ವಿಜಯನಗರ: ಮಳೆ ಹೆಚ್ಚಾದ ಹಿನ್ನಲೆ ತಿನ್ನಲು ಏನೂ ಸಿಗದ ಕಾರಣ ದಾಳಿಂಬೆ ಎಲೆಗಳನ್ನು ಸೇವಿಸಿ ನೂರಾರು ಕುರಿಗಳು ಸಾವನ್ನಪ್ಪಿದ ದಾರುಣ ಘಟನೆ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಹಂಪಸಾಗರ ಗ್ರಾಮದಲ್ಲಿ ನಡೆದಿದ್ದು ರೈತರು ಕಂಗಾಲಾಗಿದ್ದಾರೆ.
ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಕುರಿಗಳು ಹಸಿದಿದ್ದು, ಈ ವೇಳೆ ದಾಳಿಂಬೆ ಚಿಗುರನ್ನು ತಿಂದಿದ್ದು, ಅದು ಕುರಿಗಳಿಗೆ ವಿಷವಾಗಿ ಪರಿಣಾಮಿಸಿದ್ದು ಬನ್ನಿಕಲ್ಲು ಗ್ರಾಮದ ಕರಿಬಸಪ್ಪ, ಟಿ. ಕೊಟ್ರೇಶ್, ಸಿ. ವೀರೇಶ, ಮಂಜುನಾಥ ಕರಿಬಸವ ಸಜ್ಜಿ ಎಂಬುವವರಿಗೆ ಸೇರಿದ 100 ಕ್ಕೂ ಹೆಚ್ಚು ಕುರಿಗಳು ಮೃತ ಪಟ್ಟಿದ್ದು, 30 ಕುರಿಗಳು ಅಸ್ವಸ್ಥಗೊಂಡಿದ್ದು ಪಶು ವೈದ್ಯರಿಂದ ಸ್ಥಳದಲ್ಲೇ ಚಿಕತ್ಸೆ ನೀಡಲಾಗುತ್ತಿದೆ.
ಇನ್ನು, ದಿಡೀರ್ ಒಮ್ಮೆಲೇ ನೂರಾರು ಕುರಿಗಳನ್ನು ಕಳೆದುಕೊಂಡ ಕುರಿಗಾಹಿಗಳು ಕಣ್ಣೀರಿಡುತ್ತಿದ್ದಾರೆ. ಇನ್ನು ಕುರಿಗಳು ಹೆಚ್ಚು ದಾಳಿಬೆ ಗಿಡದ ಚಿಗುರು ತಿಂದು, ಫುಡ್ ಪಾಯ್ಸನ್ನಿಂದ ಸಾವನ್ನಪ್ಪಿವೆ ಎಂದು ವೈದ್ಯರು ತಿಳಿಸಿದ್ದಾರೆ.