ಭಟ್ಕಳ: ಮನೆಯಲ್ಲಿದ್ದ ಚಿನ್ನಾಭರಣ ಕಳ್ಳತನ ಮಾಡಿ ಮುತ್ತೂಟ್ ಫೈನಾನ್ಸ್ ನಲ್ಲಿಟ್ಟಿದ್ದ ಸುಮಾರು 5 ಲಕ್ಷ ರೂ ಬೆಲೆಯ 86.600 ಗ್ರಾಂ ಚಿನ್ನಾಭರಣಗಳನ್ನು ಪತ್ತೆ ಹಚ್ಚಿದ ಪೊಲೀಸರು, ಆರೋಪಿ ಸಮೇತವಾಗಿ ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಪ್ರಕರಣದ ಆರೋಪಿ ತಜಮ್ಮುಲ್ ಹಸನ್ ಮೋಹಿದ್ದಿನ್ ಯಾನೆ ತಾಜುದ್ದಿನ್ ಶೌಕತ್ ಆಸರಕೇರಿ, ತಾನೇ ತನ್ನ ಮನೆ ಕಳ್ಳತನ ಮಾಡಿ, ತನ್ನ ಮನೆ ಕಳ್ಳತನವಾಗಿದೆ ಎಂದು ಪೋಲಿಸರಿಗೆ ದೂರು ನೀಡಿದ್ದ. ಪ್ರಕರಣ ಸಂಬಂಧ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಎಸ್ಪಿ ನಾರಾಯಣ ಮಾರ್ಗದರ್ಶನದಲ್ಲಿ ನಡೆದ ಕಾರ್ಯಚರಣೆಯಲ್ಲಿ ಸಿಪಿಐ ಸಂತೋಷ ಕಾಯ್ಕಿಣಿ, ಪಿಎಸ್ಐ ನವೀನ್ ಎಸ್ ನಾಯ್ಕ ಸಿಬ್ಬಂದಿಗಳಾದ ದಿನೇಶ ನಾಯಕ್, ಅರುಣ ಪಿಂಟೊ, ದೀಪಕ್ ಎಸ್ ನಾಯ್ಕ, ಮದರಸಾಬ್ ಚಿಕ್ಕೇರಿ, ದೇವು ಆರ್ ನಾಯ್ಕ, ಶ್ರೀಧರ ತಾಂಡೇಲ್, ಮಹಾಂತೇಶ ಹಿರೇಮಠ, ಕಿರಣ ಪಾಟೀಲ್ ಹಾಗೂ ವಿಲಿಯಂ ಫರ್ನಾಂಡೀಸ್ ಪಾಲ್ಗೊಂಡಿದ್ದರು.