ದಾವಣಗೆರೆ : ದಾವಣಗೆರೆ ಜಿಲ್ಲೆಯಲ್ಲಿ ದೇವರ ಕೋಣಕ್ಕಾಗಿ ಎರಡು ಊರುಗಳ ಮಧ್ಯೆ ದೊಡ್ಡ ಗಲಾಟೆ ನಡೆದಿದ್ದು, ಈ ಕೋಣಕ್ಕಾಗಿ ನ್ಯಾಯಾ ಪಂಚಾಯತಿ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ಹೌದು, ದೇವಿಗೆ ಬಿಟ್ಟ ಕೋಣಕ್ಕಾಗಿ ಎರಡು ಊರಿನವರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಎಸ್ಪಿಯವರಿಗೆ ದೂರು, ಪ್ರತಿ ದೂರು ಕೊಡಲಾಗಿದೆ. ದಾವಣಗೆರೆಯ ಹರಿಹರ ತಾಲೂಕಿನಲ್ಲಿ ಬರುವ ಕುಣಿಬೆಳಕೆರೆ ಗ್ರಾಮ ಹಾಗೂ ಹೊನ್ನಾಳಿ ತಾಲೂಕಿನ ಕುಳಗಟ್ಟೆ ಗ್ರಾಮಗಳ ನಡುವೆ ಕೋಣ ನಮ್ಮೂರಿನದೆಂದು ವಾದ-ವಿವಾದ ನಡೆಯುತ್ತಿದೆ.
ದೇವಿಗೆ ಬಿಟ್ಟ ಕೋಣದ ವಯಸ್ಸಿನ ಪರೀಕ್ಷೆ ಇಗಾಗಲೇ ನಡೆದಿದ್ದು, ಇದೀಗ ಆ ಕೋಣ ಯಾವ ಗ್ರಾಮದ್ದು ಎಂದು ಕಂಡು ಹಿಡಿಯಲು DNA ಟೆಸ್ಟ್ಗೆ ದಾವಣಗೆರೆ ಪೊಲೀಸ್ ಇಲಾಖೆ ನಿರ್ಧಾರ ಮಾಡಿದೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.