ಬೆಂಗಳೂರು: ರಾಜ್ಯದಲ್ಲಿ ಮತ್ತೆ ನಂದಿನಿ ಹಾಲಿನ ದರ ಹೆಚ್ಚಳವಾಗಲಿದೆ. ಈ ಕುರಿತು ಸ್ವತಹ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಬಹಿರಂಗವಾಗಿ ಹೇಳಿಕೊಂಡಿದ್ದಾರೆ.
ಮಾಗಡಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಾಲಿನ ದರ ಏರಿಕೆ ಮಾಡುತ್ತೇವೆ. ಏರಿಕೆ ಮಾಡಿದ ಹಣ ಸಂಪೂರ್ಣ ರೈತರಿಗೆ ಹೋಗಬೇಕು ಎಂದರು. ನಮ್ಮ ಸರ್ಕಾರ ಯಾವಾಗಲೂ ರೈತರ ಪರ, ಹಾಲು ಉತ್ಪಾದಕರ ಪರ, ದಲಿತರು, ಬಡವರ ಪರ ಇರುತ್ತದೆ ಎಂದು ತಿಳಿಸಿದರು.ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟವು ನಂದಿನಿ ಹಾಲಿನ ದರವನ್ನು ಜೂನ್ 25 ರಂದು ಪ್ರತಿ ಲೀಟರ್ ಹಾಲಿನ ದರ 2 ರೂ. ಹೆಚ್ಚಿಸಿತ್ತು. ಪ್ರತಿ ಲೀಟರ್ ಪ್ಯಾಕೆಟ್ ಹಾಲಿನ ದರವನ್ನ 2 ರೂ. ಹಾಗೂ ಅರ್ಧ ಲೀಟರ್ ಹಾಲಿನ ದರ 22 ರೂ. ನಿಂದ 24 ರೂ.ಗೆ ಹೆಚ್ಚಿಸಲಾಗಿತ್ತು. ಇದರ ಜೊತೆ ಪ್ಯಾಕೆಟ್ ಗಾತ್ರವನ್ನು ದೊಡ್ಡದು ಮಾಡಿತ್ತು.1,000 ಎಂಎಲ್ (1 ಲೀಟರ್) ಪ್ಯಾಕೆಟ್ ಹಾಲನ್ನು 1,050 ಎಂಎಲ್, ಅರ್ಧ ಲೀಟರ್ ಪ್ಯಾಕೆಟ್ ಅನ್ನು 550 ಎಂಎಲ್ ಹಾಲು ಸಿಗುವಂತೆ ಗಾತ್ರವನ್ನು ದೊಡ್ಡದು ಮಾಡಿತ್ತು.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.
Add a comment