ಟ್ರಂಪ್ ಆಡಳಿತದಲ್ಲಿ ಹೆಚ್ಚುತ್ತಿರುವ ಅಮೆರಿಕದ ಸುಂಕಗಳ ವಿರುದ್ಧ ಭಾರತ ಒಗ್ಗಟ್ಟಿನಿಂದ ನಿಲ್ಲಬೇಕೆಂದು ಚೀನಾ ಒತ್ತಾಯಿಸಿತು. ಟ್ರಂಪ್ ಆಡಳಿತವು ಚೀನಾದ ಸರಕುಗಳ ಮೇಲೆ ಶೇ. 104 ರಷ್ಟು ಸುಂಕವನ್ನು ಘೋಷಿಸುತ್ತಿದ್ದಂತೆ, ವಾಷಿಂಗ್ಟನ್‌ನ ಕ್ರಮಗಳು ಏಕಪಕ್ಷೀಯ ಮತ್ತು ನ್ಯಾಯಸಮ್ಮತವಲ್ಲ ಎಂದು ಕರೆದ ಬೀಜಿಂಗ್ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಪ್ರತಿಜ್ಞೆ ಮಾಡಿತು.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತ ವಿಧಿಸಿರುವ ಸುಂಕಗಳಿಂದ ಎದುರಾಗುವ ಸವಾಲುಗಳನ್ನು ನಿವಾರಿಸಲು ಭಾರತ ಮತ್ತು ಚೀನಾ ಒಟ್ಟಾಗಿ ನಿಲ್ಲಬೇಕು ಎಂದು ಭಾರತದಲ್ಲಿನ ಚೀನಾ ರಾಯಭಾರ ಕಚೇರಿಯ ವಕ್ತಾರರು ಮಂಗಳವಾರ ಹೇಳಿದ್ದಾರೆ.
“ಚೀನಾ-ಭಾರತ ಆರ್ಥಿಕ ಮತ್ತು ವ್ಯಾಪಾರ ಸಂಬಂಧವು ಪೂರಕತೆ ಮತ್ತು ಪರಸ್ಪರ ಲಾಭವನ್ನು ಆಧರಿಸಿದೆ. ಅಮೆರಿಕದ ಸುಂಕದ ದುರುಪಯೋಗವನ್ನು ಎದುರಿಸುತ್ತಿರುವ… ಎರಡು ದೊಡ್ಡ ಅಭಿವೃದ್ಧಿಶೀಲ ರಾಷ್ಟ್ರಗಳು ತೊಂದರೆಗಳನ್ನು ನಿವಾರಿಸಲು ಒಟ್ಟಾಗಿ ನಿಲ್ಲಬೇಕು” ಎಂದು ವಕ್ತಾರ ಯು ಜಿಂಗ್ X ಖಾತೆಯಲ್ಲಿ ಪೋಸ್ಟ್ ಮಾಡಿ ತಿಳಿಸಿದ್ದಾರೆ.