ವಿಚ್ಛೇದನದ ಬಳಿಕ ಟೀಂ ಇಂಡಿಯಾ ಕ್ರಿಕೆಟರ್ ಜೊತೆ ಸಮಂತಾ? ಅಭಿಮಾನಿಗಳಲ್ಲಿ ಕುತೂಹಲ!

ಟಾಲಿವುಡ್ ನಟ ನಾಗ ಚೈತನ್ಯಾ ಅವರಿಂದ ವಿಚ್ಛೇದನ ಪಡೆದ ನಂತರ ಸಮಂತಾ ಪೂರ್ತಿ ಸಿನಿಮಾಗಳತ್ತ ಗಮನ ಹಾಯಿಸಿದ್ದಾರೆ. ನಟಿ ಸಮಂತಾ ವಿಚ್ಛೇದನದ ಕಹಿ ನೆನಪುಗಳನ್ನು ಮರೆಯಲು ಸಾಲು ಸಾಲು ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ತೆಲುಗು,…

ಟಾಲಿವುಡ್ ನಟ ನಾಗ ಚೈತನ್ಯಾ ಅವರಿಂದ ವಿಚ್ಛೇದನ ಪಡೆದ ನಂತರ ಸಮಂತಾ ಪೂರ್ತಿ ಸಿನಿಮಾಗಳತ್ತ ಗಮನ ಹಾಯಿಸಿದ್ದಾರೆ. ನಟಿ ಸಮಂತಾ ವಿಚ್ಛೇದನದ ಕಹಿ ನೆನಪುಗಳನ್ನು ಮರೆಯಲು ಸಾಲು ಸಾಲು ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ತೆಲುಗು, ತಮಿಳು, ಹಿಂದಿಯ ಜೊತೆಗೆ ವಿವಿಧ ವೆಬ್ ಸರಣಿಗಳಲ್ಲಿ ನಟಿಸಲು ಗ್ರೀನ್ ಸಿಗ್ನಲ್ ನೀಡುತ್ತಿದ್ದಾರೆ. ಈ ಕ್ರಮದಲ್ಲಿ ಇತ್ತೀಚೆಗಷ್ಟೇ ‘ಪುಷ್ಪ’ ಸಿನಿಮಾದಲ್ಲಿ ಐಟಂ ಸಾಂಗ್ ನಟಿಸಿ ಪ್ರೇಕ್ಷಕರ ಮನಗೆದ್ದಿದ್ದರು. ಈ ಹಿನ್ನಲೆಯಲ್ಲಿ ಟೀಂ ಇಂಡಿಯಾ ಕ್ರಿಕೆಟಿಗನೊಂದಿಗೆ ಸಮಂತಾ ಸ್ಕ್ರೀನ್ ಶೇರ್ ಮಾಡಲಿದ್ದಾರೆ ಎಂಬ ಮತ್ತೊಂದು ಕುತೂಹಲಕಾರಿ ಸುದ್ದಿ ವೈರಲ್ ಆಗಿದೆ.

‘ಕಥುವಕುಲ ರೆಂದು ಕಾದಲ್’ ತಮಿಳು ಚಿತ್ರವಾಗಿದ್ದು, ನಟಿ ನಯನತಾರಾ ಮತ್ತು ವಿಜಯ್ ಸೇತುಪತಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ನಯನತಾರಾ ಗೆಳೆಯ ವಿಘ್ನೇಶ್ ಶಿವನ್ ನಿರ್ದೇಶನದ ಈ ಚಿತ್ರ ಮುಕ್ತಾಯದ ಹಂತದಲ್ಲಿದೆ. ಟ್ರಯಾಂಗಲ್ ಲವ್ ಸ್ಟೋರಿಯ ಈ ಚಿತ್ರದಲ್ಲಿ ಸಮಂತಾ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಸಮಂತಾ, ನಯನತಾರಾ ಮತ್ತು ವಿಜಯ್ ಸೇತುಪತಿ ಫಸ್ಟ್ ಲುಕ್‌ಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಚಿತ್ರದಲ್ಲಿ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಶ್ರೀಶಾಂತ್ ಕೂಡ ಭಾಗಿಯಾಗಿದ್ದು, ಚಿತ್ರತಂಡ ಇತ್ತೀಚೆಗೆ ಅವರ ಲುಕ್ ರಿವೀಲ್ ಮಾಡಿದೆ.

Vijayaprabha Mobile App free

ಈ ಹಿಂದೆ ಶ್ರೀಶಾಂತ್ ಕನ್ನಡದಲ್ಲಿ ನಟ ಕೋಮಲ್ ಅಭಿನಯದ ಕೆಂಪೇಗೌಡ-೨ ಸೇರಿದಂತೆ ಕೆಲವು ಸಿನಿಮಾಗಳಲ್ಲಿ ನಟಿಸಿದ್ದರು. ಈಗ ಈ ಸಿನಿಮಾ ಮೂಲಕ ಮತ್ತೊಮ್ಮೆ ಪ್ರೇಕ್ಷಕರ ಮುಂದೆ ಬರುತ್ತಿದ್ದು,’ಕಥುವಕುಲ ರೆಂದು ಕಾದಲ್’ ಚಿತ್ರದಲ್ಲಿ ಶ್ರೀಶಾಂತ್ ಪಾತ್ರ ಬಹಳ ನಿರ್ಣಾಯಕವಾಗಿದೆಯಂತೆ. ಸ್ಟಾರ್ ಹೀರೋಯಿನ್ ಸಮಂತಾ ಜೊತೆಯಲ್ಲಿ ಶ್ರೀಶಾಂತ್ ಕೂಡ ಕೆಲವು ಪ್ರಮುಖ ದೃಶ್ಯಗಳಲ್ಲಿ ಕಾಣಿಸಿಕೊಳ್ಳಲಿದ್ದು, ಚಿತ್ರದ ಬಗ್ಗೆ ಪ್ರೇಕ್ಷಕರ ಆಸಕ್ತಿಯನ್ನು ಇಮ್ಮಡಿಗೊಳಿಸಿದೆ. ಟೀಂ ಇಂಡಿಯಾ ಆಟಗಾರ ಶ್ರೀಶಾಂತ್ ಜೊತೆಗಿನ ಸಮಂತಾ ಅಭಿನಯವನ್ನು ಬೆಳ್ಳಿತೆರೆಯಲ್ಲಿ ನೋಡುವ ಪ್ರೇಕ್ಷಕರಿಗೆ ಕುತೂಹಲವಿದ್ದು, ಸಮಂತಾ ಕಾರಣದಿಂದಲಾದರೂ ಶ್ರೀಶಾಂತ್ ಸಿನಿಮಾದ ವಿಷಯದಲ್ಲಿ ಫಾರ್ಮ್ ಗೆ ಬರುತ್ತಾರಾ ಕಾದು ನೋಡಬೇಕು.

ಇದಲ್ಲದೇ ಶ್ರೀಶಾಂತ್ ಸದ್ಯ ಇನ್ನೆರಡು ಸಿನಿಮಾಗಳಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ವರದಿಯಾಗಿದ್ದು, ಬೇಸಿಗೆಯಲ್ಲಿ ‘ಕಥುವಕುಲ ರೆಂದು ಕಾದಲ್’ ಸಿನಿಮಾ ಬಿಡುಗಡೆಯಾಗಲಿದೆ ಎಂದು ನಿರ್ಮಾಪಕರು ಘೋಷಿಸಿದ್ದಾರೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.