ದಾವಣಗೆರೆ: ಖೋಟಾನೋಟು ಜಾಲ ಪತ್ತೆ ಮಾಡಿದ ಡಿಸಿಆರ್ ತಂಡ; 1.20 ಲಕ್ಷ ರೂ ಖೋಟಾನೋಟು ವಶ, ಇಬ್ಬರ ಬಂಧನ

ದಾವಣಗೆರೆ: ಆಗಸ್ಟ್ 10 ರಂದು ದಾವಣಗೆರೆಯ ಯಲ್ಲಮ್ಮನಗರದಲ್ಲಿ ಕಲರ್ ಜೆರಾಕ್ಸ್ ಮಿಷಿನ್‌ ನಿಂದ ಜೆರಾಕ್ಸ್ ಮಾಡಿದ ಖೋಟಾ ನೋಟುಗಳನ್ನು ತೆಗೆದುಕೊಂಡು ಚಲಾವಣೆ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾವಣಗೆರೆ ಡಿಸಿಆರ್‌ಬಿ ಘಟಕದ ಪೊಲೀಸ್‌…

DCR team succeeds in detecting counterfeit network

ದಾವಣಗೆರೆ: ಆಗಸ್ಟ್ 10 ರಂದು ದಾವಣಗೆರೆಯ ಯಲ್ಲಮ್ಮನಗರದಲ್ಲಿ ಕಲರ್ ಜೆರಾಕ್ಸ್ ಮಿಷಿನ್‌ ನಿಂದ ಜೆರಾಕ್ಸ್ ಮಾಡಿದ ಖೋಟಾ ನೋಟುಗಳನ್ನು ತೆಗೆದುಕೊಂಡು ಚಲಾವಣೆ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾವಣಗೆರೆ ಡಿಸಿಆರ್‌ಬಿ ಘಟಕದ ಪೊಲೀಸ್‌ ಉಪಾಧೀಕ್ಷಕರಾದ ಶ್ರೀ ಬಿ ಎಸ್ ಬಸವರಾಜ್ ಹಾಗೂ ಡಿಸಿಆರ್‌ಬಿ ಘಟಕದ ಸಿಬ್ಬಂದಿಗಳು ಕಾನೂನುಬಾಹಿರವಾಗಿ ಖೋಟಾ ನೋಟು ಮುದ್ರಣ ಮತ್ತು ಚಲಾವಣೆಗೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಹೌದು, ಆರೋಪಿತರಾದ ಆಶೋಕ ಎಸ್, ಅರಸನಾಳು ಹಾಲೇಶಿ ಇವರುಗಳನ್ನು ದಸ್ತಗಿರಿ ಮಾಡಿ ಆರೋಪಿತರಿಂದ 1,20,700/ ಖೋಟಾ ನೋಟುಗಳು, 01 ಕಲರ್ ಜೆರಾಕ್ಸ್ ಮಿಷಿನ್ ಹಾಗೂ ಇದಕ್ಕೆ ಸಂಬಂಧಿಸಿದ ಇತರೆ ಸಾಮಾಗ್ರಿಗಳನ್ನು ವಶಪಡಿಸಕೊಳ್ಳಲಾಗಿದೆ.

ಪ್ರಕರಣದಲ್ಲಿ ಶ್ರೀ ಬಿ.ಎಸ್.ಬಸವರಾಜ್ ಪೊಲೀಸ್ ಉಪಾಧೀಕ್ಷಕರು, ಡಿಸಿಆರ್‌ಬಿ ಘಟಕ ಮತ್ತು ಸಿಬ್ಬಂದಿಗಳಾದ ಕೆ.ಸಿ ಮಜೀದ್, ಕೆ.ಟಿ. ಆಂಜನೇಯ, ಡಿ.ರಾಘವೇಂದ್ರ, ಯು.ಮಾರುತಿ, ಪಿ.ಸುರೇಶ್, ಜೆ.ಹೆಚ್.ಆರ್.ನಟರಾಜ್, ಈ.ಬಿ.ಅಶೋಕ, ಆರ್.ರಮೇಶ್ ನಾಯ್ಕ, ಸಿ.ಎಸ್.ಬಾಲರಾಜ್, ಸಿ.ಮಲ್ಲಿಕಾರ್ಜುನ್‌, ಎಂ.ಹೆಚ್. ಪ್ರಶಾಂತ್ ಕುಮಾರ್ ಹಾಗೂ ನಿಂಗರಾಜ್ ಇವರುಗಳು ಖೋಟಾನೋಟು ಜಾಲ ಪತ್ತೆ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

Vijayaprabha Mobile App free

ಈನು, ಇವರ ಕಾರ್ಯವನ್ನು ಶ್ರೀ ಸಿ.ಬಿ.ರಿಷ್ಯಂತ್‌, ಐಪಿಎಸ್, ಮಾನ್ಯ ಪೊಲೀಸ್ ಅಧೀಕ್ಷಕರು ದಾವಣಗೆರೆ ಜಿಲ್ಲೆ, ಹಾಗೂ ಶ್ರೀ ಆರ್.ಬಿ.ಬಸರಗಿ, ಹೆಚ್ಚುವರಿ ಅಧೀಕ್ಷಕರು, ದಾವಣಗೆರೆ ರವರು ಶ್ಲಾಘಸಿದ್ದಾರೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.