ಸಂತಾನಹರಣ ಶಸ್ರ್ತಚಿಕಿತ್ಸೆ ವೈಫಲ್ಯ: 5 ವರ್ಷದ ಬಳಿಕ ವೈದ್ಯನಿಗೆ ದಂಡ

ಚಿತ್ರದುರ್ಗ: ಮಹಿಳೆಯೊಬ್ಬರು ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ 5 ವರ್ಷದ ನಂತರ ಗರ್ಭಿಣಿಯಾಗಿ ಮೂರನೇ ಮಗುವಿಗೆ ಜನ್ಮ ನೀಡಿದ್ದಾರೆ. ಅವರಿಗೆ ಸಮರ್ಪಕವಾಗಿ ಆಪರೇಷನ್ ಮಾಡದ ವೈದ್ಯನಿಗೆ ಜಿಲ್ಲಾ ಗ್ರಾಹಕರ ಆಯೋಗ 55,000 ರೂ. ದಂಡ ವಿಧಿಸಿದೆ.…

ಚಿತ್ರದುರ್ಗ: ಮಹಿಳೆಯೊಬ್ಬರು ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ 5 ವರ್ಷದ ನಂತರ ಗರ್ಭಿಣಿಯಾಗಿ ಮೂರನೇ ಮಗುವಿಗೆ ಜನ್ಮ ನೀಡಿದ್ದಾರೆ. ಅವರಿಗೆ ಸಮರ್ಪಕವಾಗಿ ಆಪರೇಷನ್ ಮಾಡದ ವೈದ್ಯನಿಗೆ ಜಿಲ್ಲಾ ಗ್ರಾಹಕರ ಆಯೋಗ 55,000 ರೂ. ದಂಡ ವಿಧಿಸಿದೆ.

2014ರ ಏಪ್ರಿಲ್ 28ರಂದು ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಎರಡು ಮಕ್ಕಳ ತಾಯಿ ಲಕ್ಷ್ಮಮ್ಮ ಎನ್ನುವವರಿಗೆ ವೈದ್ಯ ಡಾ. ಕೆ.ಶಿವಕುಮಾರ್ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿದ್ದರು. ಆದರೂ ಲಕ್ಷ್ಮಮ್ಮ ಗರ್ಭಿಣಿಯಾಗಿ 2020ರ ಜನವರಿ 26 ರಂದು ಮೂರನೇ ಮಗುವಿಗೆ ಜನ್ಮ ನೀಡಿದ್ದರು.

ವೈದ್ಯರು ತಮಗೆ ಸರಿಯಾಗಿ ಶಸ್ತ್ರಚಿಕಿತ್ಸೆ ಮಾಡಿಲ್ಲ, ಹೀಗಾಗಿ ಸೂಕ್ತ ಪರಿಹಾರ ನೀಡಬೇಕು ಎಂದು 2021ರ ಫೆಬ್ರವರಿ 17 ರಂದು ಗ್ರಾಹಕರ ಆಯೋಗಕ್ಕೆ ಅವರು ದೂರು ನೀಡಿದ್ದರು. 

Vijayaprabha Mobile App free

ವಿಚಾರಣೆ ನಡೆಸಿದ ಜಿಲ್ಲಾ ಗ್ರಾಹಕರ ಆಯೋಗದ ಅಧ್ಯಕ್ಷರಾದ ಎನ್. ಕುಮಾರಿ ಮೀನಾ, ವೈದ್ಯರ ಸೇವಾ ನಿರ್ಲಕ್ಷದಿಂದ ಶಸ್ತ್ರಚಿಕಿತ್ಸೆ ವಿಫಲವಾಗಿದ್ದು, ಮಹಿಳೆಯ ಅನುಭವಿಸಿದ ಹಿಂಸೆಗೆ 30 ಸಾವಿರ ರೂ., ದೂರಿನ ಖರ್ಚು 25 ಸಾವಿರ ರೂ. ಸೇರಿ ಒಟ್ಟು 55 ಸಾವಿರ ರೂ. ದಂಡ ವಿಧಿಸುವಂತೆ ಆದೇಶ ನೀಡಿದ್ದಾರೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.

Leave a Reply