ವಿಜಯನಗರ: ಬಸ್ನಲ್ಲಿ ತೆರಳುತ್ತದ್ದ ವೇಳೆ ಮಹಿಳೆಯೋರ್ವರು ಬ್ಯಾಗಿನಿಂದ ತಮ್ಮ ಚಿನ್ನಾಭರಣ ಕಳುವಾಗಿದ್ದಾಗಿ ರಂಪಾಟ ಮಾಡಿದ್ದು, ಮಹಿಳೆಯ ಕೂಗಾಟ ಕಂಡು ಚಾಲಕ ಪ್ರಯಾಣಿಕರ ಸಮೇತ ಬಸ್ಸನ್ನು ಪೊಲೀಸ್ ಠಾಣೆಗೆ ತಂದು ನಿಲ್ಲಿಸಿದ ಘಟನೆ ವಿಜಯನಗರ ಜಿಲ್ಲೆಯಲ್ಲಿ ನಡೆದಿದೆ.
90 ಗ್ರಾಂ ಬಂಗಾರ ಒಡವೆ ಎಗರಿಸಲಾಗಿದೆ ಎಂದು ಬಸ್ ನಲ್ಲಿದ್ದ ಮಹಿಳೆ ಅಂಬಮ್ಮ ದೂರಿದ್ದಾರೆ. ಮಹಿಳೆ ರಾದ್ಧಾಂತ ಹಿನ್ನಲೆ ಬಸ್ ಚಾಲಕ ಮತ್ತು ನಿರ್ವಾಹಕರು ಪ್ರಯಾಣಿಕರ ಸಮೇತ ಪೊಲೀಸ್ ಠಾಣೆಗೆ ಬಸ್ ತಂದಿದ್ದಾರೆ. ಹೊಸಪೇಟೆ ನಗರ ಠಾಣೆಗೆ ಬಸ್ ತರಲಾಗಿದ್ದು, ಪ್ರಯಾಣಿಕರ ತಪಾಸಣೆ ನಡೆಸಲಾಗಿದೆ.
ಹೊಸಪೇಟೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ಪೊಲೀಸರು ಪ್ರಯಾಣಿಕರು ಪರಿಶೀಲನೆ ನಡೆಸಿದ್ದಾರೆ. ಆದರೆ ಚಿನ್ನಾಭರಣ ಪತ್ತೆಯಾಗಿಲ್ಲ ಎನ್ನಲಾಗಿದೆ.