Mobile Returned: ಸಿಕ್ಕ ಮೊಬೈಲ್ ಹಿಂತಿರುಗಿಸಿ ಪ್ರಮಾಣಿಕತೆ ಮೆರೆದ ಅಟೊ ಚಾಲಕ

ಶಿರಸಿ: ಬುಧವಾರ ರಾತ್ರಿ ಶಿರಸಿ ನಗರ ಠಾಣಾ ವ್ಯಾಪ್ತಿಯ ಐದು ವೃತ್ತದ ಹತ್ತಿರ  ಬಾಗಲಕೋಟೆ ಜಿಲ್ಲೆಯ ಬಾದಾಮಿಯ ಸುದೀಪ್ ಹನುಮಪ್ಪ ಬಸರಿ ಇವರು ತಮ್ಮ ಶಾಲಾ ದಾಖಲೆಗಳು ಮತ್ತು ಖಾಸಗಿ ದಾಖಲೆಗಳನ್ನು ಹಾಗೂ 21,000…

ಶಿರಸಿ: ಬುಧವಾರ ರಾತ್ರಿ ಶಿರಸಿ ನಗರ ಠಾಣಾ ವ್ಯಾಪ್ತಿಯ ಐದು ವೃತ್ತದ ಹತ್ತಿರ  ಬಾಗಲಕೋಟೆ ಜಿಲ್ಲೆಯ ಬಾದಾಮಿಯ ಸುದೀಪ್ ಹನುಮಪ್ಪ ಬಸರಿ ಇವರು ತಮ್ಮ ಶಾಲಾ ದಾಖಲೆಗಳು ಮತ್ತು ಖಾಸಗಿ ದಾಖಲೆಗಳನ್ನು ಹಾಗೂ 21,000 ರೂ ಮೌಲ್ಯದ ಒಪ್ಪೊ ಕಂಪನಿ ಹಾಗೂ 8,000 ರೂ ಮೌಲ್ಯದ ರೆಡ್ಮಿ ಕಂಪೆನಿಯ ಮೊಬೈಲ್ ಗಳನ್ನು  ಕಳೆದುಕೊಂಡಿದ್ದರು.

ಈ ದಾಖಲೆಗಳು ಮತ್ತು ಮೊಬೈಲ್ ಗಳು ರಾತ್ರಿ ಆಟೋ ಚಾಲನೆ ಮಾಡುತ್ತಿದ್ದ ಶಿರಸಿ ಕಸ್ತರೂಬಾ ನಗರದ ಮಹ್ಮದ್ ಶಫಿ ಇಬ್ರಾಹಿಂ‌ ಸಾಬ್ ರವರಿಗೆ ಸಿಕ್ಕಿದ ಕೂಡಲೇ ಅವರು ಠಾಣೆಗೆ ತಂದು ಒಪ್ಪಿಸಿದ್ದಾರೆ. 

ಅವರ ಪ್ರಾಮಾಣಿಕತೆಗೆ ಪ್ರಶಂಸೆ ವ್ಯಕ್ತಪಡಿಸಿ ಪಿಎಸ್ಐ ನಾಗಪ್ಪ ಬಿ ರವರು ಆಟೋ ಚಾಲಕನನ್ನು ಅಭಿನಂದಿಸಿ, ಅವರ ಸಮ್ಮುಖದಲ್ಲೇ ನೊಂದವರಿಗೆ ದಾಖಲೆ ಮತ್ತು ಮೊಬೈಲ್ ಗಳನ್ನು ಒಪ್ಪಿಸಿದರು.

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.