ವಾಷಿಂಗ್ಟನ್: ಒಂದುಕಡೆ ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯುತ್ತಿದೆ. ಮತ್ತೊಂದೆಡೆ ಭಾರತದ ವಿರುದ್ಧ ಮುನಿಸು ಮುಂದುವರೆದಿದ್ದು, ಮತ್ತಷ್ಟು ಕಂಪನಿಗಳ ಮೇಲೆ ನಿರ್ಬಂಧ ಹೇರಿದೆ.
ಹೌದು, ಉಕ್ರೇನ್ ಮೇಲೆ ಸಮರ ನಡೆಸುತ್ತಿರುವ ರಷ್ಯಾ ಜತೆ ವ್ಯವಹಾರಿಕ ಸಂಬಂಧ ಹೊಂದಿದ್ದಕ್ಕೆ ಅಮೆರಿಕದಿಂದ ನಿಷೇಧಕ್ಕೆ ಒಳಗಾಗಿರುವ ಭಾರತದ ಕಂಪನಿಗಳ ಸಂಖ್ಯೆ ಶುಕ್ರವಾರ 4ರಿಂದ 15ಕ್ಕೆ ಏರಿದೆ.
ಅಮೆರಿಕ ವಿಶ್ವಾದ್ಯಂತ 275 ಕಂಪನಿಗಳ ಮೇಲೆ ರಷ್ಯಾ ಜತೆ ನಂಟು ಹೊಂದಿದ್ದಕ್ಕೆ ವಹಿವಾಟಿನಿಂದ ನಿರ್ಬಂಧ ಹೇರಿದೆ. ಇವುಗಳಲ್ಲಿ ಭಾರತದ 15 ಕಂಪನಿಗಳಿವೆ. ಇದರ ಜತೆ ಚೀನಾ, ಸ್ವಿಜರ್ಲೆಂಡ್, ಥಾಯ್ಲೆಂಡ್ ಹಾಗೂ ಟರ್ಕಿ ಕಂಪನಿಗಳೂ ಸೇರಿವೆ ಎಂದು ಅಮೆರಿಕದ ಖಜಾನೆ ಇಲಾಖೆ ಹೇಳಿಕೆಯಲ್ಲಿ ತಿಳಿಸಿದೆ.
ಸರ್ವೀಸಸ್ ಪ್ರೈವೇಟ್ ಲಿಮಿಟೆಡ್, ಡೆನ್ವಾಸ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್; ಎಮ್ಸಿಸ್ಟೆಕ್, ಗ್ಯಾಲಕ್ಸಿ ಬೇರಿಂಗ್ಸ್, ಆರ್ಬಿಟ್ ಫಿಂಟ್ರೇಡ್; ಇನ್ನೋವಿಯೊ ವೆಂಚರ್ಸ್, ಕೆಜಿಡಿ ಎಂಜಿನಿಯರಿಂಗ್, ಲೋಕೇಶ್ ಮೆಷಿನ್ಸ್ ಲಿಮಿಟೆಡ್ ಅನ್ನು ಸಹ ಒಳಗೊಂಡಿವೆ; ಪಾಯಿಂಟರ್ ಎಲೆಕ್ಟ್ರಾನಿಕ್ಸ್, ಆರ್‌ಆರ್ಜಿ ಇಂಜಿನಿಯರಿಂಗ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್, ಶಾರ್ಪ್ಲೈನ್ ಆಟೋಮೇಷನ್ ಪ್ರೈವೇಟ್- ಇವು ನಿರ್ಬಂಧಿತ ಭಾರತದ ಕಂಪನಿಗಳು.