್ಲಿ ಚೈತನ್ಯ ಜೊನ್ನಲಗಡ್ಡ ಎಂಬುವರ ಜೊತೆ ವಿವಾಹವಾಗಿದ್ದರು. 

ಚೈತನ್ಯ ಜೊತೆ ಮದುವೆ 

ಉದಯಪುರದಲ್ಲಿ ಅದ್ದೂರಿ ಮದುವೆ

ರಾಜಸ್ತಾನದ ಉದಯಪುರದಲ್ಲಿ ನಿಹಾರಿಕಾ ಕೊನಿಡೇಲ ಮತ್ತು ಚೈತನ್ಯ ಜೊನ್ನಲಗಡ್ಡ ಅವರ ಮದುವೆ ಅದ್ದೂರಿಯಾಗಿ ನಡೆದಿತ್ತು

ಖುಷಿಯಾಗಿಯೇ ಇದ್ದ ಈ ಜೋಡಿ ದಾಂಪತ್ಯ ಜೀವನದಲ್ಲಿ ಇದೀಗ ಬಿರುಕು ಕಾಣಿಸಿಕೊಂಡಿದೆ ಎನ್ನಲಾಗಿದ್ದು, ಡಿವೋರ್ಸ್ ವಿಚಾರ ಭಾರೀ ಸದ್ದು ಮಾಡ್ತಿದೆ.

ವಿಚ್ಛೇದನ ಮುನ್ನೆಲೆಗೆ 

ಹೌದು, ಇಬ್ಬರ ನಡುವೆ ಏನೂ ಸರಿಯಿಲ್ಲ ಎನ್ನಲಾಗಿದ್ದು, ಇಬ್ಬರೂ ಸೋಶಿಯಲ್ ಮೀಡಿಯಾ ಮೂಲಕ ತಮ್ಮ ಜೀವನದ ಬಿರುಕನ್ನು ತಿಳಿಸಲು ಹೊರಟಿದ್ದಾರೆ

ಆನ್ ಫಾಲೋ, ಫೋಟೋಗಳು ಡಿಲೀಟ್  ಇತ್ತೀಚೆಗಷ್ಟೇ ಚೈತನ್ಯ ಅವರು ತಮ್ಮ ಇನ್ ಸ್ಟಾಗ್ರಾಮ್ ಖಾತೆಯಿಂದ ತಮ್ಮ ಮದುವೆಯ ಫೋಟೋಗಳನ್ನು ಡಿಲೀಟ್ ಮಾಡಿದ್ದರು.

ವಿಚ್ಛೇದನ ಖಚಿತ

ಇದೀಗ ನಿಹಾರಿಕಾ ಕೂಡ ಗಂಡ ಚೈತನ್ಯ ಅವರನ್ನು ಅನ್​ ಫಾಲೋ ಮಾಡಿ ಫೋಟೋಗಳನ್ನು ಡಿಲೀಟ್ ಮಾಡಿದ್ದು, ವಿಚ್ಚೇದನ ಸುದ್ದಿಗೆ ಪುಷ್ಠಿ ನೀಡಿದೆ.

ಇಬ್ಬರು ಪ್ರತಿಕ್ರಿಯೆ ನೀಡಿಲ್ಲ 

ಆದರೆ ವಿಚ್ಛೇದನ ಗಾಸಿಪ್ ಕುರಿತು ನಿಹಾರಿಕಾ ಮತ್ತು ಚೈತನ್ಯ ಇಬ್ಬರು ಯಾವುದೇ ಪ್ರಿತಿಕ್ರಿಯೆ ನೀಡಿಲ್ಲ

ಮೆಗಾ ಫ್ಯಾಮಿಲಿಯಲ್ಲಿ ಡೈವೋರ್ಸ್ 

ಈಗಾಗಲೇ ಮೆಗಾ ಫ್ಯಾಮಿಲಿಯಲ್ಲಿ ಚಿರಂಜೀವಿ ಸಹೋದರ ನಟ ಪವನ್ ಕಲ್ಯಾಣ್ ನಟಿ ರೇಣುಕಾ ದೇಸಾಯಿ ಅವರಿಗೆ ವಿಚ್ಛೇದನ ನೀಡಿದ್ದಾರೆ 

ಮೆಗಾ ಫ್ಯಾಮಿಲಿಯಲ್ಲಿ ಡೈವೋರ್ಸ್ 

ಚಿರಂಜೀವಿ ಪುತ್ರಿ ಶ್ರೀಜಾ ವಿಚ್ಛೇದನ ವಿಚಾರದ ಬಗ್ಗೆ ಈಗಾಗಲೇ ಮೆಗಾ ಫ್ಯಾಮಿಲಿಯಲ್ಲಿ ದೊಡ್ಡ ಚರ್ಚೆ ಆಗ್ತಿದ್ದು, ಇದೀಗ ನಿಹಾರಿಕಾ ಕೂಡ ವಿಚ್ಛೇದನ ಬಳಿ ಬಂದು ನಿಂತಿದ್ದಾರೆ