ವಿಜಯನಗರ: ಪ್ರಿಯಕರನೊಬ್ಬ ಗಂಡನ ಮನೆಯಿಂದ ದುಗ್ಗಮ್ಮ ಜಾತ್ರೆಗೆ ಬಂದಿದವಳನ್ನು ಭೀಕರವಾಗಿ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ದುಗ್ಗಾವತಿಯಲ್ಲಿ ನಡೆದಿದೆ.
ಹೌದು, ತಾಲೂಕಿನ ದುಗ್ಗಾವತಿಯ ದುಗ್ಗಮ್ಮದೇವಿ ಜಾತ್ರೆಯಲ್ಲಿ ಪ್ರಿಯಕರನೊಬ್ಬ ಗಂಡನ ಮನೆಯಿಂದ ಜಾತ್ರೆಗೆ ಬಂಡ ತನ್ನ ಪ್ರೇಮಿಯನ್ನು ಚಾಕುವಿನಿಂದ ಭೀಕರವಾಗಿ ಇರಿದು ಕೊಲೆ ಮಾಡಿರುವ ಘಟನೆ ನಡೆದಿದೆ. ಪ್ರತಿಭಾ ನಾಗರಾಜ್ (25) ಕೊಲೆಯಾದ ಮಹಿಳೆಯಾಗಿದ್ದು, ಮೂಕಪ್ಪನವರ ಹನುಮಂತ ಎಂಬಾತ ಕೊಲೆ ಮಾಡಿರುವ ವ್ಯಕ್ತಿ.
ಪ್ರೀತಿಸಿದವಳು ಸಿಗದಕ್ಕೆ ಆಕೆಯನ್ನ ಚಾಕುವಿನಿಂದ ಇರಿದ ಪಾಗಾಲ್ ಪ್ರೇಮಿ :
ಆರೋಪಿ ಮೂಕಪ್ಪನವರ ಹನುಮಂತನ ಎಂಬಾತ ಮೃತ ಪ್ರತಿಭಾಳನ್ನ ಪ್ರೀತಿಸುತ್ತಿದ್ದನು. ಆದರೆ, ಪ್ರತಿಭಾಳನ್ನ ರಾಣೆಬೆನ್ನೂರಿನ ನಾಗರಾಜ್ ಎಂಬುವವರ ಜೊತೆ ಮದುವೆ ಮಾಡಿಕೊಡಲಾಗಿದ್ದು, ಈ ದಂಪತಿಗೆ ಒಂದು ಗಂಡು ಮಗು ಸಹ ಇದೆ.
ಮದುವೆ ಬಳಿಕ ಚೆನ್ನಾಗಿ ಜೀವನ ನಡೆಸುತ್ತಿದ್ದ ಪ್ರತಿಭಾ, ಚಿಕ್ಕಮ್ಮನ ಊರಾದ ದುಗ್ಗಾವತಿಯ ದುಗ್ಗಮ್ಮದೇವಿ ಜಾತ್ರೆಗೆ ಬಂದಿದ್ದಳು. ಇನ್ನು, ಪ್ರತಿಭಾ ಜಾತ್ರೆಗೆ ಬಂದ ವಿಷಯ ತಿಳಿದು ಆರೋಪಿ ಹನುಮಂತ ಆಕೆಯನ್ನ ನಡು ರಸ್ತೆಯಲ್ಲಿ ಮನ ಬಂದಂತೆ ದೇಹದ ಬಹುತೇಕ ಭಾಗಳಿಗೆ ಚಾಕುವಿನಿಂದ ಚುಚ್ಚಿದ್ದು, ತೀವ್ರಗಾಯಗೊಂಡಿದ್ದ ಮಹಿಳೆಯನ್ನ ಆಸ್ಪತ್ರೆಗೆ ದಾಖಲು ಮಾಡುವ ಮಾರ್ಗ ಮಧ್ಯಯೇ ತೀವ್ರ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾಳೆ. ಈ ಕುರಿತು ಹಲವಾಗಲು ಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಮೂಕಪ್ಪನವರ ಹನುಮಂತನನ್ನು ಬಂಧಿಸಲಾಗಿದೆ.