ಕಾರವಾರ: ಮೀನುಗಾರಿಕೆಗೆ ತೆರಳಿದ್ದ ವೇಳೆ ನೀರಲ್ಲಿ ಕಣ್ಮರೆಯಾಗಿದ್ದ ಮೀನುಗಾರ ಶವವಾಗಿ ಪತ್ತೆಯಾದ ಘಟನೆ ಕಾರವಾರದ ಲೇಡೀಸ್ ಬೀಚ್‌ನಲ್ಲಿ ನಡೆದಿದೆ. ಗಜಾನನ ಗೌಡ ಮೀನುಗಾರಿಕೆಗೆ ತೆರಳಿದ್ದ ವೇಳೆ ನಾಪತ್ತೆಯಾಗಿ ಮೃತಪಟ್ಟ ಮೀನುಗಾರನಾಗಿದ್ದಾನೆ.
ಶುಕ್ರವಾರ ಗಜಾನನ ತಮ್ಮ ಬೋಟು ತೆಗೆದುಕೊಂಡು ಬೈತಕೋಲದಿಂದ ಮೀನುಗಾರಿಕೆಗೆ ತೆರಳಿದ್ದ. ಸಂಜೆಯಾದರೂ ಗಜಾನನ ಮನೆಗೆ ವಾಪಸ್ಸಾಗದಿದ್ದಾಗ ಕುಟುಂಬಸ್ಥರು ಆತಂಕಗೊಂಡು ಎಲ್ಲೆಡೆ ಹುಟುಕಾಟ ನಡೆಸಿದ್ದರು. ಆದರೂ ಸಹ ಆತನ ಸುಳಿವು ಸಿಕ್ಕಿಲ್ಲವಾಗಿದ್ದು, ಪೊಲೀಸರು ಹಾಗೂ ಕರಾವಳಿ ಕಾವಲುಪಡೆ ಪೊಲೀಸರಿಗೆ ಹುಡುಕಿಕೊಡುವಂತೆ ಮನವಿ ಮಾಡಿದ್ದರು.
ಶನಿವಾರ ಕರಾವಳಿ ಕಾವಲುಪಡೆ ಹಾಗೂ ಪೊಲೀಸದು ಹುಟುಕಾಟ ನಡೆಸಿದ್ದು, ಈ ವೇಳೆ ಗಜಾನನ ಅವರ ಮೃತದೇಹ ಲೇಡೀಸ್ ಬೀಚ್‌ನಲ್ಲಿ ಪತ್ತೆಯಾಗಿದೆ. ಈ ಬಗ್ಗೆ ಕಾರವಾರ ನಗರ ಠಾಣೆಯಲ್ಲಿ ನಾಪತ್ತೆ ದೂರು ದಾಖಲಾಗಿದ್ದು, ಕುಟುಂಬಸ್ಥರಿಗೆ ಮೃತದೇಹವನ್ನು ಹಸ್ತಾಂತರಿಸಲಾಗಿದೆ.