ದಾವಣಗೆರೆ: ಉನ್ನತೀಕರಿಸಿದ ಐ.ಟಿ.ಐ ಕಾಲೇಜು ಲೋಕಾರ್ಪಣೆ

ದಾವಣಗೆರೆ ಜೂನ್.20 :ಭಾರತ ಸ್ವಾತಂತ್ರ್ಯ ಅಮೃತಮಹೊತ್ಸವದ ಅಂಗವಾಗಿ ತಾಂತ್ರಿಕ ಕೇಂದ್ರಗಳನ್ನಾಗಿ ಉನ್ನತೀಕರಿಸಲಾಗಿರುವ 150ಐ.ಟಿ.ಐ ಗಳ ಲೋಕಾರ್ಪಣೆ ಕಾರ್ಯಕ್ರಮದ ಪ್ರಯುಕ್ತ ದಾವಣಗೆರೆ ಸರ್ಕಾರಿ ಐ.ಟಿ.ಐ ಕಾಲೇಜು ಉನ್ನತೀಕರಣದಶಿಲಾಫಲಕ ಅನಾವರಣವನ್ನು ಶಾಸಕರಾದ ಎಸ್.ಎ ರವೀಂದ್ರನಾಥ ಅನಾವರಣಗೊಳಿಸಿದರು. ಅಪರ…

ದಾವಣಗೆರೆ ಜೂನ್.20 :ಭಾರತ ಸ್ವಾತಂತ್ರ್ಯ ಅಮೃತಮಹೊತ್ಸವದ ಅಂಗವಾಗಿ ತಾಂತ್ರಿಕ ಕೇಂದ್ರಗಳನ್ನಾಗಿ ಉನ್ನತೀಕರಿಸಲಾಗಿರುವ 150ಐ.ಟಿ.ಐ ಗಳ ಲೋಕಾರ್ಪಣೆ ಕಾರ್ಯಕ್ರಮದ ಪ್ರಯುಕ್ತ ದಾವಣಗೆರೆ ಸರ್ಕಾರಿ ಐ.ಟಿ.ಐ ಕಾಲೇಜು ಉನ್ನತೀಕರಣದಶಿಲಾಫಲಕ ಅನಾವರಣವನ್ನು ಶಾಸಕರಾದ ಎಸ್.ಎ ರವೀಂದ್ರನಾಥ ಅನಾವರಣಗೊಳಿಸಿದರು. ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್ ಕಾಲೇಜಿನಪ್ರಾಂಶುಪಾಲರಾದ ಏಕನಾಥ ನಿರ್ಮಿತಿಕೇಂದ್ರದ ಎಸ್.ರವಿ ಕಾಲೇಜು ಉಪನ್ಯಾಸಕರು ಸೇರಿದಂತೆ ಸಿಬ್ಬಂದಿ ವರ್ಗದವರು ಉಪಸ್ಥಿತಿರಿರುವರು.

ವಿವರ: ಕರ್ನಾಟಕ ಸರ್ಕಾರವು ಟಾಟಾ ಟೆಕ್ನಾಲಜೀಸ್ ಲಿಮಿಟೆಡ್ ಮತ್ತು ಇತರೇ 20 ಉದ್ಯಮ ಪಾಲುದಾರರ ಸಹಯೋಗದೊಂದಿಗೆ ರಾಜ್ಯದ 150 ಸರ್ಕಾರಿ ಕೈಗಾರಿಕಾ ತರಬೇತಿ ಕೇಂದ್ರಗಳನ್ನು ತಾಂತ್ರಿಕ ಕೇಂದ್ರಗಳನ್ನಾಗಿ ಪರಿವರ್ತಿಸಿದೆ. ಇದು ದೇಶದಲ್ಲೇ ವಿನೂತನ ಯೋಜನೆಯಾಗಿದ್ದು, ರಾಜ್ಯಾದ್ಯಂತ ಕೈಗಾರಿಕೆ 4.0 ತಂತ್ರಜ್ಞಾನಕ್ಕೆ ಅತ್ಯಾವಶ್ಯಕವಾದ ನುರಿತ ಮಾನವ ಸಂಪನ್ಮೂಲ ಒದಗಿಸುವ ಕೋರ್ಸ್‍ಗಳ ಮೂಲಕ ವಾರ್ಷಿಕ 20,000 ಮತ್ತು ಅಲ್ಪಾವಧಿ ಕೋರ್ಸ್‍ಗಳ ಮೂಲಕ ಒಂದು ಲಕ್ಷ ನುರಿತ ಮಾನವ ಸಂಪನ್ಮೂಲವನ್ನು ಸೃಷ್ಟಿಸಲಾಗುತ್ತಿದೆ. ಇದರ ಫಲಶೃತಿಯಾಗಿ ಐಟಿಐ ವಿದ್ಯಾರ್ಥಿಗಳಿಗೆ ಕೈಗಾರಿಕೆಗಳಲ್ಲಿ ಉದ್ಯೋಗಾವಕಾಶ ಮತ್ತು ಉದ್ಯಮಶೀಲತಾ ಅವಕಾಶಗಳು ವೃದ್ಧಿಸುತ್ತಿದೆ.

