CP Yogeshwar : ರಾಜ್ಯ ರಾಜಕೀಯ ವಿದ್ಯಮಾನಗಳು ಸಂಚಲನ ಸೃಷ್ಟಿಸಿದ್ದು, BJP ಮಾಜಿ ಶಾಸಕ CP ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆಯಾಗುವುದು ಬಹುತೇಕ ಖಚಿತವಾಗಿದೆ ಎನ್ನಲಾಗಿದೆ.
ಹೌದು, ಸದಾಶಿವ ನಗರದಲ್ಲಿರುವ DCM ಡಿಕೆ ಶಿವಕುಮಾರ್ ಮನೆಯಲ್ಲಿ ಯೋಗೇಶ್ವರ್ ಪ್ರತ್ಯಕ್ಷರಾಗಿದ್ದಾರೆ. ಕಾಂಗ್ರೆಸ್ ಸೇರುವ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಡಿಕೆಶಿ ಮತ್ತು ಯೋಗೇಶ್ವರ್ ಈಗ ಒಂದೇ ಕಾರಿನಲ್ಲಿ CM ಸಿದ್ದರಾಮಯ್ಯ ಮನೆಗೆ ತೆರಳಿದ್ದಾರೆ. ಈ ಮೂಲಕ BJP-JDS ದೋಸ್ತಿಗೆ ದೊಡ್ಡ ಟಕ್ಕರ್ ಕೊಡಲು ಮುಂದಾಗಿದ್ದಾರೆ.
ಇದನ್ನೂ ಓದಿ: ವಿದ್ಯಾರ್ಥಿಗಳಿಗಾಗಿಯೇ Vidyasiri Yojana ಜಾರಿ – 15,000 ರೂ ವಿದ್ಯಾರ್ಥಿ ವೇತನ; ಸೌಲಭ್ಯ ಪಡೆದುಕೊಳ್ಳುವುದು ಹೇಗೆ?
CP Yogeshwar : ಬಿಜೆಪಿ ನಾಯಕರ ನಡೆಗೆ ಯೋಗೇಶ್ವರ್ ಆಕ್ರೋಶ
ಇನ್ನು, ಬಿಜೆಪಿ ನಾಯಕರ ನಡೆಗೆ ಮಾಜಿ ಎಂಎಲ್‌ಸಿ ಸಿಪಿ ಯೋಗೇಶ್ವರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೌದು, ಬಿಜೆಪಿ ನಾಯಕರ ಪ್ರತಿಕ್ರಿಯೆಗೆ ಯೋಗೇಶ್ವರ್ ಬೆಂಗಳೂರಿನ ಹೋಟೆಲ್‌ವೊಂದರಲ್ಲಿ ನಿನ್ನೆ ಇಡೀ ದಿನ ಕಾದು ಕುಳಿತಿದ್ದರು. ಸಂಜೆ 6 ಗಂಟೆಯವರೆಗೆ ಡೆಡ್‌ಲೈನ್ ಸಹ ಕೊಟ್ಟಿದ್ದರು. ಆದರೆ, ರಾತ್ರಿಯಾದರೂ ಸಹ ಬಿಜೆಪಿ ಪಟ್ಟಿ ರಿಲೀಸ್ ಮಾಡಿಲ್ಲ. ಹೀಗಾಗಿ ಕಾಂಗ್ರೆಸ್‌ನತ್ತ ಸಿಪಿವೈ ಹೆಜ್ಜೆಹಾಕಿದ್ದಾರೆ ಎನ್ನಲಾಗಿದೆ.