ದೇಶದ ಈ ಕಾಲೇಜಿನಿಂದಲೇ ಅತಿ ಹೆಚ್ಚು IAS ಅಧಿಕಾರಿಗಳು ಆಗೋದು..

ಯುಪಿಎಸ್​​ಸಿ ಎಂಬ ಪರೀಕ್ಷೆ ಸಾಮಾನ್ಯರಿಗಲ್ಲ. ಶ್ರದ್ಧೆಯನ್ನ, ಜೀವನವನ್ನ, ವಿದ್ಯೆಯನ್ನ ಸಂಪೂರ್ಣವಾಗಿ ನಮ್ಮ ಸಮಯವನ್ನೇ ಅದಕ್ಕೆ ಮುಡುಪಿಡಬೇಕಾಗುತ್ತದೆ. ಇದು ದೇಶದಲ್ಲಿಯೇ ಅತ್ಯಂತ ಕಠಿಣ ಪರೀಕ್ಷೆಗಳಲ್ಲೊಂದು ಎಂದು ಹೇಳಲಾಗುತ್ತದೆ. ಪರೀಕ್ಷೆ ಬರೆದ ಲಕ್ಷಾಂತರ ಆಕಾಂಕ್ಷಿಗಳಲ್ಲಿ ಬೆರಳೆಣಿಕೆಯಷ್ಟು ಅಭ್ಯರ್ಥಿಗಳು…

ಯುಪಿಎಸ್​​ಸಿ ಎಂಬ ಪರೀಕ್ಷೆ ಸಾಮಾನ್ಯರಿಗಲ್ಲ. ಶ್ರದ್ಧೆಯನ್ನ, ಜೀವನವನ್ನ, ವಿದ್ಯೆಯನ್ನ ಸಂಪೂರ್ಣವಾಗಿ ನಮ್ಮ ಸಮಯವನ್ನೇ ಅದಕ್ಕೆ ಮುಡುಪಿಡಬೇಕಾಗುತ್ತದೆ. ಇದು ದೇಶದಲ್ಲಿಯೇ ಅತ್ಯಂತ ಕಠಿಣ ಪರೀಕ್ಷೆಗಳಲ್ಲೊಂದು ಎಂದು ಹೇಳಲಾಗುತ್ತದೆ. ಪರೀಕ್ಷೆ ಬರೆದ ಲಕ್ಷಾಂತರ ಆಕಾಂಕ್ಷಿಗಳಲ್ಲಿ ಬೆರಳೆಣಿಕೆಯಷ್ಟು ಅಭ್ಯರ್ಥಿಗಳು ಮಾತ್ರ ಐಎಎಸ್​ ಅಧಿಕಾರಿಯಾಗುವ ಅವಕಾಶ ಪಡೆದುಕೊಳ್ಳುತ್ತಾರೆ. ಆದರೆ ಒಂದು ವಿಷಯ ನಿಮಗೆ ಗೊತ್ತಾ. ಭಾರತದ ಯಾವ ಕಾಲೇಜ್ ಅಥವಾ ಯುನಿವರ್ಸಿಟಿಯಿಂದ ಅತಿಹೆಚ್ಚು ಐಎಎಸ್ ಅಧಿಕಾರಿಗಳು ಆಗಿದ್ದಾರೆ ಎಂದು. ಈ ಕಾಲೇಜ್ ಹಾಗೂ ಯುನಿವರ್ಸಿಟಿಗಳನ್ನು ಯುಪಿಎಸ್​ಸಿ ಫ್ಯಾಕ್ಟರಿ ಎಂದೇ ಕರೆಯುತ್ತಾರೆ.

 

ನಿಮಗೆ ದೆಹಲಿ ವಿಶ್ವವಿದ್ಯಾಲಯದ ಬಗ್ಗೆ ಗೊತ್ತಿರಬಹುದು. ದೇಶದ ಅತ್ಯುನ್ನತ ವಿಶ್ವವಿದ್ಯಾಲಯಗಳಲ್ಲಿ ಅದು ಕೂಡ ಒಂದು. ಮಾಧ್ಯಮಗಳು ಮಾಡಿರುವ ವರದಿಯ ಪ್ರಕಾರ ಈ ಒಂದು ವಿಶ್ವವಿದ್ಯಾಲಯದಿಂದ 1975 ರಿಂದ 2014ರವರೆಗೆ ಒಟ್ಟು 4 ಸಾವಿರ ಅಭ್ಯರ್ಥಿಗಳು ಯುಪಿಎಸ್​​ಸಿ ಪಾಸ್ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಅತಿಹೆಚ್ಚು ಐಎಎಸ್​ ಆಫೀಸರ್ಸ್​ಗಳನ್ನು ದೇಶಕ್ಕೆ ಕೊಟ್ಟ ಗೌರವವನ್ನು ಸಂಪಾದಿಸಿದೆ.

Vijayaprabha Mobile App free

 

ದೆಹಲಿ ವಿಶ್ವವಿದ್ಯಾಲಯದ ಅಡಿಯಲ್ಲಿ ಬರುವ ಕೆಲವು ಕಾಲೇಜ್​ಗಳು ಕೂಡ ದೇಶಕ್ಕೆ ಅತಿಹೆಚ್ಚು ಐಎಎಸ್ ಅಧಿಕಾರಿಗಳನ್ನು ಕೊಡುವಲ್ಲಿ ಪ್ರಮುಖ ಪಾತ್ರವಹಿಸಿವೆ. ಇವುಗಳಲ್ಲಿ ಮಿರಾಂಡ್ ಹೌಸ್ ಕಾಲೇಜ್, ಲೇಡಿ ಶ್ರೀರಾಮ್ ಮಹಿಳಾ ಕಾಲೇಜ್​ ಮತ್ತು ಹಿಂದೂ ಕಾಲೇಜ್​ನಲ್ಲಿ ಕಲಿತ ಹಲವಾರು ವಿದ್ಯಾರ್ಥಿಗಳು ಐಎಎಸ್​ ಅಧಿಕಾರಿಗಳಾಗಿ ಆ ಕಾಲೇಜುಗಳಿಗೆ ಹೆಮ್ಮೆಯನ್ನು ತಂದಿದ್ದಾರೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.