Ex Hamas Chief ಸಿನ್ವಾರ್‌ನ ಐಷಾರಾಮಿ ಬಂಕರ್ ವೀಡಿಯೋ ಬಿಡುಗಡೆ

ನವದೆಹಲಿ: ಗಾಜಾ ಸಂಘರ್ಷದ ಆರಂಭದಲ್ಲಿ ಹಮಾಸ್‌ನ ಮಾಜಿ ಮುಖ್ಯಸ್ಥ ಯಾಹ್ಯಾ ಸಿನ್ವಾರ್ ಉಳಿದುಕೊಂಡಿದ್ದ ಎನ್ನಲಾದ ಬಂಕರ್‌ನ ವೀಡಿಯೋ ದೃಶ್ಯಾವಳಿಗಳನ್ನು ಇಸ್ರೇಲ್ ಮಿಲಿಟರಿ ಪಡೆ ಬಿಡುಗಡೆ ಮಾಡಿದೆ. ಧ್ವಂಸಗೊಂಡ ಖಾನ್ ಯೂನಿಸ್‌ ನಗರದ ಅಡಿಯಲ್ಲಿ ಪತ್ತೆಯಾದ,…

ನವದೆಹಲಿ: ಗಾಜಾ ಸಂಘರ್ಷದ ಆರಂಭದಲ್ಲಿ ಹಮಾಸ್‌ನ ಮಾಜಿ ಮುಖ್ಯಸ್ಥ ಯಾಹ್ಯಾ ಸಿನ್ವಾರ್ ಉಳಿದುಕೊಂಡಿದ್ದ ಎನ್ನಲಾದ ಬಂಕರ್‌ನ ವೀಡಿಯೋ ದೃಶ್ಯಾವಳಿಗಳನ್ನು ಇಸ್ರೇಲ್ ಮಿಲಿಟರಿ ಪಡೆ ಬಿಡುಗಡೆ ಮಾಡಿದೆ. ಧ್ವಂಸಗೊಂಡ ಖಾನ್ ಯೂನಿಸ್‌ ನಗರದ ಅಡಿಯಲ್ಲಿ ಪತ್ತೆಯಾದ, ಅಕ್ಟೋಬರ್ 7ರ ಕ್ರೂರ ದಾಳಿಯ ಹಿಂದಿನ ಮಾಸ್ಟರ್‌ಮೈಂಡ್ ಎಂದು ಕರೆಯಲ್ಪಡುವ ಸಿನ್ವಾರ್‌ನ ಬಂಕರ್‌ನಲ್ಲಿ ಲಕ್ಷಾಂತರ ರೂಪಾಯಿ ಹಣದ ಕಟ್ಟುಗಳು, ಐಷಾರಾಮಿ ಸೌಕರ್ಯಗಳು ಸೇರಿದಂತೆ ಯುದ್ಧದಿಂದ ಪಾರಾಗಲು ಸಕಲ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದು ಬಯಲಾಗಿದೆ.

ಇಸ್ರೇಲಿ ರಕ್ಷಣಾ ಪಡೆಗಳು (IDF) ಸಿನ್ವಾರ್‌ನ ಭೂಗತ ಅಡಗುತಾಣದ ಒಳಗಿನ ವ್ಯವಸ್ಥೆಗಳನ್ನು ತೋರಿಸುವ ವೀಡಿಯೋ ತುಣುಕನ್ನು ಹಂಚಿಕೊಂಡಿದೆ. ವೀಡಿಯೋದಲ್ಲಿ ಆಧುನಿಕ ವ್ಯವಸ್ಥೆಯ ಸ್ನಾನಗೃಹಗಳು, ಬಾತ್‌ರೂಂ ವ್ಯವಸ್ಥೆ, ಸುಗಂಧದ್ರವ್ಯದ ಬಾಟಲ್‌ಗಳು, ಸುಸಜ್ಜಿತ ಅಡುಗೆಮನೆ ಹಾಗೂ ವಿಶ್ವಸಂಸ್ಥೆಯ ಪ್ಯಾಲೇಸ್ಟಿನಿಯನ್ ನಿರಾಶ್ರಿತರ ಏಜೆನ್ಸಿ (UNRWA) ಲಾಂಛನದೊಂದಿಗೆ ಲೇಬಲ್ ಮಾಡಲಾದ ಆಹಾರ ಪಡಿತರವನ್ನು ಸಂಗ್ರಹಿಸಿರುವುದು ಕಂಡುಬಂದಿದೆ.

61ರ ಹರೆಯದ ಸಿನ್ವಾರ್, ಯುದ್ಧ ಸ್ಥಿತಿ ಉಲ್ಬಣಗೊಳ್ಳುತ್ತಿದ್ದಂತೆ ತನ್ನ ಸಿಬ್ಬಂದಿ ಮತ್ತು ನಿಕಟವರ್ತಿಗಳೊಂದಿಗೆ ಬಂಕರ್‌ನಲ್ಲಿ ಆಶ್ರಯ ಪಡೆದಿದ್ದರು. ಗಾಜಾದಲ್ಲಿ ಈಗಾಗಲೇ ಭೀಕರವಾದ ಮಾನವೀಯ ಬಿಕ್ಕಟ್ಟು ಉಲ್ಬಣಗೊಂಡಿದ್ದು, ಹಮಾಸ್ ಅಂತರಾಷ್ಟ್ರೀಯ ಸಂಸ್ಥೆಗಳಿಂದ ಕದಿಯುತ್ತಿದೆ ಎಂದು ಇಸ್ರೇಲ್ ಮಾಡಿದ್ದ ಆರೋಪಕ್ಕೆ ಪೂರಕ ಎನ್ನುವಂತೆ UNRWA ಸರಬರಾಜು ಮಾಡಿದ ಆಹಾರದ ಪೊಟ್ಟಣಗಳು ಪತ್ತೆಯಾಗಿವೆ.

Vijayaprabha Mobile App free

IDF ಸೈನಿಕರು ಬಿಡುಗಡೆ ಮಾಡಿದ ಬಂಕರ್‌ನ ವ್ಯವಸ್ಥೆಗಳನ್ನು ತೋರಿಸುವ ವೀಡಿಯೋ ಪ್ರಕಾರ, ಸಿನ್ವಾರ್‌ನ ವೈಯಕ್ತಿಕ ಕ್ವಾರ್ಟರ್ಸ್ ಲಕ್ಷಾಂತರ ಇಸ್ರೇಲಿ ಶೆಕೆಲ್‌ ಹಣ ತುಂಬಿದ್ದ ದೊಡ್ಡ ಲಾಕರನ್ನು ಒಳಗೊಂಡಿದೆ. ಬಂಕರ್‌ನ ಬಾಗಿಲಿನ ಪಕ್ಕದಲ್ಲಿ, ಸೈನಿಕರ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ಸ್ಫೋಟಕಗಳ ಸಂಗ್ರಹದಿಂದ ತುಂಬಿದ ಲಾಕರ್‌ಗಳು ಸಹ ಕಂಡುಬಂದಿವೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.