ಕಾರವಾರ: ಅಂದಾಜು 35-40 ವರ್ಷದ ಅಪರಿಚಿತ ಗಂಡಸು, ಹಳಿಯಾಳ ಶಹರದ ಶುಗರ್ ಫ್ಯಾಕ್ಟರಿ ರಸ್ತೆಯಲ್ಲಿ ಅಕಸ್ಮಾತಾಗಿ ಬಿದ್ದು ಅಸ್ವಸ್ಥಗೊಂಡಿದ್ದು, ಹಳಿಯಾಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಉಪಚಾರಕ್ಕೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದಾಗ ಉಪಚಾರ ಫಲಕಾರಿಯಾಗದೆ ನ.7 ರಂದು ಮೃತಪಟ್ಟಿರುತ್ತಾನೆ. ಸದ್ರಿಯವನ ಮೃತ ದೇಹವು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದ್ದು, ಈವರೆಗೂ ಆತನ ಹೆಸರು, ವಿಳಾಸ ಹಾಗೂ ವಾರಸುದಾರರ ಪತ್ತೆಯಾಗಿಲ್ಲ.
ಅಪರಿಚಿತ ಶವದ ವಿವರ: ವಯಸ್ಸು ಸುಮಾರು 40 ವರ್ಷ ಎತ್ತರ 5.1 ಅಡಿ ಎತ್ತರ, ಉದ್ದ ಮುಖ, ಸಾಧಾರಣ ಮೈಕಟ್ಟು, ಕಾಫಿ ಮತ್ತು ನೀಲಿ ಬಣ್ಣದ ಟೀ ಶರ್ಟ್ ಮತ್ತು ಬೂದು ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ. ಮೃತನ ಬಲಗೈ ಮೇಲೆ ಜೈ ಶ್ರೀ ರಾಮ್ ಎಂದು ಹಿಂದಿಯಲ್ಲಿ ಹಚ್ಚೆ ಹಾಕಿಸಿಕೊಂಡಿರುತ್ತಾನೆ.
ಈ ಮೇಲಿನ ಚಹರೆಯುಳ್ಳ ಮೃತ ದೇಹದ ಗಂಡಸಿನ ಮತ್ತು ವಾರಸುದಾರರು ಮಾಹಿತಿಯಿದ್ದಲ್ಲಿ ಹಳಿಯಾಳ ಪೊಲೀಸ್ ಠಾಣೆಯ ಪಿ.ಎಸ್.ಐ ದೂರವಾಣಿ ಸಂಖ್ಯೆ: 9480805265, ಹಳಿಯಾಳ ವೃತ್ತ ಸಿಪಿಐ ಮೊ.ನಂ: 9480805236, ದಾಂಡೇಲಿಯ ಉಪ-ವಿಭಾಗದ ಡಿಎಸ್‌ಪಿ ಮೋ.ನಂ: 9480805223 ನ್ನು ಸಂಪರ್ಕಿಸುವಂತೆ ಹಳಿಯಾಳ ಪೋಲಿಸ್ ಠಾಣೆಯ ಪಿಎಸ್‌ಐ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.