ದಾವಣಗೆರೆ: ತುಂಗಾ ಮತ್ತು ಭದ್ರಾ ಜಲಾಶಯಗಳಿಂದ ನದಿಗೆ ನೀರು ಬಿಡುತ್ತಿರುವುದರಿಂದ ಜಿಲ್ಲೆಯ ಹೊನ್ನಾಳಿಯ ತುಂಗಭದ್ರಾ ನದಿ ನೀರಿನ ಮಟ್ಟ 11.450 ಮೀಟರ್‌ಗೆ ಏರಿಕೆಯಾಗಿದೆ.
ಇದರಿಂದಾಗಿ ಹೊನ್ನಳ್ಳಿ ತಾಲ್ಲೂಕಿನ ಸಾಸ್ವೆಹಳ್ಳಿ ಭಾಗದ ಕೆಲ ಗ್ರಾಮಸ್ಥರು, ನ್ಯಾಮತಿ ತಾಲ್ಲೂಕಿನ ಚೀಲೂರು ಭಾಗದ ಕೆಲ ಹಳ್ಳಿಗಳು ಹಾಗೂ ಹೊನ್ನಾಳಿ ನಗರದ ಬಂಬೂ ಬಜಾರ್ ಹಾಗೂ ಬಾಲರಾಜ್ ಘಾಟ್ ನಿವಾಸಿಗಳು ಆತಂಕದಲ್ಲಿದ್ದಾರೆ.
ಬಾಲರಾಜ್ ಘಾಟ್‌ನ 12 ಕುಟುಂಬಗಳ 40 ಜನರನ್ನು ಅಂಬೇಡ್ಕರ್ ಭವನದಲ್ಲಿ ತೆರೆದಿರುವ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದ್ದು, ಅವರಿಗೆ ಮುಂಜಾನೆಯ ತಿಂಡಿ ಮತ್ತು ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ಮುಖ್ಯಾಧಿಕಾರಿ ಎಸ್. ಆರ್. ವೀರಭದ್ರಯ್ಯ ತಿಳಿಸಿದರು.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.