ಕಾರವಾರ: 20-20 ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತದ ಗೆಲುವಿಗೆ ಕಾರಣರಾದ ಕ್ರಿಕೆಟ್ ತಂಡದ ಬೌಲಿಂಗ್ ಥ್ರೋ ಡೌನ್ ಸ್ಪೆಷಲಿಸ್ಟ್ ರಾಘವೇಂದ್ರ ದೀವಗಿ ಅವರು ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಸ್ಥಾನಕ್ಕೆ ಆಗಮಿಸಿ ದೇವರ ದರ್ಶನ ಪಡೆದುಕೊಂಡರು.
ಇದಕ್ಕೂ ಮುನ್ನ ಶ್ರೀ ಮಹಾಗಣಪತಿ, ತಾಮ್ರಗೌರಿ ಸೇರಿದಂತೆ ವಿವಿಧ ದೇವಾಲಯಗಳಿಗೆ ತೆರಳಿ ದರ್ಶನ ಪಡೆದರು.
ಕಳೆದ ಹಲವು ವರ್ಷಗಳಿಂದ ಭಾರತೀಯ ಕ್ರಿಕೆಟ್ ತಂಡದಲ್ಲಿ ಬೌಲಿಂಗ್ ಥ್ರೋ ಡೌನ್ ಮೂಲಕ ಬಾಟ್ಸ್ಮನ್‌ಗಳಿಗೆ ಯಾವ ಬಾಲ್‌ನ್ನು ಹೇಗೆ ಬಳಸಿಕೊಳ್ಳಬೇಕು ಎನ್ನುವುದನ್ನು ರೂಢಿ ಮಾಡಿಕೊಡುವಲ್ಲಿ ರಾಘವೇಂದ್ರ ದಿವಗಿ ಅವರ ಪಾತ್ರ ಅಪಾರವಾದುದು. ಈ ಬಾರಿಯ 20-20 ವಿಶ್ವಕಪ್ ಗೆದ್ದ ಬಳಿಕ ಇವರ ಪರಿಚಯ ಎಲ್ಲೆಡೆ ಪಸರಿಸುವಂತಾಯಿತು.