ಸರ್ಕಾರವು ಕರ್ನಾಟಕ ರಾಜ್ಯದ ಆಯ್ದ 150 ಐಟಿಐ ಗಳನ್ನು ತಾಂತ್ರಿಕ ಚಟುವಟಿಕಾ ಕೇಂದ್ರಗಳನ್ನಾಗಿ ಪರಿವರ್ತಿಸಿ ಆಧುನಿಕ ಕಲ್ಪನೆಯ ಯೋಜನೆಯನ್ನು ಪ್ರಾರಂಭಿಸಿದೆ. ಒಟ್ಟಾರೆ ಈ ಕೆಳಕಂಡ ಹೊಸ ಕೋರ್ಸ್‍ಗಳನ್ನು ಅಳವಡಿಸಿದೆ. ಅವುಗಳೆಂದರೆ ಅತ್ಯಾಧುನಿಕ ತಂತ್ರಜ್ಞಾನ ವಲಯಗಳ ಸ್ವಯಂಚಾಲಿತ ಹಾಗೂ ನಿಯಂತ್ರಿತ ಕೈಗಾರಿಕಾ ಉತ್ಪನ್ನ, ವಿನ್ಯಾಸ ಹಾಗು ಋಜುವಾತು, ಅಡಿಟೀವ್ ಉತ್ಪಾದನೆ, ಕೈಗಾರಿಕಾ ರೋಬೊಟಿಕ್ಸ್ ಹಾಗೂ ಆರ್ಕ್ ವೆಲ್ಡಿಂಗ್ಸ್, ಅತ್ಯಾಧುನಿಕ ಪ್ಲಂಬಿಂಗ್, ವಾಹನ ಉತ್ಪದನಾ ಹಾಗೂ ಬ್ಯಾಟರಿ ವಾಹನಗಳು ಇಂಟರ್‍ನೆಟ್ ಆಫ್ ಥಿಂಗ್ಸ್

Vijayaprabha Mobile App free

ಈ ಸಂಸ್ಥೆಯಲ್ಲಿ ಈ ಸಾಲಿನಿಂದ ಅಡ್ವಾನ್ಸ್‍ಡ ಸಿಎನ್‍ಸಿ ಮೆಷಿನಿಂಗ್ ಟೆಕ್ನಿಷಿಯನ್, ಮೆಕ್ಯಾನಿಕ್ ಬ್ಯಾಟರಿ ಎಲೆಕ್ಟಿಕ್ ವೆಹಿಕಲ್ ಹಾಗೂ ಇಂಡಸ್ಟ್ರಿಯಲ್ ರೋಬೊಟಿಕ್ಸ್ ಮತ್ತು ಡಿಜಿಟಲ್ ಮ್ಯಾನುಫ್ಯಾಕ್ಟರಿಂಗ್ ನಂತಹ ಮೂರು ವಿಭಾಗಗಳಲ್ಲಿ ತರಬೇತಿಯನ್ನು ಪ್ರಾರಂಭಿಸಿದ್ದು ಇದರಿಂದ ಐಟಿಐ ವಿದ್ಯಾರ್ಥಿಗಳಿಗೆ ಕೈಗಾರಿಕೆಗಳಲ್ಲಿ ಉದ್ಯೋಗಾವಕಾಶ ಮತ್ತು ಉದ್ಯಮಶೀಲತಾ ಅವಕಾಶಗಳು ವೃದ್ಧಿಸುತ್ತದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.