2025-26ನೇ ಸಾಲಿನ ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯ ಸರ್ಕಾರ ಸಿನಿಮಾ ಪ್ರಯರಿಗೆ ಸಿಹಿ ಸುದ್ದಿ ನೀಡಿದೆ. ರಾಜ್ಯದ ಎಲ್ಲಾ ಮಲ್ಟಿಪ್ಲೆಕ್ಸ್ ಹಾಗೂ ಚಿತ್ರಮಂದಿರಗಳಿಗೆ ಏಕರೂಪ ದರ ನಿಗದಿ ಪಡಿಸೋ ಮಹತ್ವದ ನಿರ್ಧಾರ ಕೈಗೊಂಡಿದೆ.
ರಾಜ್ಯದ ಚಿತ್ರಮಂದಿರ ಹಾಗೂ ಎಲ್ಲಾ ಮಲ್ಟಿಪ್ಲೆಕ್ಸ್ಗಳಲ್ಲಿ ಏಕರೂಪ ದರ ನಿಗದಿ ಪಡಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಮಲ್ಟಿಪ್ಲೆಕ್ಸ್ ಸೇರಿ ಎಲ್ಲಾ ಚಿತ್ರಮಂದಿರಗಳಲ್ಲಿ ಇನ್ಮುಂದೆ ಪ್ರತಿ ಪ್ರದರ್ಶನಕ್ಕೆ 200 ರೂಪಾಯಿ ತೆಗೆದುಕೊಳ್ಳಬೇಕು.
ಬೆಂಗಳೂರು ಸೇರಿದಂತೆ ರಾಜ್ಯದ ವಿವಿದೆಡೆ ಮಲ್ಟಿಪ್ಲೆಕ್ಸ್‌ಗಳು ದುಬಾರಿ ಟಿಕೆಟ್ ದರ ನಿಗದಿಪಡಿಸುತ್ತಿದ್ದವು. ಇದೀಗ ಮಲ್ಟಿಪ್ಲೆಕ್ಸ್‌ಗಳ ದರ ಏರಿಕೆಗೆ ರಾಜ್ಯ ಸರ್ಕಾರ ಕಡಿವಾಣ ಹಾಕಿದೆ. ಇನ್ಮುಂದೆ ರಾಜ್ಯದ ಮಲ್ಟಿಪ್ಲೆಕ್ಸ್ ಸೇರಿದಂತೆ ಎಲ್ಲಾ ಚಿತ್ರಮಂದಿರಗಳಲ್ಲಿ ಪ್ರದರ್ಶಿಸಲಾಗುವ ಪ್ರತಿ ಪ್ರದರ್ಶನಕ್ಕೆ ಪ್ರವೇಶ ದರ ₹200ಗಳಿಗಿಂತ ಹೆಚ್ಚು ಮಾಡುವಂತಿಲ್ಲ.
ಟಿಕೆಟ್ ದರ ನಿಗದಿಪಡಿಸುವ ಜೊತೆಗೆ ಕನ್ನಡ ಚಲನಚಿತ್ರ ಪ್ರೋತ್ಸಾಹಕ್ಕಾಗಿ OTT ವೇದಿಕೆ ಸೃಷ್ಟಿ ಮಾಡಲು ಕ್ರಮ ಕೈಗೊಳ್ಳುವ ಭರವಸೆಯನ್ನು ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಹೇಳಿದೆ. ಸರ್ಕಾರಿ ಸ್ವಾಮ್ಯದ OTT ಪ್ಲಾಟ್‌ಫಾರ್ಮ್‌ಗಳಿಂದ ಕನ್ನಡ ಚಲನಚಿತ್ರಗಳಿಗೆ ಪ್ರೋತ್ಸಾಹ ನೀಡುವ ಯೋಜನೆ ಇದಾಗಿದೆ.