ಹೂವಿನಹಡಗಲಿ: ಕರೋನ ಹಿನ್ನಲೆ ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಮೈಲಾರ ಗ್ರಾಮದಲ್ಲಿ ಸರಳವಾಗಿ ಮೈಲಾರಲಿಂಗೇಶ್ವರ ಜಾತ್ರೆ ನಡೆದಿದ್ದು, ಗೊರವಯ್ಯ ರಾಮಪ್ಪ ಬಿಲ್ಲನ್ನೇರಿ ಕಾರ್ಣಿಕವಾಣಿ ನುಡಿದಿದ್ದು, ‘ಮಳೆ ಬೆಳೆ ಸಂಪದೀತಲೇ ಪರಾಕ್’ ನುಡಿದ ಕಾರ್ಣಿಕವಾಣಿಯಾಗಿದೆ.
ಹೌದು, ಭರತ ಹುಣ್ಣಿಮೆಯ ಮೂರನೇ ದಿನದಂದು ಮೈಲಾರದಲ್ಲಿ ಗೊರವಯ್ಯನವರು ಭವಿಷ್ಯ ವಾಣಿಯನ್ನು ವರ್ಷಕ್ಕೊಮ್ಮೆ ಮಾತ್ರವೇ ನುಡಿಯುವುದರಿಂದ, ರಾಜ್ಯದ ಜನ ಈ ವಾಣಿಯನ್ನು ವರ್ಷದ ಭವಿಷ್ಯವಾಣಿ ಎಂದೇ ನಂಬಿದ್ದು, ರಾಜ್ಯದಲ್ಲಿ ಮೇಲಾರದ ಮಹಾಲಿಂಗೇಶ್ವರನ ಐತಿಹಾಸಿಕ ಕಾರ್ಣಿಕವೆಂದೇ ಪ್ರಸಿದ್ಧಿ ಪಡೆದಿದೆ.
ಮೈಲಾರ ಗೊರವಯ್ಯನ ಭವಿಷ್ಯವಾಣಿ: ವಿಶ್ಲೇಷಣೆ
ಇನ್ನು ಭರತ ಹುಣ್ಣಿಮೆಯ ಮೂರನೇ ದಿನವಾದ ಇಂದು ಮೈಲಾರದಲ್ಲಿ ಗೊರವಯ್ಯ ಬಿಲ್ಲನ್ನೇರಿ ಕಾರ್ಣಿಕವಾಣಿ ನುಡಿದಿದ್ದು, ‘ಮಳೆ ಬೆಳೆ ಸಂಪದೀತಲೇ ಪರಾಕ್’ ಎಂದು ನುಡಿದಿದ್ದಾರೆ.
ಇನ್ನು, ಈ ವಾಕ್ಯದಡಿ ಭವಿಷ್ಯವನ್ನು ನೋಡುವುದಾದರೆ, ಪ್ರಸಕ್ತ ವರ್ಷದಲ್ಲಿ ಮಳೆ, ಬೆಳೆಗಳು ಸಮೃದ್ಧಿಯಾಗಿ ಬೆಳೆಯಲಿವೆ ಎಂದು ದೇವಸ್ಥಾನದ ಧರ್ಮದರ್ಶಿ ವೆಂಕಪ್ಪಯ್ಯ ಅವರು ವಿಶ್ಲೇಷಣೆ ನೀಡಿದರು. ಇನ್ನು ಗೊರವಯ್ಯ ಅವರು 2020ರಲ್ಲೂ ಕೂಡ ಇದೇ ಕಾರ್ಣಿಕವನ್ನು ನುಡಿದಿದ್ದರು.