Thieves Arrest: ಮನೆ ಬೀಗ ಮುರಿದು ಚಿನ್ನಾಭರಣ ಕದ್ದೊಯ್ದವರು ಅಂದರ್!

ಬಳ್ಳಾರಿ: ಕುರುಗೋಡು ಪಟ್ಟಣದ ಯಲ್ಲಾಪುರ ಕ್ರಾಸ್‌ನ ಮನೆಯೊಂದರ ಬೀಗ ಮುರಿದು ಚಿನ್ನ-ಬೆಳ್ಳಿ ಆಭರಣಗಳನ್ನು ಕಳವು ಮಾಡಿ ಪರಾರಿಯಾಗಿದ್ದ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ. ಹೊಸಪೇಟೆ ಮೂಲದ ಕಿರಣ್ ಅಲಿಯಾಸ್ ಚಿಮ್ಮಿ, ಡಿ.ವಿಷ್ಣು ಬಂಧಿತ ಆರೋಪಿಗಳಾಗಿದ್ದು, ಇಬ್ಬರನ್ನೂ…

ಬಳ್ಳಾರಿ: ಕುರುಗೋಡು ಪಟ್ಟಣದ ಯಲ್ಲಾಪುರ ಕ್ರಾಸ್‌ನ ಮನೆಯೊಂದರ ಬೀಗ ಮುರಿದು ಚಿನ್ನ-ಬೆಳ್ಳಿ ಆಭರಣಗಳನ್ನು ಕಳವು ಮಾಡಿ ಪರಾರಿಯಾಗಿದ್ದ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ. ಹೊಸಪೇಟೆ ಮೂಲದ ಕಿರಣ್ ಅಲಿಯಾಸ್ ಚಿಮ್ಮಿ, ಡಿ.ವಿಷ್ಣು ಬಂಧಿತ ಆರೋಪಿಗಳಾಗಿದ್ದು, ಇಬ್ಬರನ್ನೂ ನ್ಯಾಯಾಂಗದ ವಶಕ್ಕೆ ನೀಡಲಾಗಿದೆ.

15 ದಿನಗಳ ಹಿಂದೆ ಕುರುಗೋಡು ಪಟ್ಟಣದ ಯಲ್ಲಾಪುರ ಕ್ರಾಸ್‌ ನಿವಾಸಿ ರಾಮಕೃಷ್ಣ ಎಂಬುವವರು ಮನೆಗೆ ಬೀಗ ಹಾಕಿ ವಾರಗಳ ಕಾಲ ಬೇರೆ ಊರಿಗೆ ತೆರಳಿದ್ದರು. ಮನೆ ಖಾಲಿ ಇರುವುದನ್ನು ಗಮನಿಸಿದ್ದ ಕಳ್ಳರು ಯಾರೂ ಇಲ್ಲದ ಸಮಯ ನೋಡಿ ಬೀಗ ಮುರಿದು ಒಳನುಗ್ಗಿದ್ದು ಮನೆಯೊಳಗಿದ್ದ 5 ಲಕ್ಷ ರೂ. ಮೌಲ್ಯದ 60 ಗ್ರಾಂ ಚಿನ್ನ ಮತ್ತು 600 ಗ್ರಾಂ ಬೆಳ್ಳಿ ಆಭರಣ ಕಳವು ಮಾಡಿಕೊಂಡು ಪರಾರಿಯಾಗಿದ್ದರು. ಈ ಬಗ್ಗೆ ಕುರುಗೋಡು ಠಾಣೆಯಲ್ಲಿ ದೂರು ದಾಖಲಾಗಿತ್ತು.

ಕಳ್ಳರ ಪತ್ತೆಗೆ ಬಳ್ಳಾರಿ ಎಸ್ಪಿ ಡಾ.ಶೋಭಾ ರಾಣಿ, ತೋರಣಗಲ್ಲು ಡಿವೈಎಸ್‌ಪಿ. ಪ್ರಸಾದ್ ಗೋಖಲೆ ಮಾರ್ಗದರ್ಶನದಲ್ಲಿ ವಿಜಯಕುಮಾರ್, ರಾಜಶೇಖರ್, ರೇವಣ ಅವರ ತಂಡ ರಚಿಸಲಾಗಿತ್ತು. ತಂಡದಲ್ಲಿ ಸಿಪಿಐ ಸಿದ್ದೇಶ್ವರ, ಮಲ್ಲಿಕಾರ್ಜುನ ಚಿನ್ನಮಾದ್ದಿ, ವಿಶ್ವನಾಥ ಕೆ.ಹಿರೇಗೌಡ, ಪಿಎಸ್‌ಐ ಸುಪ್ರೀತ್ ಪಕ್ಕೀರಪ್ಪ ಇದ್ದರು. ಮನೆ ಕಳವು ಮಾಡಿ ಪರಾರಿಯಾಗಿ ಆರೋಪಿಗಳ ಜಾಡು ಹಿಡಿದು ತನಿಖೆ ಆರಂಭಿಸಿದ್ದ ಪೋಲೀಸರು ಕಳ್ಳರನ್ನು ಕಂಬಿಯ ಹಿಂದೆ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪೊಲೀಸರ ಕಾರ್ಯಕ್ಕೆ ಎಸ್ಪಿ ಡಾ.ಶೋಭಾರಾಣಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.