ಚಾಮರಾಜನಗರ: ಜಿಲ್ಲೆಯ ಪಡಗುರು ಗ್ರಾಮದಲ್ಲಿ ಗುರುವಾರ ಚಿರತೆಯನ್ನು ಹಿಡಿಯಲು ಇರಿಸಲಾಗಿದ್ದ ಪಂಜರದಲ್ಲಿ ವ್ಯಕ್ತಿಯೊಬ್ಬ ಸಿಕ್ಕಿಹಾಕಿಕೊಂಡ ಘಟನೆ ನಡೆದಿದೆ. ವ್ಯಕ್ತಿಯನ್ನು ಹನುಮಯ್ಯ ಎಂದು ಗುರುತಿಸಲಾಗಿದೆ.
ಚಿರತೆಯು ಜಾನುವಾರುಗಳ ಮೇಲೆ ದಾಳಿ ಮಾಡುತ್ತಿದೆ ಎಂಬ ಹಲವಾರು ದೂರುಗಳ ನಂತರ ಅರಣ್ಯ ಇಲಾಖೆಯು ಚಿರತೆಯನ್ನು ಹಿಡಿಯಲು ಕರುವನ್ನು ಇರಿಸಿ ಬೃಹತ್ ಪಂಜರವನ್ನು ಸಿದ್ಧಪಡಿಸಿ ಇರಿಸಿತ್ತು. ಹನುಮಂತನು ಪಂಜರದ ಒಳಗೆ ಹೋಗುತ್ತಿದ್ದಂತೆ ಬಾಗಿಲು ಮುಚ್ಚಿಕೊಂಡಿದ್ದು ಹೊರಬರಲು ಸಾಧ್ಯವಾಗಿಲ್ಲ. ಹೀಗಾಗಿ ಆತ ಐದರಿಂದ ಆರು ಗಂಟೆಗಳ ಕಾಲ ಪಂಜರದಲ್ಲಿ ಕಳೆಯಬೇಕಾಯಿತು.
ಪಂಜರದಲ್ಲಿ ಆ ವ್ಯಕ್ತಿಯನ್ನು ನೋಡಿದ ರೈತನೋರ್ವ ತಕ್ಷಣ ಸ್ಥಳೀಯರು ಮತ್ತು ಅರಣ್ಯ ಇಲಾಖೆಗೆ ಮಾಹಿತಿ ನೀಡಿದನು. ಅರಣ್ಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಆತನನ್ನು ಬಿಡುಗಡೆ ಮಾಡಿದರು.