ಕುಮಟಾ: ಸಿಡಿಲು ಬಡಿದು ಹೊರರಾಜ್ಯದ ಮೂವರು ಸೇರಿ ನಾಲ್ವರು ಗಾಯಗೊಂಡ ಘಟನೆ ತಾಲ್ಲೂಕಿನ ಗೋಕರ್ಣದಲ್ಲಿ ನಡೆದಿದೆ. ಗೋಕರ್ಣದ ಬಿದ್ರಗೇರಿ ಗ್ರಾಮದ ಓರ್ವ ಹಾಗೂ ಬಿಹಾರ ಮೂಲದ ಮೂವರು ಸಿಡಿಲು ಬಡಿತದಿಂದ ಗಾಯಗೊಂಡವರಾಗಿದ್ದಾರೆ.
ಗುರುವಾರ ಗೋಕರ್ಣದ ವಾರದ ಸಂತೆ ಮಾರುಕಟ್ಟೆಗೆ, ಇಲ್ಲಿನ ರೆಸಾರ್ಟ್ ಒಂದರಲ್ಲಿ ಕೆಲಸಕ್ಕೆ ಬಂದಿರುವ ಬಿಹಾರ ಮೂಲದ ಮೂವರು ತರಕಾರಿ ಖರೀದಿಗೆ ಬಂದಿದ್ದರು. ಈ ವೇಳೆ ಮಳೆ ಆರಂಭವಾಗಿದ್ದು, ಮೂವರು ಬಿಹಾರಿಗಳು ಹಾಗೂ ಓರ್ವ ಸ್ಥಳೀಯ ನಿವಾಸಿ ಮಳೆಯಿಂದ ಆಶ್ರಯ ಪಡೆಯಲು ಮರವೊಂದರ ಕೆಳಗೆ ನಿಂತಿದ್ದರು.
ಈ ವೇಳೆ ಮಳೆಯ ನಡುವೆ ಸಿಡಿಲು ಬಡಿದಿದ್ದು, ಮರದ ಕೆಳಗೆ ನಿಂತಿದ್ದ ನಾಲ್ವರಿಗೂ ಸಿಡಿಲು ತಾಗಿದೆ. ಪರಿಣಾಮ ನಾಲ್ವರೂ ಅಸ್ವಸ್ಥರಾಗಿ ಬಿದ್ದಿದ್ದು, ಕೂಡಲೇ ಅವರನ್ನು ಗೋಕರ್ಣದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದಾರೆ. ಗಾಯಾಳುಗಳಿಗೆ ವೈದ್ಯಾಧಿಕಾರಿ ಡಾ.ಜಗದೀಶ ಹಾಗೂ ಸಿಬ್ಬಂದಿ ಚಿಕಿತ್ಸೆ ನೀಡಿದ್ದಾರೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.
Add a comment