ಕಂಚಿಕೆರೆ : ಸ್ಕೂಲ್ ಬಸ್ ಮತ್ತು ಬೈಕ್ ನಡುವೆ ಭೀಕರ ಅಪಘಾತವಾಗಿ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ಹರಪನಹಳ್ಳಿ ತಾಲೂಕು ಕಂಚಿಕೆರೆ ಗ್ರಾಮದ ಬಳಿ ನಡೆದಿದೆ.
ಹೌದು, ಬೈಕ್ ಸವಾರ ವೆಂಕಟೇಶ್ ನಾಯಕ್ (25) ಮೃತ ದುರ್ದೈಯಾಗಿದ್ದು, ಕಂಚಿಕೆರೆ ಗ್ರಾಮದ ಬಳಿ ಸ್ಕೂಲ್ ಬಸ್ ಮತ್ತು ಬೈಕ್ ನಡುವೆ ಅಪಘಾತವಾಗಿದೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಬೈಕ್ ಸವಾರನನ್ನು, ಹತ್ತಿರ ದಾವಣಗೆರೆಯ ಆಸ್ಪತ್ರೆಗೆ ಸಾಗಿಸಿದರೂ, ಯಾವುದೇ ಪ್ರಯೋಜನವಾಗದೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಇನ್ನು, ಮೃತ ಬೈಕ್ ಸವಾರ ವೆಂಕಟೇಶ್ ನಾಯಕ್ ಎಂಬುವರು ಬೆಸ್ಕಾಂ ನ ಉಚ್ಛಂಗಿದುರ್ಗ ಶಾಖೆಯಲ್ಲಿ ಕಿರಿಯ ಲೈನ್ ಮ್ಯಾನ್ (JLM) ಆಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.